ಕರಾಚಿ ಬಂದರು (ಸಂಗ್ರಹ ಚಿತ್ರ) 
ದೇಶ

'ಚಿಂತೆ ಬೇಡ, ಪಾಕಿಸ್ತಾನದ ಬಂದರಿನಲ್ಲಿರುವ ಎಲ್ಲ 6 ಭಾರತೀಯ ನಾವಿಕರೂ ಸುರಕ್ಷಿತ': ಕೇಂದ್ರ ಸರ್ಕಾರ

‘ಕೆವರ್‌’ (KEVER) ಹೆಸರಿನ ಸಾಮಾನ್ಯ ಸರಕು ಸಾಗಣೆ ಹಡಗಿನಲ್ಲಿ ವಿನೀತ್ ಕಿಶೋರ್ ಮಿಶ್ರಾ ಸೇರಿದಂತೆ ಆರು ಭಾರತೀಯ ನಾವಿಕರು ಕರಾಚಿಯಲ್ಲಿ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ.

ನವದೆಹಲಿ: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಸರಕು ಸಾಗಣೆ ಹಡಗಿನಲ್ಲಿ ಸಿಲುಕಿರುವ ಆರು ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಕೆವರ್‌’ (KEVER) ಹೆಸರಿನ ಸಾಮಾನ್ಯ ಸರಕು ಸಾಗಣೆ ಹಡಗಿನಲ್ಲಿ ವಿನೀತ್ ಕಿಶೋರ್ ಮಿಶ್ರಾ ಸೇರಿದಂತೆ ಆರು ಭಾರತೀಯ ನಾವಿಕರು ಕರಾಚಿಯಲ್ಲಿ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಡಗಿನ ಮಾಲೀಕರು ಮತ್ತು ಬಂದರು ಅಧಿಕಾರಿಗಳ ನಡುವಿನ ವಿವಾದದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ವಿವಾದದ ನಿರ್ದಿಷ್ಟ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲವಾದರೂ ಇದೀಗ ಭಾರತೀಯ ನಾವಿಕರ ಸುರಕ್ಷತೆ ಕುರಿತು ಭಾರತೀಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಆರೂ ನಾವಿಕರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವಿಕರ ಬದಲಿಗೆ ಆರು ಮಂದಿ ಪರಿಹಾರ ಸಿಬ್ಬಂದಿಯನ್ನು ಹಡಗಿಗೆ ಹತ್ತಿಸಲು ಅಗತ್ಯವಾದ ಔಪಚಾರಿಕ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಅವರು ಹೇಳಿದ್ದಾರೆ.

ಪರಿಹಾರ ಸಿಬ್ಬಂದಿಗೆ ಅನುಮತಿ ಬಾಕಿ

ಕರಾಚಿ ಬಂದರಿನ ವೆಸ್ಟ್ ವಾರ್ಫ್‌ನ 21ನೇ ಬರ್ತ್‌ನಲ್ಲಿ ಹಡಗು ಸುರಕ್ಷಿತವಾಗಿ ನಿಂತಿದೆ. ಹಡಗಿನ ಮಾಲೀಕರು ಬಂದರು ಅಧಿಕಾರಿಗಳಿಂದ ಸಿಬ್ಬಂದಿಯನ್ನು ಹಡಗಿಗೆ ಹತ್ತಿಸಲು ಅಗತ್ಯವಾದ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರು ಮಂದಿ ಪರಿಹಾರ ನಾವಿಕರನ್ನು ಹಡಗಿಗೆ ಕಳುಹಿಸಲು ಮ್ಯಾನಿಂಗ್ ಏಜೆನ್ಸಿ ಅಗತ್ಯ ಮನವಿಯನ್ನು ಸಲ್ಲಿಸಿದೆ. ಈ ಸಿಬ್ಬಂದಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಅನುಮತಿ ದೊರೆತ ಕೂಡಲೇ ಹಡಗನ್ನು ಏರಲು ಸಿದ್ಧರಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಪರಿಹಾರ ಸಿಬ್ಬಂದಿ ಈಗಾಗಲೇ ಪಾಕಿಸ್ತಾನದ ಹೋಟೆಲ್‌ನಲ್ಲಿ ತಂಗಿದ್ದು, ಬಂದರು ಅಧಿಕಾರಿಗಳಿಂದ ಅಧಿಕೃತ ಅನುಮತಿ ದೊರೆಯುವುದಷ್ಟೇ ಬಾಕಿಯಿದೆ ಎಂದು ಅವರು ವಿವರಿಸಿದ್ದಾರೆ.

ಭಾರತೀಯ ಹೈಕಮಿಷನ್‌ ಸಂಪರ್ಕ

ಹಡಗಿನ ಮಾಲೀಕರು ಮತ್ತು ನಾವಿಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ದಿನದ 24 ಗಂಟೆಯೂ ಗಮನಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ ಸೇರಿದಂತೆ ಎಲ್ಲ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಿಎಐ ವಿಭಾಗಕ್ಕೂ (PAI Division) ಪತ್ರದ ಪ್ರತಿಯನ್ನು ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಾವಿಕರು ಸುರಕ್ಷಿತವಾಗಿದ್ದಾರೆ. ಆದರೆ, ಆರು ಮಂದಿ ಪರಿಹಾರ ಸಿಬ್ಬಂದಿ ಹಡಗನ್ನು ಏರಲು ಬಂದರು ಅಧಿಕಾರಿಗಳ ಅಧಿಕೃತ ಅನುಮತಿ ಇನ್ನೂ ದೊರೆತಿಲ್ಲ. ಅಧಿಕಾರಿಗಳಿಂದ ಯಾವುದೇ ಪ್ರಗತಿಯ ಮಾಹಿತಿ ಲಭ್ಯವಾದ ತಕ್ಷಣ ಮುಂದಿನ ವಿವರಗಳನ್ನು ನೀಡಲಾಗುವುದು ಎಂದು ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವೆಂಬರ್‌ 1ರಿಂದ ವರ್ಗಾವಣೆ ಇಲ್ಲ; ಶಿಫಾರಸು ಪತ್ರ ತಂದರೆ ಸುಮ್ಮನಿರಲ್ಲ: CM ಡಿಕೆ ಶಿವಕುಮಾರ್ ಎಚ್ಚರಿಕೆ

ರಾಜ್ಯದ ಜನತೆಗೆ ಬಿಗ್ ಶಾಕ್: ನಂದಿನ ಹಾಲಿನ ದರ ಲೀಟರ್‌ಗೆ ಬರೋಬ್ಬರಿ 8 ರೂ ಹೆಚ್ಚಳ; ನವೆಂಬರ್‌ 1 ರಿಂದಲೇ ಜಾರಿ! Video

ಮಂಗಳೂರು: ಬೇಡಿಕೊಂಡರು 40ರ ವಿವಾಹಿತ ಧರ್ಮಗುರು ಜೊತೆ ಹೋದ 22ರ ಯುವತಿ; ಬಿಕ್ಕಿಬಿಕ್ಕಿ ಅತ್ತ ಪೋಷಕರು!

ಕರ್ವಾಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video

IPL ಹಾಲಿ ಚಾಂಪಿಯನ್ RCBಯನ್ನೇ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್; ಈಗ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ!