ದೇಶ

ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರಿಗೆ ಹೊಡೆದಿಲ್ಲ: ಉತ್ತರ ಪ್ರದೇಶ ಚುನಾವಣಾಧಿಕಾರಿ ನವದೀಪ್‌ ರಿನ್ವಾ!

ಆದರೆ ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರನ್ನು ಹೊಡೆಯಲಿಲ್ಲ. ಇಲ್ಲದಿದ್ದರೆ ನಮ್ಮ ಮೇಲೆ ಜಾತಿವಾದದ ಜೊತೆಗೆ ಕೋಮುವಾದದ ಆರೋಪವೂ ಬರುತ್ತಿತ್ತು ಎಂದು ಹೇಳಿದ್ದಾರೆ.

ಲಕ್ನೋ: ಉತ್ತರ ಪ್ರದೇಶದಲ್ಲಿ ಮತದಾರರ ಚೀಟಿಯೊಂದರಲ್ಲಿ ‘ರಾಮ್‌ಹಿತ್ ಯಾದವ್‌’ ಎಂಬ ಹೆಸರು ‘ರಾಮ್‌ ನೇ ಯಾದವ್‌ ಕೋ ಮಾರಾ’ ಎಂದು ತಪ್ಪಾಗಿ ಮುದ್ರಣಗೊಂಡಿತ್ತು. ಇದನ್ನು ಪ್ರಶ್ನಿಸಿ ಆಪ್‌ ಸಂಸದ ಸಂಜಯ್‌ ಸಿಂಗ್‌, ‘ನಿಮ್ಮ ಕಂಪ್ಯೂಟರ್‌ ಜಾತಿವಾದಿಯೇ?’ ಎಂದು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದೀಗ ಈ ಆರೋಪಕ್ಕೆ ವ್ಯಂಗ್ಯವಾಗಿ ಉತ್ತರಿಸಿರುವ ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್‌ ರಿನ್ವಾ, ಒಂದು ತಪ್ಪು ನಡೆದಿದೆ. ಆದರೆ ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರನ್ನು ಹೊಡೆಯಲಿಲ್ಲ. ಇಲ್ಲದಿದ್ದರೆ ನಮ್ಮ ಮೇಲೆ ಜಾತಿವಾದದ ಜೊತೆಗೆ ಕೋಮುವಾದದ ಆರೋಪವೂ ಬರುತ್ತಿತ್ತು ಎಂದು ಹೇಳಿದ್ದಾರೆ. ಇದು ಆಪ್‌ ಸೇರಿ ವಿವಿಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮತದಾರರ ಚೀಟಿಯೊಂದರಲ್ಲಿ "ರಾಮ್‌ಹಿತ್ ಯಾದವ್" (Ram hit Yadav) ಎಂಬ ಹೆಸರನ್ನು "ರಾಮ್ ನೇ ಯಾದವ್ ಕೋ ಮಾರಾ" (Ram ne Yadav ko Maara - ಅಂದರೆ 'ರಾಮ್ ಯಾದವ್‌ನನ್ನು ಹೊಡೆದನು') ಎಂದು ತಪ್ಪಾಗಿ ನಮೂದಿಸಲಾಗಿತ್ತು.

ಈ ಸಂಬಂಧ 'ಎಕ್ಸ್' (X) ಜಾಲತಾಣದಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಎಎಪಿ ಮುಖಂಡ ಸಂಜಯ್ ಸಿಂಗ್, "ಜ್ಞಾನೇಶ್ ಕುಮಾರ್ ಅವರೇ, ರಾಮ್ ಕೇವಲ ಯಾದವ್‌ನನ್ನೇ ಏಕೆ ಹೊಡೆದನು? ರಾಮ್ ಸಿಂಗ್, ಪಾಠಕ್, ಅಸ್ಥಾನಾ, ಶರ್ಮಾ, ರೈ ಅಥವಾ ಬಿಷ್ಟ್ ಅವರನ್ನು ಏಕೆ ಹೊಡೆಯಲಿಲ್ಲ? ನಿಮ್ಮ ಕಂಪ್ಯೂಟರ್ ಜಾತಿವಾದಿಯೇ? ನೀವು ಯಾವುದಾದರೂ ರಾಜಕೀಯ ಪಕ್ಷದ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

'ಎಕ್ಸ್'ನಲ್ಲಿ ಉತ್ತರಿಸಿರುವ ರಿನ್ವಾ, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಕಂಡುಬಂದ ಮತ್ತೊಂದು ದೋಷವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಮತದಾರರೊಬ್ಬರ ತಂದೆಯ ಹೆಸರನ್ನು "ರಾಮ್ ನೇ ಶರ್ಮಾ ಕೋ ಮಾರಾ" (Ram ne Sharma ko Maara - ಅಂದರೆ 'ರಾಮ್ ಶರ್ಮಾನನ್ನು ಹೊಡೆದನು') ಎಂದು ತಪ್ಪಾಗಿ ದಾಖಲಿಸಲಾಗಿತ್ತು.

"ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ 'ರಾಮ್ ನೇ ಶರ್ಮಾ ಕೋ ಮಾರಾ' ಎಂಬ ವಿಚಿತ್ರ ಹೆಸರೂ ಕಂಡುಬಂದಿದೆ. ಕಂಪ್ಯೂಟರ್‌ಗಳು ಅಥವಾ ಸಾಫ್ಟ್‌ವೇರ್‌ಗಳಿಗೆ ಜಾತಿವಾದ ಇರುವುದಿಲ್ಲ," ಎಂದು ರಿನ್ವಾ ಹೇಳಿದ್ದಾರೆ.

ತಪ್ಪು ನಡೆದಿರುವುದನ್ನು ಒಪ್ಪಿಕೊಂಡಿರುವ ಉತ್ತರ ಪ್ರದೇಶದ ಸಿಇಒ, "ನಮ್ಮಿಂದ ತಪ್ಪಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಅದೃಷ್ಟವಶಾತ್, ಈ ತಪ್ಪು ಸಂಭವಿಸಿದಾಗ ಯಾವುದೇ ಜಾತಿ ತಾರತಮ್ಯ ನಡೆದಿಲ್ಲ. ದೇವರ ಕೃಪೆಯಿಂದ, 'ರಾಮ್' ಯಾವುದೇ ಅಲ್ಪಸಂಖ್ಯಾತ ವ್ಯಕ್ತಿಯನ್ನು ಹೊಡೆದಿಲ್ಲ! ಇಲ್ಲದಿದ್ದರೆ, ನಾವು ಜಾತಿವಾದದ ಆರೋಪದ ಜೊತೆಗೆ ಕೋಮು ಪ್ರಚೋದನೆಯ ಆರೋಪವನ್ನೂ ಎದುರಿಸಬೇಕಾಗುತ್ತಿತ್ತು," ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Veto ಇಲ್ಲದ ಖಾಯಂ ಸದಸ್ಯತ್ವ ‘2ನೇ ದರ್ಜೆ’ಗೆ ಸಮಾನ, ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಖಡಕ್ ಸಂದೇಶ

'ಸತ್ಯಂ ಶಿವಂ ಸುಂದರಂ': ಸುಪ್ರೀಂನಲ್ಲಿ SIR ವಿಚಾರಣೆಗೂ ಮುನ್ನ ಫೋಟೊ ಹಂಚಿಕೊಂಡ ರಾಹುಲ್ ಗಾಂಧಿ!

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ: ಸಮಸ್ಯೆ ಆಲಿಸಲು ಅ. 29 ರಂದು ಮತ್ತೊಮ್ಮೆ ಸಿಎಂ ಸಭೆ..!

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಕ್ಷಿಪಣಿಗಳ ಮಳೆಗರೆದ ಪುಟಿನ್ ಸೇನೆ, Zelenskyy ತೀವ್ರ ಆಕ್ರೋಶ..!

ಹೋಟೆಲ್ ರೂಮ್ ಹೊರಗೆ ಕುಸಿದು ಬಿದ್ದು ನವವಿವಾಹಿತೆ ಸಾವು: CCTVಯಲ್ಲಿ ಭೀಕರ ದೃಶ್ಯ ಸೆರೆ! ಕೊಲೆ ಎಂದ ಕುಟುಂಬಸ್ಥರು