ಭೂತಾನ್ ನಲ್ಲಿ ಹಿಮನದಿ ಸ್ಫೋಟ 
ದೇಶ

ನೇಪಾಳ ಬಳಿಕ ಮತ್ತೊಂದು ಹಿಮನದಿ ಸರೋವರ ಸ್ಫೋಟ; ಭೂತಾನ್ ನಲ್ಲಿ ಆಗಿದ್ದೇನು? ಬಂಗಾಳ, ಅಸ್ಸಾಂನಲ್ಲಿ ಕಟ್ಟೆಚ್ಚರ!

ದುರಂತದಿಂದಾಗಿ ಬರೋಬ್ಬರಿ 74 ಲಕ್ಷ ಕ್ಯೂಬಿಕ್ ಮೀಟರ್‌ಗಿಂತಲೂ ಅಧಿಕ ನೀರು, ಕೆಸರು ಮತ್ತು ಕಲ್ಲು-ಕಸಗಳು ಕೆಳಭಾಗದ ಮೋ ಛು (Mo Chhu) ನದಿ ವ್ಯವಸ್ಥೆಗೆ ನುಗ್ಗಿವೆ.

ನವದೆಹಲಿ: ನೇಪಾಳದಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದ ಹಿಮನದಿ ಸರೋವರ ಸ್ಫೋಟ ಇದೀಗ ಭೂತಾನ್ ನಲ್ಲೂ ಭಾರಿ ಆತಂಕ ಸೃಷ್ಟಿ ಮಾಡಿದೆ.

ಭೂತಾನ್‌ನ ಶಿಂಟಾಫು ಹಿಮನದಿ ಸರೋವರ ಸ್ಫೋಟಗೊಂಡಿದ್ದು, ಉತ್ತರ ಭೂತಾನ್‌ನಲ್ಲಿ ಭೀಕರ ಹಿಮನದಿ ಸರೋವರ ಸ್ಫೋಟ (GLOF) ಸಂಭವಿಸಿದೆ. ಗಾಸಾ ಜಿಲ್ಲೆಯ ಎತ್ತರದ ಪ್ರದೇಶದಲ್ಲಿರುವ ವಾಕಿಲಾ ಪರ್ವತದ ಕೆಳಗಿನ ಶಿಂತಾಪು ಸರೋವರ (Shintaphu Lake) ತನ್ನ ನೈಸರ್ಗಿಕ ಮಣ್ಣು-ಕಲ್ಲುಗಳ ಜಲಬಂಧವನ್ನು ಒಡೆದುಕೊಂಡು ಉಕ್ಕಿ ಹರಿದಿದೆ.

ಈ ದುರಂತದಿಂದಾಗಿ ಬರೋಬ್ಬರಿ 74 ಲಕ್ಷ ಕ್ಯೂಬಿಕ್ ಮೀಟರ್‌ಗಿಂತಲೂ ಅಧಿಕ ನೀರು, ಕೆಸರು ಮತ್ತು ಕಲ್ಲು-ಕಸಗಳು ಕೆಳಭಾಗದ ಮೋ ಛು (Mo Chhu) ನದಿ ವ್ಯವಸ್ಥೆಗೆ ನುಗ್ಗಿವೆ.

ಪರಿಣಾಮ ನದಿಯ ದಡದಲ್ಲಿದ್ದ ಪ್ರಸಿದ್ಧ ಪ್ರವಾಸಿ ತಾಣವಾದ ಗಾಸಾ ತ್ಶಾಚು (Gasa Tshachu) ನೈಸರ್ಗಿಕ ಬಿಸಿ ನೀರಿನ ಕಾರಂಜಿ ಸಂಕೀರ್ಣವು ಈ ಭೀಕರ ಪ್ರವಾಹಕ್ಕೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ದುರ್ಗಮ ಲಾಯಾ (Laya) ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಪ್ರಮುಖ ಭಾಗಗಳು ಮತ್ತು ಎರಡು ಬೈಲಿ (Bailey) ಸೇತುವೆಗಳು ತೀವ್ರವಾಗಿ ಜಖಂಗೊಂಡಿದ್ದು, ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಐತಿಹಾಸಿಕ ಕೋಟೆಯಾದ ಪುನಾಖಾ ಜೊಂಗ್ (Punakha Dzong) ಅನ್ನು ಸಾರ್ವಜನಿಕರ ಭೇಟಿಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅದೃಷ್ಟವಶಾತ್, ಭೂತಾನ್ ಸರ್ಕಾರವು ಮುಂಚಿತವಾಗಿಯೇ ಅಪಾಯಕಾರಿ ಪರ್ವತ ಪ್ರದೇಶಗಳಲ್ಲಿದ್ದ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಪ್ರವಾಹದ ಆತಂಕ

ಇತ್ತ ಪ್ರವಾಹದ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಪ್ರವಾಹದ ಪರಿಣಾಮವಾಗಿ ಧುಬ್ರಿ ಜಿಲ್ಲೆಯ ಮೂಲಕ ಹರಿಯುವ ಸಂಕೋಶ್ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತವನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ.

ಅಕ್ಟೋಬರ್ 30ರ ಶುಕ್ರವಾರ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ಸಂಕೋಶ್ ನದಿಯ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇರಿಸಲಾಗಿದೆ. ನದಿಯ ಮೇಲ್ಭಾಗದಲ್ಲಿ ಉಂಟಾಗಿರುವ ದಿಢೀರ್ ಪ್ರವಾಹದ ಪರಿಣಾಮ ಕೆಳಭಾಗದ ಪ್ರದೇಶಗಳಿಗೂ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರ ಪ್ರಕಾರ, ಶುಕ್ರವಾರ ಬೆಳಗ್ಗೆ 6.30ರ ವೇಳೆಗೆ ಸಂಕೋಶ್ ನದಿಯ ನೀರಿನ ಮಟ್ಟ ಸ್ಥಿರವಾಗಿತ್ತು. ಆದರೂ ಮುಂದಿನ ಬೆಳವಣಿಗೆಗಳ ಮೇಲೆ ನಿಗಾ ಇರಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಕಚೇರಿ, "ಭೂತಾನ್‌ನಲ್ಲಿ ಸಂಭವಿಸಿರುವ ಹಿಮನದಿ ಸರೋವರ ಸ್ಫೋಟದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ನಿರಂತರವಾಗಿ ಗಮನಿಸುತ್ತಿದ್ದಾರೆ. ಧುಬ್ರಿ ಜಿಲ್ಲಾಧಿಕಾರಿ ಕಚೇರಿಯ ತಂಡ ಸ್ಥಳದಲ್ಲಿದ್ದು, ಪ್ರವಾಹದ ಕೆಳಹರಿವಿನ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ" ಎಂದು ತಿಳಿಸಿದೆ.

ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಸ್ಪಂದಿಸಲು ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ಕೇಂದ್ರದ ಎಚ್ಚರಿಕೆ

ಭೂತಾನ್‌ನ ಪುನಾತ್ಸಾಂಗ್ಚು ನದಿ ಜಲಾನಯನ ಪ್ರದೇಶದಲ್ಲಿರುವ ಶಿಂತಾಫು ಸರೋವರದಲ್ಲಿ ಹಿಮನದಿ ಸರೋವರ ಸ್ಫೋಟ (Glacial Lake Outburst Flood - GLOF) ಸಂಭವಿಸಿರುವ ಕುರಿತು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಮುನ್ನೆಚ್ಚರಿಕೆ ಸಲಹೆ (Advisory) ನೀಡಿದೆ.

ಭೂತಾನ್‌ನ ನದಿಯ ಮೇಲ್ಭಾಗದಲ್ಲಿ ದಿಢೀರ್ ಪ್ರವಾಹ ಉಂಟಾಗಿರುವುದರಿಂದ ಅಸ್ಸಾಂನ ಧುಬ್ರಿ ಹಾಗೂ ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಗಳಲ್ಲಿ ಸಂಕೋಶ್ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಹಾಗೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಧುಬ್ರಿಯಲ್ಲಿ ಜಿಲ್ಲಾಡಳಿತದ ಕಟ್ಟೆಚ್ಚರ

ಪರಿಸ್ಥಿತಿಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಖುದ್ದಾಗಿ ಗಮನಿಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ. ಧುಬ್ರಿ ಜಿಲ್ಲಾಧಿಕಾರಿ ಕಚೇರಿಯ ತಂಡ ಸ್ಥಳದಲ್ಲಿದ್ದು, ಪ್ರವಾಹದ ಪರಿಣಾಮಗಳನ್ನು ಎದುರಿಸಲು ಸನ್ನದ್ಧವಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದರೂ ತಕ್ಷಣ ಸ್ಪಂದಿಸಲು ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಭೂತಾನ್‌ನಲ್ಲಿ ಸಂಭವಿಸಿರುವ ಹಿಮನದಿ ಸರೋವರ ಸ್ಫೋಟದ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಸದ್ಯ ಸಂಕೋಶ್ ನದಿಯ ನೀರಿನ ಮಟ್ಟ ಸ್ಥಿರವಾಗಿದ್ದರೂ, ಮುಂದಿನ ಕೆಲವು ಗಂಟೆಗಳ ಬೆಳವಣಿಗೆಗಳು ನಿರ್ಣಾಯಕವಾಗಿವೆ.

ಏನಿದು ಹಿಮನದಿ ಸರೋವರ ಸ್ಫೋಟ (GLOF)?

ಪರ್ವತ ಪ್ರದೇಶಗಳಲ್ಲಿ ಹಿಮನದಿಗಳು ಕರಗುವುದರಿಂದ ದೊಡ್ಡ ಪ್ರಮಾಣದ ನೀರು ಸರೋವರಗಳಲ್ಲಿ ಸಂಗ್ರಹವಾಗುತ್ತದೆ. ಇಂತಹ ಸರೋವರಗಳಿಗೆ ನೈಸರ್ಗಿಕವಾಗಿ ರೂಪುಗೊಂಡಿರುವ ಹಿಮ ಅಥವಾ ಮಣ್ಣಿನ ತಡೆಗೋಡೆ ಒಡೆದಾಗ, ಸಂಗ್ರಹವಾಗಿರುವ ನೀರು ಏಕಾಏಕಿ ಅಪಾರ ಪ್ರಮಾಣದಲ್ಲಿ ಹೊರಹರಿಯುತ್ತದೆ.

ಇದರಿಂದ ಕೆಳಭಾಗದ ನದಿ ಪಾತ್ರಗಳಲ್ಲಿ ದಿಢೀರ್ ಪ್ರವಾಹ ಉಂಟಾಗುತ್ತದೆ. ಇದನ್ನೇ ಹಿಮನದಿ ಸರೋವರ ಸ್ಫೋಟದ ಪ್ರವಾಹ (GLOF) ಎಂದು ಕರೆಯಲಾಗುತ್ತದೆ.

ಹವಾಮಾನ ಬದಲಾವಣೆ ಹಾಗೂ ಹಿಮನದಿಗಳ ವೇಗದ ಕರಗುವಿಕೆ ಇಂತಹ ಅಪಾಯಗಳನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿವೆ. ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಇಂತಹ ಘಟನೆಗಳು ನದಿ ಪಾತ್ರದ ಜನವಸತಿ ಪ್ರದೇಶಗಳು, ರಸ್ತೆ, ಸೇತುವೆ ಹಾಗೂ ಮೂಲಸೌಕರ್ಯಗಳಿಗೆ ಗಂಭೀರ ಅಪಾಯ ತಂದೊಡ್ಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಬೆಂಗಳೂರು ಮೂಲದ ಐವರು ಪ್ರಯಾಣಿಕರು ಸೇರಿದಂತೆ ಆರು ಮಂದಿ ಸಾವು, VIDEO

ತಮಿಳುನಾಡು ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಐದು ವರ್ಷ ವಯೋಮಿತಿ ಸಡಿಲಿಕೆ ಘೋಷಿಸಿದ CM ವಿಜಯ್

ಮಂಡ್ಯ: ಅಸಭ್ಯ ಮೆಸೇಜ್ ಕಳಿಸುತ್ತಿದ್ದ ಲೆಕ್ಚರರ್'ಗೆ ವಿದ್ಯಾರ್ಥಿನಿಯರಿಂದಲೇ ಧರ್ಮದೇಟು; ಥಳಿಸಲು ಬಂದವರ ಮುಂದೆ ತಲೆ ಚಚ್ಚಿಕೊಂಡು ಹೈಡ್ರಾಮಾ!

ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಹೈಡ್ರಾಮಾ: ಪಕ್ಷದಿಂದ ಶಶಿಕಲಾ ಉಚ್ಚಾಟನೆ

Karnataka Rajyotsava Award 2026: ನಟ ಅಶೋಕ್ ಸೇರಿದಂತೆ ಈ ಬಾರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ!