ಭಗವಂತ್ ಮಾನ್ 
ದೇಶ

ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್, ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!

ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ (PAC) ಸಭೆಯ ನಂತರ, ತಮ್ಮ ಹೆಸರೂ ಸೇರಿದಂತೆ ಒಟ್ಟು 40 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಮಾನ್ ತಿಳಿಸಿದ್ದಾರೆ.

ಚಂಡೀಗಢ: ಆಮ್ ಆದ್ಮಿ ಪಕ್ಷವು (ಎಎಪಿ) ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗಾಗಿ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ. ಹಾಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸ್ಪರ್ಧಿಸಲಿದ್ದಾರೆ.

ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ (PAC) ಸಭೆಯ ನಂತರ, ತಮ್ಮ ಹೆಸರೂ ಸೇರಿದಂತೆ ಒಟ್ಟು 40 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮುಖ್ಯಮಂತ್ರಿ ಮಾನ್ ತಿಳಿಸಿದ್ದಾರೆ.

ಪಂಜಾಬ್ ವಿಧಾನಸಭಾ ಚುನಾವಣೆ 2027ರ ಆರಂಭದಲ್ಲಿ ನಡೆಯಲಿದ್ದು, ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯ ಐದು ವರ್ಷಗಳ ಅವಧಿಯು 2027ರ ಮಾರ್ಚ್ 16ರಂದು ಕೊನೆಗೊಳ್ಳಲಿದೆ.

ಮುಂಬರುವ ಚುನಾವಣೆಗಾಗಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಪಕ್ಷದ ಉನ್ನತ ಮಟ್ಟದ ನಾಯಕರ ಚರ್ಚೆಯ ನಂತರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪಂಜಾಬ್ ನ ಪಕ್ಷದ ಉಸ್ತುವಾರಿ ಮನೀಶ್ ಸಿಸೋಡಿಯಾ, ನಾಯಕರಾದ ಸತ್ಯೇಂದರ್ ಜೈನ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್‌' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!

'ನಿಮ್ ಅಪ್ಪ ಬಂದಿದ್ದಾರೆ ಬಾ': LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ದಾರುಣ ಹಲ್ಲೆ, ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ, Video

Raptadu: ಮರಕತ್ತರಿಸುವ ಚೈನ್ ಸಾ ಹಿಡಿದು ಶಾಲೆಗೆ ನುಗ್ಗಿದ ದುಷ್ಕರ್ಮಿ, ಭೀಕರ ದಾಳಿ, ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ, ಓರ್ವಳ ಸ್ಥಿತಿ ಗಂಭೀರ! Video

ಜ್ಞಾನಭಾರತಿ ಬಳಿ ಸ್ಫೋಟಕ ರೀತಿಯ ವಸ್ತು ಪತ್ತೆ: ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ!

ಕರ್ವಾ ಚೌತ್ ದಿನವೇ ಪ್ರಿಯಕರನ ಜೊತೆ ಸೆ*, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ 'ಧರ್ಮದೇಟು', ಹೈಡ್ರಾಮಾ! Video