ಅನ್ಬಿಲ್ ಮಹೇಶ್ ಬಂಧನ 
ದೇಶ

100 ಕೋಟಿ ರೂ. ಖಾಸಗಿ ಶಾಲೆಗಳ ಹಗರಣ: ಮಾಜಿ ಶಿಕ್ಷಣ ಸಚಿವ, DMK ನಾಯಕನ ಬಂಧನ!

100 ಕೋಟಿ ಖಾಸಗಿ ಶಾಲಾ ಹಗರಣಕ್ಕೆ ಸಂಬಂಧಿಸಿದಂತೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಮತ್ತು ತಮಿಳುನಾಡು ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ: 100 ಕೋಟಿ ಖಾಸಗಿ ಶಾಲಾ ಹಗರಣಕ್ಕೆ ಸಂಬಂಧಿಸಿದಂತೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಮತ್ತು ತಮಿಳುನಾಡು ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಗ್ರೇಟರ್ ಚೆನ್ನೈ ಪೊಲೀಸರ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಈ ಬಂಧಿಸಿದೆ. ಖಾಸಗಿ ಶಾಲೆಗಳಿಗೆ ಮಾನ್ಯತೆ ಮತ್ತು ಕಾನೂನು ಅನುಮೋದನೆಗಳನ್ನು ನೀಡುವುದಕ್ಕೆ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ.

ಶಾಲಾ ಶಿಕ್ಷಣ ಸಚಿವರಾಗಿದ್ದಾಗ (2021-2026) ಶಾಶ್ವತ ಮಾನ್ಯತೆ ಮತ್ತು ಇತರ ಆಡಳಿತಾತ್ಮಕ ಅನುಮೋದನೆಗಳಿಗೆ ಬದಲಾಗಿ ಪಕ್ಷದ ನಿಧಿಯ ಹೆಸರಿನಲ್ಲಿ 1,000ಕ್ಕೂ ಹೆಚ್ಚು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಮಹೇಶ್ ಹಣವನ್ನು ಪಡೆದ ಆರೋಪವಿದೆ. ಸಿಸಿಬಿ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಆರೋಪಗಳಿವೆ. ಅನ್ಬಿಲ್ ಮಹೇಶ್ ಪೊಯ್ಯಮೋಳಿ ವಿರುದ್ಧ ED ತನಿಖೆ ನಡೆಸುತ್ತಿದೆ. ಸೆಪ್ಟೆಂಬರ್ 16ರಂದು ಚೆನ್ನೈ ಪೊಲೀಸರ ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಖಲಿಸಿದ ಎಫ್‌ಐಆರ್ ಆಧರಿಸಿ ಕೇಂದ್ರ ಸಂಸ್ಥೆ ಈ ಕ್ರಮಕೈಗೊಂಡಿದೆ. ಅಕ್ರಮ ಹಣಕಾಸು ವಹಿವಾಟು, ಹಣ ದುರುಪಯೋಗ ಮತ್ತು ಹಣ ವರ್ಗಾವಣೆ ಸೇರಿದಂತೆ ಪ್ರಕರಣದ ಕುರಿತು ಇಡಿ ಈಗ ಕೂಲಂಕಷ ತನಿಖೆ ನಡೆಸುತ್ತಿದೆ.

ದಾಳಿಯ ಸಮಯದಲ್ಲಿ ಒಟ್ಟು 118 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಆಸ್ತಿ ದಾಖಲೆಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು, 18 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳು ಸೇರಿವೆ. ಖಾಸಗಿ ಶಾಲಾ ಸಂಘದ ದೂರಿನ ಮೇರೆಗೆ ದಾಳಿ ಆರಂಭಿಸಲಾಯಿತು. ಜೂನ್‌ನಲ್ಲಿ ಬಿ.ಟಿ. ಅರಸಕುಮಾರ್ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದರು.

ಅನ್ಬಿಲ್ ಮಹೇಶ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ಈ ದಾಳಿಯನ್ನು ಅವರು ರಾಜಕೀಯ ದ್ವೇಷ ಮತ್ತು ಆಡಳಿತ ಟಿವಿಕೆಯ ದಿಕ್ಕು ತಪ್ಪಿಸುವ ತಂತ್ರ ಎಂದು ಬಣ್ಣಿಸಿದರು. 1,200 ಕೋಟಿ ವೆಚ್ಚದ ಹೊಸ ಸೆಕ್ರೆಟರಿಯೇಟ್-ಸಂವಿಧಾನ ಸಭೆ ಸಂಕೀರ್ಣವನ್ನು ನಿರ್ಮಿಸುವ ರಾಜ್ಯ ಸರ್ಕಾರದ ಯೋಜನೆಯನ್ನು ಟೀಕಿಸಿದ ಸಾರ್ವಜನಿಕ ಭಾಷಣಗಳ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಮೋದಿ ಕಾ ಬಾಪ್ ಭಿ ಜಾಯೇಗಾ": ಖರ್ಗೆ ಹೇಳಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ; ಕ್ಷಮೆಯಾಚಿಸಬೇಕು ಎಂದು ಆಗ್ರಹ!

ತಮ್ಮದೇ ಸರ್ಕಾರದ ವಿರುದ್ಧ ಉಗ್ರಪ್ಪ ವಾಗ್ದಾಳಿ: ಪ್ರಧಾನಿ ಮೋದಿ ಮುಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹ

ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ; ಪತ್ತೆಗಾಗಿ ಭಾರತೀಯ ರಾಯಭಾರ ಕಚೇರಿಗೆ ಕುಟುಂಬದ ಮನವಿ

ಬಹುತೇಕ ಮುಸ್ಲಿಮರು ಮಾಜಿ ದಲಿತರು, ಯಾವ ಕಾರಣಕ್ಕೆ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ: ಸಚಿವ ರಿಜ್ವಾನ್ ಅರ್ಷದ್

ಮದುವೆಯಾದ ಮೇಲೂ ‘ಮತ್ತೆ ಮತ್ತೆ ಮದುವೆಯಾಗೋಣವೇ?’ ಎಂದು ಕೇಳುವಷ್ಟು ಪ್ರೀತಿ ಇದೆ: ಟ್ರೋಲ್ ಬಗ್ಗೆ ರಶ್ಮಿಕಾ ಸುದೀರ್ಘ ಪೋಸ್ಟ್!