ಕರ್ವಾಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video

ಕರವಾಚೌತ್ ಹಬ್ಬದ ಸಂದರ್ಭ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಮುಂಬೈನ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Suryakumar Yadav Poses for Paps as Wife Devisha Walks Away
ಸೂರ್ಯ ಕುಮಾರ್ ಯಾದವ್ ಮತ್ತು ಪತ್ನಿ ದೇವಿಶಾ ಶೆಟ್ಟಿ
Updated on: 

ಮುಂಬೈ: ದಂಪತಿಗಳ ಪವಿತ್ರ ಹಬ್ಬ ಎಂದೇ ಕರೆಯಲಾಗುವ ಕರ್ವಾಚೌತ್ ದಿನವೇ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ವಿರುದ್ಧ ಅವರ ಪತ್ನಿ ಮುನಿಸಿಕೊಂಡು ಹೋಗಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಕರವಾಚೌತ್ ಹಬ್ಬದ ಸಂದರ್ಭ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಮುಂಬೈನ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಆದರೆ, ದೇವಸ್ಥಾನದಿಂದ ಹೊರಬಂದ ಬಳಿಕ ನಡೆದ ಸಣ್ಣ ಘಟನೆಯಿಂದ ದೇವಿಶಾ ಕೋಪಗೊಂಡ ಘಟನೆ ನಡೆಯಿತು.

ದೇವಸ್ಥಾನದಲ್ಲಿ ದೇವರ ಆಶೀರ್ವಾದ ಪಡೆದ ಬಳಿಕ ಸೂರ್ಯಕುಮಾರ್ ಯಾದವ್ ಅವರು ಛಾಯಾಗ್ರಾಹಕರಿಗೆ ಪೋಸ್ ನೀಡಲು ನಿಂತರು.

ಆದರೆ, ಅವರ ಪತ್ನಿ ದೇವಿಶಾ ಮಾತ್ರ ಫೋಟೋಗಳಿಗೆ ಪೋಸ್ ನೀಡಲು ಆಸಕ್ತಿ ತೋರದೆ ಮುಂದೆ ಸಾಗಿದರು. ನೋಡನೋಡುತ್ತಲೇ ಬಳಿಕ ವ್ಯಾನ್‌ನಲ್ಲಿ ಕುಳಿತುಕೊಂಡರು. ಇತ್ತ ಸೂರ್ಯಕುಮಾರ್ ಮಾತ್ರ ಪತ್ನಿ ಇಲ್ಲದೆಯೇ ಛಾಯಾಗ್ರಾಹಕರಿಗೆ ಪೋಸ್ ನೀಡುವುದನ್ನು ಮುಂದುವರಿಸಿದರು.

ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Suryakumar Yadav Poses for Paps as Wife Devisha Walks Away
ಮದುವೆ ಆಗದ್ದಿದ್ದರೂ ಅಭಿಷೇಕ್ ಶರ್ಮಾ ದೀರ್ಘಾಯುಷ್ಯಕ್ಕಾಗಿ ಕರ್ವಾ ಚೌತ್ ಆಚರಿಸಿದ ಯುವತಿ; Video!

ನೆಟ್ಟಿಗರು ಫುಲ್ ಅಲರ್ಟ್

ಈ ದೃಶ್ಯವನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕರವಾಚೌತ್ ದಿನವೇ ಪತ್ನಿ ಮುನಿಸಿಕೊಂಡಿದ್ದಾರೆಯೇ ಎಂಬ ರೀತಿಯ ಹಾಸ್ಯಮಯ ಶೀರ್ಷಿಕೆಗಳೊಂದಿಗೆ ಈ ಘಟನೆ ಚರ್ಚೆಯಾಗುತ್ತಿದೆ.

ಆದರೆ, ದೇವಿಶಾ ಅವರು ಏಕೆ ಫೋಟೋಗಳಿಗೆ ಪೋಸ್ ನೀಡಲು ನಿರಾಕರಿಸಿದರು ಎಂಬುದು ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X