ಪ್ರಧಾನಿ ಮೋದಿ  
ದೇಶ

MLC ಚುನಾವಣೆ: ವಾರಣಾಸಿಯ ಎರಡೂ ಸ್ಥಾನಗಳಲ್ಲಿ SP ಜಯಭೇರಿ; ಪ್ರಧಾನಿ ಮೋದಿ ಕ್ಷೇತ್ರದಲ್ಲೇ BJPಗೆ ಮುಖಭಂಗ!

ವಾರಣಾಸಿ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಮೋದ್ ಮಿಶ್ರಾ ಅವರ ವಿರುದ್ಧ ಸಮಾಜವಾದಿ ಪಕ್ಷದ ಲಾಲ್ ಬಿಹಾರಿ ಯಾದವ್ ಅವರು ಗೆಲುವಿನ ನಗೆ ಬೀರಿದ್ದಾರೆ.

ವಾರಣಾಸಿ: ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ.

ಸಮಾಜವಾದಿ ಪಕ್ಷವು ವಾರಣಾಸಿ ಶಿಕ್ಷಕರ ಕ್ಷೇತ್ರವನ್ನು(MLC ಸ್ಥಾನ) ಉಳಿಸಿಕೊಂಡಿದ್ದು, ವಾರಣಾಸಿಯ ಪದವೀಧರರ ಕ್ಷೇತ್ರದಲ್ಲಿಯೂ ನಿರ್ಣಾಯಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿ ಇದೆ.

ವಾರಣಾಸಿ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಮೋದ್ ಮಿಶ್ರಾ ಅವರ ವಿರುದ್ಧ ಸಮಾಜವಾದಿ ಪಕ್ಷದ ಲಾಲ್ ಬಿಹಾರಿ ಯಾದವ್ ಅವರು ಗೆಲುವಿನ ನಗೆ ಬೀರಿದ್ದಾರೆ.

ಚುನಾವಣೆಯಲ್ಲಿ ಲಾಲ್ ಬಿಹಾರಿ ಯಾದವ್ ಅವರು ಮೊದಲ ಪ್ರಾಶಸ್ತ್ಯದ ಮತಗಳಲ್ಲಿ 10,958 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿಯ ಪ್ರಮೋದ್ ಮಿಶ್ರಾ ಅವರು 6,060 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಈ ಮೂಲಕ ಎಸ್‌ಪಿ ಅಭ್ಯರ್ಥಿ ಬಿಜೆಪಿಗೆ ತೀವ್ರ ಮುಖಭಂಗ ತಂದೊಡ್ಡಿದ್ದಾರೆ.

ಬಿಜೆಪಿ ಒಟ್ಟಾರೆ ಐದು ಸ್ಥಾನಗಳನ್ನು ಗೆದ್ದು, ಮತ್ತೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೇಲುಗೈ ಹೊಂದಿದ್ದರೂ, ಸಮಾಜವಾದಿ ಪಕ್ಷವು ಆಗ್ರಾ ಶಿಕ್ಷಕರ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ.

ಬಿಜೆಪಿಯು ಲಖನೌ ಶಿಕ್ಷಕರ ಕ್ಷೇತ್ರ, ಮೀರತ್-ಸಹಾರನ್‌ಪುರ ಶಿಕ್ಷಕರ ಕ್ಷೇತ್ರ, ಬರೇಲಿ-ಮೊರಾದಾಬಾದ್ ಶಿಕ್ಷಕರ ಕ್ಷೇತ್ರ ಮತ್ತು ಮೀರತ್-ಸಹಾರನ್‌ಪುರ ಪದವೀಧರರ ಕ್ಷೇತ್ರಗಳಲ್ಲದೆ, ಮತ್ತೊಂದು ಸ್ಥಾನವನ್ನೂ ಗೆದ್ದುಕೊಂಡಿದೆ.

ಉತ್ತರ ಪ್ರದೇಶ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 2027ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ಫಲಿತಾಂಶ ರಾಜಕೀಯ ಪಕ್ಷಗಳಿಗೆ ಒಂದು ಪ್ರಮುಖ ಮುನ್ಸೂಚನೆ ಎಂದು ಪರಿಗಣಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

'ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗೆ ನಟಿಯರ ಮೈ ಬಣ್ಣದ ಗೀಳು; ಬಾಲಿವುಡ್‌ಗೆ ವಿದೇಶಿಯರೇ ಬೇಕು'!

ಆಂಧ್ರ ಪ್ರದೇಶದ ನರ್ಸಾಪುರ ಬಳಿ ಕರಾವಳಿ ದಾಟಿದ 'ಅರ್ನಬ್' ಚಂಡಮಾರುತ; ತೀವ್ರತೆ ಇಳಿಕೆ, ಇಬ್ಬರು ಸಾವು

ಪ್ರಾಜೆಕ್ಟ್ ಚೀತಾ ಯೋಜನೆಗೆ ಅತಿ ದೊಡ್ಡ ಹಿನ್ನೆಡೆ! ಕುನೋದಲ್ಲಿ ಬೇಟೆಗಾರರ ಗುಂಡಿಗೆ ಬಲಿಯಾಯ್ತಾ ಚೀತಾ ಮರಿ?

ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಕ್ರಮ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ