ಕೆವಿನ್ ಪೀಟರ್ಸನ್ - ಪ್ರಧಾನಿ ಮೋದಿ 
ದೇಶ

ಭಾರತದ ಅಭಿವೃದ್ಧಿಯನ್ನು ಹಾಡಿ ಹೊಗಳಿದ ಕೆವಿನ್ ಪೀಟರ್ಸನ್; ಮಾಜಿ ಕ್ರಿಕೆಟಿಗನ ಲೇಖನ ಹಂಚಿಕೊಂಡ ಪ್ರಧಾನಿ ಮೋದಿ

2003 ರಲ್ಲಿ ತಮ್ಮ ಮೊದಲ ಭೇಟಿಯ ನಂತರ ಭಾರತ ಹೇಗೆ ಬದಲಾಗಿದೆ ಎಂಬುದರ ಕುರಿತು ಪೀಟರ್ಸನ್ ವಿವರಿಸಿದ್ದಾರೆ.

ನವದೆಹಲಿ: ಭಾರತದ ಅಭಿವೃದ್ಧಿಯ ಕುರಿತು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಚಿಂತನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕ್ರೀಡೆ, ಮೂಲಸೌಕರ್ಯ, ತಂತ್ರಜ್ಞಾನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಭಾರತದ ಪ್ರಗತಿಯನ್ನು ಎತ್ತಿ ತೋರಿಸುವ ಮಾಜಿ ಕ್ರಿಕೆಟಿಗನ ಭಿಪ್ರಾಯದ ಬರಹವನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಬಗ್ಗೆ ತಮ್ಮ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿರುವ ಪೀಟರ್ಸನ್, ಸೋಮವಾರ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ "ಆಕಾಂಕ್ಷಿ, ಸಾಧಿಸುವ, ದೃಢವಾದ ಹೊಸ ಭಾರತ" ಎಂಬ ಲೇಖನದಲ್ಲಿ 2003ರಿಂದ ಭಾರತದೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

2003 ರಲ್ಲಿ ತಮ್ಮ ಮೊದಲ ಭೇಟಿಯ ನಂತರ ಭಾರತ ಹೇಗೆ ಬದಲಾಗಿದೆ ಎಂಬುದರ ಕುರಿತು ಪೀಟರ್ಸನ್ ವಿವರಿಸಿದ್ದಾರೆ.

‘ನಾನು ಮೊದಲ ಬಾರಿಗೆ 2003ರಲ್ಲಿ ಭಾರತಕ್ಕೆ ಬಂದಿದ್ದೆ. ಆಗ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಅವರು ಆಗಲೇ ಗುಜರಾತ್‌ನ ಮುಖ್ಯಮಂತ್ರಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದರು. ಇದೀಗ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ್ದಾರೆ ಎಂಬ ವಿಚಾರ ಕೇಳಿದಾಗ ನನಗೆ ಅಚ್ಚರಿಯಾಯಿತು. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ದೀರ್ಘಕಾಲ ಅಧಿಕಾರದಲ್ಲಿರುವುದು ದೊಡ್ಡ ಸಾಧನೆಯೇ ಸರಿ ಎಂದಿದ್ದಾರೆ.

ಇನ್ನು ಮೋದಿ ಅವರ ರಾಜಕೀಯ ಪಯಣವನ್ನು ಕ್ರಿಕೆಟ್‌ನ ಸುದೀರ್ಘ ಇನ್ನಿಂಗ್ಸ್‌ಗೆ ಹೋಲಿಸಿರುವ ಅವರು, ‘2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಬ್ರಿಟನ್‌ನಲ್ಲಿ ಆರು ಮಂದಿ ಪ್ರಧಾನಮಂತ್ರಿಗಳು ಬದಲಾಗಿದ್ದಾರೆ. ಭಾರತಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಕಾರಣ, ದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಲು ಸಾಧ್ಯವಾಗಿದೆ. ಭಾರತೀಯರಲ್ಲಿ, ವಿಶೇಷವಾಗಿ ಯುವಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಬಲ್ಲೆವು ಎಂಬ ನಂಬಿಕೆ ಯುವಕರಲ್ಲಿ ಬೆಳೆದಿದೆ. ತಾವು ಗಮನಿಸಿರುವ ಈ ಬದಲಾವಣೆಗೆ ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ದೊಡ್ಡ ಗುರಿಗಳನ್ನು ಸಾಧಿಸುವ ಮನೋಭಾವವೂ ಕಾರಣವಾಗಿದೆ ಎಂದು ಪೀಟರ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ

ಭಾರತದ ಹೆಚ್ಚುತ್ತಿರುವ ಕ್ರೀಡಾ ಸಾಮರ್ಥ್ಯ, ಮಹಿಳಾ ಕ್ರಿಕೆಟ್‌ನ ಏಳಿಗೆ ಹಾಗೂ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯ ಕುರಿತು ಪೀಟರ್‌ಸೆನ್ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ವನ್ಯಜೀವಿಗಳ ಸಂರಕ್ಷಣೆ ಮತ್ತು ನೈಸರ್ಗಿಕ ಪರಂಪರೆಯನ್ನು ಉಳಿಸುವ ಪ್ರಯತ್ನಗಳ ಜೊತೆಗೆ, ಭಾರತ ಬದಲಾಗುತ್ತಿರುವ ದೃಷ್ಟಿಕೋನಕ್ಕೆ ಪ್ರಧಾನಿಯವರ ನಾಯಕತ್ವವು ಹೇಗೆ ಕೊಡುಗೆ ನೀಡಿದೆ ಎಂಬುದನ್ನು ಅವರು ಗಮನಿಸಿದ್ದಾರೆ" ಎಂದು ಬರೆದಿದ್ದಾರೆ.

ಪೀಟರ್ಸನ್ ಪೋಸ್ಟ್ ಹಂಚಿಕೊಂಡ ಮೋದಿ, "ಭಾರತವು ಕ್ರೀಡೆ, ತಂತ್ರಜ್ಞಾನ ಮತ್ತು ವನ್ಯಜೀವಿ ಸಂರಕ್ಷಣೆಯ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸುತ್ತಿದೆ!" ಎಂದು 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಸಭೆಗೂ ಮುನ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು; ಇಬ್ಬರಿಗೆ ಗಾಯ: Video

ಸಿಎಂ ಶಿವಕುಮಾರ್, ಝೈದ್ ಖಾನ್‌ಗೆ ಅವಮಾನ: ಧನ್ವೀರ್ ವಿರುದ್ಧ NSUI ದೂರು; ಅಭಿಮಾನಿಗಳಿಂದ ಪ್ರತಿಭಟನೆ!

ಕೋಲ್ಕತ್ತಾ: ಗೆಳತಿಗೆ ಕಿಸ್ ಮಾಡಿದ್ದಕ್ಕೆ ಬಾಲಕ, ಆತನ ತಂದೆಗೆ ಬೆತ್ತಲೆ ಮೆರವಣಿಗೆ: ಗನ್‌ಪಾಯಿಂಟ್‌ನಲ್ಲಿ ಅಮಾನವೀಯ ಕೃತ್ಯ!

ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ; 11kv ತಂತಿ ತಗುಲಿ 65 ವರ್ಷದ ವ್ಯಕ್ತಿ ಸಾವು