ನಟ ಮಿಥುನ್ ಚಕ್ರವರ್ತಿ ಮತ್ತು ಬಂಗಾಳ ಸಿಎಂ ಸುವೇಂದು ಅಧಿಕಾರಿ 
ದೇಶ

'ಆರಾಮಾಗಿ ಮಲಗಿ, ಇನ್ನೂ 15–20 ವರ್ಷ BJP ಅಧಿಕಾರದಲ್ಲಿರುತ್ತದೆ, ಆಮೇಲೆ ನೋಡೋಣ': ಮಮತಾ ಕಾಲೆಳೆದ ನಟ Mithun Chakraborty

ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಸಲು ಉದ್ದೇಶಿಸಿರುವುದಾಗಿ ಪತ್ರಕರ್ತರು ಪ್ರಸ್ತಾಪಿಸಿದ ರ‍್ಯಾಲಿ, ಮಮತಾ ಬ್ಯಾನರ್ಜಿ ಭಾಗವಹಿಸುವಿಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ..

ಕೋಲ್ಕತಾ: ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ನಡೆಸುತ್ತಿರುವ ಪ್ರತಿಭಟನೆ ಕುರಿತು ವ್ಯಂಗ್ಯ ಮಾಡಿರುವ ಹಿರಿಯ ಬಿಜೆಪಿ ನಾಯಕ ಹಾಗೂ ನಟ ಮಿಥನ್ ಚಕ್ರವರ್ತಿ, ಬಿಜೆಪಿ ಇನ್ನೂ 15 ರಿಂದ 20 ಅಧಿಕಾರದಲ್ಲಿರುತ್ತದೆ. ಅಲ್ಲಿಯವರೆಗೂ ಆರಾಮಾಗಿ ಮಲಗಿ ಎಂದು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು INDIA ಮೈತ್ರಿಕೂಟದ ರ‍್ಯಾಲಿ ಕುರಿತು ಪ್ರತಿಕ್ರಿಯಿಸಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆಸಲು ಉದ್ದೇಶಿಸಿರುವುದಾಗಿ ಪತ್ರಕರ್ತರು ಪ್ರಸ್ತಾಪಿಸಿದ ರ‍್ಯಾಲಿ, ಮಮತಾ ಬ್ಯಾನರ್ಜಿ ಭಾಗವಹಿಸುವಿಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಪಕ್ಷಗಳ ಅಭಿಯಾನದ ಬಗ್ಗೆ ಮಿಥುನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಗಾಳದಲ್ಲಿ ಮತ್ತೆ ಟಿಎಂಸಿ ಅಧಿಕಾರಕ್ಕೆ ಬರುತ್ತದೆ. ಆಗ ಪೊಲೀಸರನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಮಿಥುನ್ ಚಕ್ರವರ್ತಿ, ಬಿಜೆಪಿ ಸರ್ಕಾರ ಇನ್ನೂ 15ರಿಂದ 20 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಎಂದು ಅವರು ಹೇಳಿದರು.

“ಹಾಗಾದರೆ ಅವರ ಸರ್ಕಾರ ಯಾವಾಗ ಅಧಿಕಾರಕ್ಕೆ ಬರಲಿದೆ? ಮೊದಲು ಅದು ಯಾವಾಗ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಹೇಳಿ. ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕುವುದರಿಂದ ಏನು ಪ್ರಯೋಜನ? ಸದ್ಯಕ್ಕೆ ನೆಮ್ಮದಿಯಿಂದ ನಿದ್ರೆ ಮಾಡಿ. ಬಿಜೆಪಿ ಸರ್ಕಾರ ಮುಂದಿನ 15-20 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ. ಆನಂತರ ನೀವು ಪೊಲೀಸ್ ಅಧಿಕಾರಿಗಳನ್ನು ಹುಡುಕಬಹುದು. ಅಷ್ಟರೊಳಗೆ ಅವರು ನಿವೃತ್ತರಾಗಿರುತ್ತಾರೆ” ಎಂದು ಮಿಥುನ್ ಚಕ್ರವರ್ತಿ ವ್ಯಂಗ್ಯವಾಡಿದ್ದಾರೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಿಥುನ್ ಚಕ್ರವರ್ತಿ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದಾರೆ. 2021ರ ಮಾರ್ಚ್‌ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು, ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Uttarakhand helicopter crash: ಹೆಲಿಕಾಪ್ಟರ್ ಛಿದ್ರ; ಐವರು ಕನ್ನಡಿಗರು ಸೇರಿದಂತೆ ಆರು ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆ!

ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ'; ನವೆಂಬರ್ 19ಕ್ಕೆ ಪ್ರದಾನ; ನಟ ರಜನಿಕಾಂತ್ ಕರೆಸಲು ಚಿಂತನೆ!

ಗೌರಿ ಲಂಕೇಶ್ ಹತ್ಯೆಯಿಂದ ಘಾಸಿಗೊಂಡ ಪ್ರಕಾಶ್ ರಾಜ್; ನಾನು ದೇವರನ್ನು ನಂಬುತ್ತೇನೆ, ಅವರು ನಂಬಲ್ಲ: ಪತ್ನಿ ಪೋನಿ ವರ್ಮಾ ಸಂವಾದ!

ಜನವರಿ 25ರಿಂದ ಜನಗಣತಿ ಆರಂಭ; ಚುನಾವಣೆ ನಡೆಯಲಿರುವ ರಾಜ್ಯಗಳು, ಹಿಮಪಾತ ಪೀಡಿತ ಪ್ರದೇಶಗಳಿಗೆ ವಿನಾಯಿತಿ

Nora Fatehi ಗೆ ಮತ್ತೆ ಸಂಕಷ್ಟ: ಸುಕೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣದಲ್ಲಿ ಪೊಲೀಸ್ ಸಮನ್ಸ್!