ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಅಧಿವೇಶನ 
ದೇಶ

ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಅಧಿವೇಶನ; ಜ್ಞಾನೇಶ್ ಕುಮಾರ್ ವಿರುದ್ಧ ಜನತಾ 'ಮಹಾಭಿಯೋಗ' ನಿರ್ಣಯ ಮಂಡನೆ, ಮೀರಾ ಕುಮಾರ್ ಅಧ್ಯಕ್ಷತೆ! Video

ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಈ ಕಲಾಪದ ಅಧ್ಯಕ್ಷತೆ ವಹಿಸಿದ್ದಾರೆ. ಸಂಸತ್ತು ವಾಸ್ತವವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ಮಾದರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ "ದೋಷಾರೋಪಣಾ ನಿರ್ಣಯ"ವನ್ನು ಮಂಡಿಸಿದರು.

ನವದೆಹಲಿ: ಕಾಂಗ್ರೆಸ್ ನೇತೃತ್ವದ 'ಇಂಡಿಯಾ' (INDIA) ಒಕ್ಕೂಟವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜನತಾ ಮಹಾಭಿಯೋಗ ನಿರ್ಣಯ ಅಥವಾ ಸಾರ್ವಜನಿಕ ದೋಷಾರೋಪಣೆ ((public impeachment) ಪ್ರಕ್ರಿಯೆಯನ್ನು ಆರಂಭಿಸಿದೆ. ಇತ್ತೀಚಿನ ಚುನಾವಣೆಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿರುವ ಒಕ್ಕೂಟ, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಸರ್ಕಾರ ಅಕ್ರಮವಾಗಿ ಅಧಿಕಾರ ಹಿಡಿದಿದೆ ಎಂದು ಪುನರುಚ್ಚರಿಸಿದೆ.

ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಈ ಕಲಾಪದ ಅಧ್ಯಕ್ಷತೆ ವಹಿಸಿದ್ದಾರೆ. ಸಂಸತ್ತು ವಾಸ್ತವವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ಮಾದರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ "ದೋಷಾರೋಪಣಾ ನಿರ್ಣಯ"ವನ್ನು ಮಂಡಿಸಿದರು. ಹುಲ್ಲುಹಾಸಿನ ಮೇಲೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಮೀರಾ ಕುಮಾರ್ ಅವರ ಆಸನವನ್ನು ಸ್ಪೀಕರ್ ಪೀಠದಂತೆ ಮಾಡಲಾಗಿದೆ. ಹಳೆಯ ಸಂಸತ್ ಭವನದ 'ಸೆಂಟ್ರಲ್ ಹಾಲ್' (ಕೇಂದ್ರ ಸಭಾಂಗಣ) ಮಾದರಿಯಲ್ಲಿ ವೇದಿಕೆ ಸಿದ್ಧಪಡಿಸಲಾಗಿತ್ತು. ಹಿಂದೆ ಲೋಕಸಭೆ ಮತ್ತು ರಾಜ್ಯಸಭೆಗಳು ಒಟ್ಟಾಗಿ ಸೇರುತ್ತಿದ್ದ ಸ್ಥಳವಿದು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸುತ್ತಾ, "ವಾಸ್ತವ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಾಗದ ರಾಹುಲ್ ಗಾಂಧಿ, ಈಗ ತಮಗೆ ಇಷ್ಟವಾದ ಸಂಸತ್ತಿನಲ್ಲಿ ಕುಳಿತಿದ್ದಾರೆ" ಎಂದು ವ್ಯಂಗ್ಯವಾಡಿದೆ.

ಈ ಸಾಂಕೇತಿಕ ಅಧಿವೇಶನದಲ್ಲಿ ಮುಖ್ಯಮಂತ್ರಿಗಳೂ ಉಪಸ್ಥಿತರಿದ್ದರು. ವಿರೋಧ ಪಕ್ಷಗಳು ನಡೆಸುತ್ತಿರುವ ನಿರಂತರ ಪ್ರತಿಭಟನೆಗಳ ಭಾಗವಾಗಿ, ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಇಂಡಿಯಾ' ಒಕ್ಕೂಟ ನಾಳೆ ಬೃಹತ್ Rally ಆಯೋಜಿಸಲು ಸಿದ್ಧತೆ ನಡೆಸಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ ಈ ಅಧಿವೇಶನ ನಡೆದಿದೆ. ನವೆಂಬರ್ 1 ರಂದು ನಡೆಯಲಿರುವ Rally ಗೆ 'ಕಾಕ್ರೋಚ್ ಜನತಾ ಪಾರ್ಟಿ' (Cockroach Janta Party) ಸೇರಿದಂತೆ ವಿವಿಧ ಗುಂಪುಗಳು ಬೆಂಬಲ ಘೋಷಿಸಿವೆ. ಆದರೆ, 'ಆಮ್ ಆದ್ಮಿ ಪಕ್ಷ' (AAP) ತಾನು ಈ ಒಕ್ಕೂಟದ ಭಾಗವಲ್ಲ ಎಂದು ಸ್ಪಷ್ಟಪಡಿಸಿದೆ.

ಮಹಾಭಿಯೋಗ ನಿರ್ಣಯದ ಉದ್ದೇಶ ತಿಳಿಸಿದ ಮೀರಾಕುಮಾರ್!

ಈ ಸಾಂಕೇತಿಕ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮೀರಾ ಕುಮಾರ್, "ಜನರ ಮತಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಎಂಬುದನ್ನು ನೀವು ಗಮನಿಸಿರಬಹುದು. ಪ್ರಶ್ನೆಗಳನ್ನು ಕೇಳಿದಾಗ, ಅದಕ್ಕೆ ನೀಡುವ ಉತ್ತರಗಳಲ್ಲಿ ಯಾವುದೇ ಪಾರದರ್ಶಕತೆ ಇರುವುದಿಲ್ಲ. ಇದೇ ಕಾರಣಕ್ಕಾಗಿ, ಜ್ಞಾನೇಶ್ ಕುಮಾರ್ ಅವರನ್ನು ಅವರ ಹುದ್ದೆಯಿಂದ ಕೆಳಗಿಳಿಸಲು ಈ ಮಹಾಭಿಯೋಗ ನಿರ್ಣಯ'ವನ್ನು ತರಲಾಗಿದೆ ಎಂದು ಹೇಳಿದರು.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ, ಈ ಬೆಳವಣಿಗೆಯು ಕಳವಳಕಾರಿ ಎಂದು ಅವರು ಅಭಿಪ್ರಾಯಪಟ್ಟರು. "ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ರಾಷ್ಟ್ರಗಳು ನಮ್ಮತ್ತ ನೋಡುತ್ತವೆ ಮತ್ತು ನಮ್ಮ ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುತ್ತವೆ" ಎಂದು ಅವರು ಹೇಳಿದರು.

ಮತದಾರರ ಪಟ್ಟಿಯಿಂದ ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆಯೋ, ಅವರಿಗೆ ಇಂದು ಮಾತನಾಡಲು ಅವಕಾಶವಿರುತ್ತದೆ. 'ಇಂಡಿಯಾ' (INDIA) ಒಕ್ಕೂಟದ ಸದಸ್ಯರು, ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ಕೈಬಿಡಲಾದ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ ಎಂದರು.

ಮೀರಾ ಕುಮಾರ್

ನಿರ್ಣಯ ಮಂಡಿಸಿದ ಖರ್ಗೆ ಹೇಳಿದ್ದೇನು? ನಂತರ ಖರ್ಗೆ ಎದ್ದು ನಿಂತು ಸಾಂಕೇತಿಕವಾಗಿ ನಿರ್ಣಯವನ್ನು ಮಂಡಿಸಿದರು. ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಅತ್ಯಂತ ಮೂಲಭೂತವಾದದ್ದು. ಆದರೆ ಇಂದು ಅದು ಗಂಭೀರ ಅಪಾಯದಲ್ಲಿದೆ. ಇದು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಹೋರಾಟವಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರದ ಮೇಲಿನ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು, ಆಡಳಿತಾರೂಢ ವ್ಯವಸ್ಥೆಯು ಸಾಧ್ಯವಿರುವ ಎಲ್ಲ ರೀತಿಯ ಪಿತೂರಿಗಳನ್ನು ನಡೆಸಿದೆ. ಸಂಸದರನ್ನು ಸೆಳೆದುಕೊಳ್ಳುವುದು, ರಾಜಕೀಯ ಪಕ್ಷಗಳನ್ನು ಒಡೆಯುವುದು, ಸರ್ಕಾರಗಳನ್ನು ಉರುಳಿಸುವುದು ಅಥವಾ ಕಸಿದುಕೊಳ್ಳುವುದು, ಚುನಾವಣಾ ಬಾಂಡ್ ಯೋಜನೆ, ಇಡಿ (ED) ಮತ್ತು ಸಿಬಿಐ (CBI) ನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಇವೆಲ್ಲವೂ ನಡೆದಿವೆ. ಈಗ, ಮತಗಳನ್ನೇ ಕದಿಯುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಪ್ರಮುಖ ಆರು ಅಂಶಗಳ ನಿರ್ಣಯ

ಎಸ್ ಐಆರ್ ನಂತರ 13.2 ಕೋಟಿ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಮೊದಲ ಬಾರಿಗೆ ಮತ ಚಲಾಯಿಸುವವರ ಫಾರ್ಮ್ 6 ತಿದ್ದುಪಡಿ ಮಾಡಲಾಗಿದ್ದು, ಇತರ ಇಬ್ಬರು ಚುನಾವಣಾ ಆಯುಕ್ತರ ಮಾತಿಗೆ ಮುಖ್ಯ ಆಯುಕ್ತರು ಕಿಮ್ಮತು ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಇಚ್ಚೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಸೇರಿದಂತೆ ಪ್ರಮುಖ ಆರು ನಿರ್ಣಯಗಳನ್ನು ಖರ್ಗೆ ಮಂಡಿಸಿದರು.

ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ವಜಾ ಮಾಡುವ ರೀತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ವಜಾ ಮಾಡಬೇಕಾಗಿದೆ. ಹಾಗಾಗೀ ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಅರ್ಜಿ ಸಲ್ಲಿಸಿದೆ ಎಂದು ಖರ್ಗೆ ಹೇಳಿದರು. ಅಲ್ಲದೇ ಈ ವರ್ಷದ ಆರಂಭದಲ್ಲಿ ಚುನಾವಣಾ ಆಯೋಗದ ವಜಾ ಕೋರಿ ಸಂಸತ್ತಿನ ಉಭಯ ಸದನಗಳಲ್ಲಿ 193 ವಿರೋಧ ಪಕ್ಷಗಳು ನಿರ್ಣಯ ಮಂಡಿಸಿದ್ದೇವು. ಇದಕ್ಕಾಗಿ ಸಿಇಸಿ ವಿರುದ್ಧ ಜನತಾ ಮಹಾಭಿಯೋಗ ಮಂಡಿಸುತ್ತಿದ್ದೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್ ಆಪರೇಷನ್: ಕೃಪಾ ಆಳ್ವರನ್ನು ಪಕ್ಷದಿಂದ ಉಚ್ಚಾಟಿಸಿದ ಕ್ರಮ ಸಮರ್ಥಿಸಿಕೊಂಡ ರಾಜಾಧ್ಯಕ್ಷ ಬಿಕೆ ಹರಿಪ್ರಸಾದ್

ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್, ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!

ಪರೀಕ್ಷೆಗೂ ಮುನ್ನ 6ನೇ ಮಹಡಿಯಿಂದ ಜಿಗಿದು MBA ವಿದ್ಯಾರ್ಥಿನಿ ಆತ್ಮಹತ್ಯೆ!

ಜೈಲಿನಿಂದ ಬಿಡಿಸಿಕೊಂಡು ಬಂದ ಒಂದೇ ದಿನಕ್ಕೆ ತಾಯಿಯನ್ನೇ ಇರಿದು ಕೊಂದ ಮಗ!

ಬೆಂಗಳೂರಿಗೂ ವಿಸ್ತರಿಸಿದ ಕೌಟುಂಬಿಕ ಕಲಹ: ಶರ್ಮಿಳಾ ಮಗಳ ಮದುವೆಗೆ 'ಯಲಹಂಕ ಪ್ಯಾಲೇಸ್‌' ನೀಡಲು ಜಗನ್ ನಕಾರ; ಬೇರೆ ಸ್ಥಳದಲ್ಲಿ ಮದುವೆ!