ತಮ್ಮ ಆತ್ಮಕತೆಯೊಂದಿಗೆ ಸೋನಿಯಾ ಗಾಂಧಿ 
ದೇಶ

ರಾಜೀವ್ ಪ್ರಧಾನಿಯಾಗುವುದು ನನಗೆ ಇಷ್ಟವಿರಲಿಲ್ಲ: ನನ್ನ ಆತ್ಮಕತೆ ಬಿಡುಗಡೆಯಾದಾಗ ಕೋಲಾಹಲ ಖಚಿತ; ಸೋನಿಯಾ ಗಾಂಧಿ

ನವೆಂಬರ್ 10ರಂದು ತಮ್ಮ ಬಿಡುಗಡೆಯಾಗಲಿರುವುದಾಗಿ ಅವರು ತಮ್ಮ ಮೊದಲ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದರು. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ ಮಾತನಾಡಿರುವ ಅವರು, `ನನ್ನ ಪತಿಯನ್ನು ಪ್ರಧಾನಿಯಾಗುವಂತೆ ಕೇಳಿದಾಗ, ನಾನು ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದೆ.

ನವದೆಹಲಿ: ತಮ್ಮ ಪತಿ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗುವುದನ್ನು ನಾನು ವಿರೋಧಿಸಿದ್ದೆ ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕಿ ಸೋನಿಯಾ ಗಾಂಧಿ ತಿಳಿಸಿದ್ದಾರೆ. ಈ ಹಿಂದೆ ಹೇವಿಯರ್ ಮೊರೊ ಅವರ ರೆಡ್ ಸಾರಿ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಲಾಗಿದ್ದ ಅಂಶವನ್ನು ಇದೀಗ ಸ್ವತಃ ಸೋನಿಯಾ ಅವರೇ ಖಚಿತಪಡಿಸಿದ್ದಾರೆ.

ಇದೇ ವೇಳೆ ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಪುಸ್ತಕವು ಜೀವನದ ಘಟನೆಗಳ ಕುರಿತು ತಮ್ಮ ದೃಷ್ಟಿಕೋನವನ್ನು ಒದಗಿಸುವುದರಿಂದ, ಅದು ಒಂದು ರೀತಿಯ "ತಮಾಷಾ" (ಗದ್ದಲ ಅಥವಾ ಕೋಲಾಹಲ)ಕ್ಕೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 10ರಂದು ತಮ್ಮ ಬಿಡುಗಡೆಯಾಗಲಿರುವುದಾಗಿ ಅವರು ತಮ್ಮ ಮೊದಲ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದರು. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ ಮಾತನಾಡಿರುವ ಅವರು, `ನನ್ನ ಪತಿಯನ್ನು ಪ್ರಧಾನಿಯಾಗುವಂತೆ ಕೇಳಿದಾಗ, ನಾನು ಅದನ್ನು ಸಂಪೂರ್ಣವಾಗಿ ವಿರೋಧಿಸಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಜೊತೆಗೆ ತಾವು ಏಕೆ ಈ ಆತ್ಮಚರಿತ್ರೆಯನ್ನು ಬರೆಯಲು ನಿರ್ಧರಿಸಿದೆ' ಎಂಬುದನ್ನು ವಿವರಿಸುತ್ತಾ, ತಾವು ಅನುಭವಿಸಿದ ಘಟನೆಗಳನ್ನು ತಮ್ಮ ದೃಷ್ಟಿಕೋನದಿಂದ ದಾಖಲಿಸಲು ಈ ಪುಸ್ತಕವು ತಮಗೆ ಅವಕಾಶ ನೀಡಿದೆ ಎಂದು ಅವರು ಹೇಳಿದ್ದಾರೆ.

1.28 ನಿಮಿಷಗಳ ಈ ವಿಡಿಯೋದಲ್ಲಿ, ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯ ಪುಟಗಳನ್ನು ತಿರುವಿ ಹಾಕುತ್ತಾ, "ನಾನು ಸಂಪೂರ್ಣ ಕಥೆಯನ್ನು ಹೇಳಬೇಕೇ ಅಥವಾ ಬೇಡವೇ ಎಂದು ನನಗೆ ತಿಳಿಯುತ್ತಿಲ್ಲ ಎಂದು ಯೋಚಿಸುತ್ತಿರುವುದು ಕಂಡುಬರುತ್ತದೆ.

ಈ ಪುಸ್ತಕ ಓದಿದ ಮೇಲೆ ಕೆಲವರು ನನ್ನ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬಹುದು. ಇನ್ನು ಕೆಲವರ ಅಭಿಪ್ರಾಯ ಮತ್ತಷ್ಟು ಹದಗೆಡಬಹುದು, ಆದರೆ ಇರುವುದೇ ಹಾಗೆ. ಸಾರ್ವಜನಿಕ ಬದುಕಿನಲ್ಲಿರುವವರು ಪುಸ್ತಕವೊಂದನ್ನು ಬರೆದಾಗ ಎಲ್ಲ ರೀತಿಯ ಪ್ರತಿಕ್ರಿಯೆಗಳು ಬರುವುದು ಸಹಜ. ಇಲ್ಲಿ ಹೇಳುವಂತೆ, ಇದೊಂದು 'ತಮಾಷಾ' (ಗದ್ದಲ)ಕ್ಕೆ ಎಡೆಮಾಡಿಕೊಡುವುದು ಖಚಿತ," ಎಂದು ಅವರು ಹೇಳಿದರು.

ರಾಜೀವ್ ಗಾಂಧಿ ಪ್ರಧಾನಿಯಾಗುವುದಕ್ಕೆ ಸೋನಿಯಾ ವಿರೋಧ ಮಾಡಿದ್ದರ ಕುರಿತು ಜೇವಿಯರ್ ಮೊರೊ ಅವರ ‘ರೆಡ್ ಸಾರಿ’ ಎಂಬ ಕಾದಂಬರಿಯಲ್ಲಿ ಮೊದಲ ಬಾರಿಗೆ ಉಲ್ಲೇಖಿಸಲಾಗಿತ್ತು. ರಾಜೀವ್ ಗಾಂಧಿ ಅವರ ಆ ನಿರ್ಧಾರವನ್ನು ಸೋನಿಯಾ ಗಾಂಧಿ “ಮರಣದಂಡನೆ”ಯಂತೆ ಕಂಡಿದ್ದರು ಹಾಗೂ ಪ್ರಮಾಣವಚನ ಸ್ವೀಕರಿಸದಂತೆ ಕಣ್ಣೀರು ಹಾಕಿ ಅವರನ್ನು ತಡೆದಿದ್ದರು ಎಂದು ಅದರಲ್ಲಿ ವಿವರಿಸಲಾಗಿತ್ತು.

ನನ್ನ ಕುರಿತು ಅನೇಕ ಸಂಗತಿಗಳನ್ನು ಬರೆಯಲಾಗಿತ್ತು, ಅವುಗಳಲ್ಲಿ ಹೆಚ್ಚಿನವು ಸತ್ಯಕ್ಕೆ ದೂರವಾಗಿದ್ದವು ಅಥವಾ ಅತಿಶಯೋಕ್ತಿಯಿಂದ ಕೂಡಿದ್ದವು. ಹಾಗಾಗಿ ಸತ್ಯ ಘಟನೆಗಳನ್ನು ಮೂಲ ರೂಪದಲ್ಲೇ ದಾಖಲಿಸಲು ನನಗೆ ಈ ಆತ್ಮಚರಿತ್ರೆ ಅವಕಾಶ ಮಾಡಿಕೊಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

INDvsNZ: 'ಇವರ ತಡೆಯಲು ಹೊಸ ತಂತ್ರವೇ ಬೇಕು': ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video