ಒಮರ್ ಅಬ್ದುಲ್ಲಾ - ನಿಧಿ 
ದೇಶ

ವಿಚ್ಛೇದನ ಬೆನ್ನಲ್ಲೇ 2ನೇ ಮದುವೆಯಾದ ಒಮರ್ ಅಬ್ದುಲ್ಲಾ; ಪತ್ರಕರ್ತೆ ನಿಧಿ ಕೈಹಿಡಿದ ಕಾಶ್ಮೀರ CM!

56 ವರ್ಷದ ಒಮರ್ ಅಬ್ದುಲ್ಲಾ ಅವರು, "ನಿನ್ನೆ ಒಂದು ಹೊಸ ಜೀವನ ಆರಂಭವಾಯಿತು..." ಎಂದು ಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ ಜೊತೆಗಿನ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಮ್ಮಿಂದ ಬೇರೆಯಾದ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ ವಿಚ್ಛೇದನ ಪಡೆದ ಬೆನ್ನಲ್ಲೇ ಶುಕ್ರವಾರ ಪತ್ರಕರ್ತೆ ನಿಧಿ ರಜ್ದಾನ್‌ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ.

56 ವರ್ಷದ ಒಮರ್ ಅಬ್ದುಲ್ಲಾ ಅವರು, "ನಿನ್ನೆ ಒಂದು ಹೊಸ ಜೀವನ ಆರಂಭವಾಯಿತು..." ಎಂದು ಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ ಜೊತೆಗಿನ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

ಈ ಹಿಂದೆ ಸುಪ್ರೀಂ ಕೋರ್ಟ್ ನಿಮ್ಮ ವೈವಾಹಿಕ ಸಮಸ್ಯೆಗಳನ್ನು ಒಟ್ಟಿಗೆ ಕುಳಿತು ಪರಿಹರಿಸಿಕೊಳ್ಳಲು ಯತ್ನಿಸುವಂತೆ ನಿರ್ದೇಶನ ನೀಡಿತ್ತು.

ನವದೆಹಲಿಯಲ್ಲಿ ಶುಕ್ರವಾರ 'ವಿಶೇಷ ವಿವಾಹ ಕಾಯ್ದೆ'ಯ (Special Marriage Act) ಅಡಿಯಲ್ಲಿ ಒಮರ್ ಅಬ್ದುಲ್ಲಾ - ನಿಧಿ ರಜ್ದಾನ್ ಅವರ ವಿವಾಹ ನೆರವೇರಿತು. ಈ ಸಂದರ್ಭದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು ಸಾಕ್ಷಿಗಳಾಗಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ಯಾರು ಈ ನಿಧಿ?

ಖಾಸಗಿ ಇಂಗ್ಲೀಷ್ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ನಿಧಿ, ವರದಿಗಾರಿಕೆ ಮೂಲಕವೂ ಜನಪ್ರಿಯತೆ ಗಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜಕೀಯ, ಭದ್ರತೆ ಹಾಗೂ ಸಾಮಾಜಿಕ ವಿದ್ಯಮಾನಗಳ ಕುರಿತು ದಶಕಗಳಿಂದ ನಿರಂತರವಾಗಿ ವರದಿ ಮಾಡುತ್ತಾ ಬಂದಿರುವ ನಿಧಿ ರಜ್ದಾನ್ ಅವರಿಗೆ ಕಣಿವೆ ರಾಜ್ಯದ ಆಡಳಿತ ಮತ್ತು ರಾಜಕೀಯ ಸಮೀಕರಣಗಳನ್ನು ಹತ್ತಿರದಿಂದ ನೋಡಿದ್ದಾರೆ.

ಮೊದಲ ಪತ್ನಿಯಿಂದ ವಿಚ್ಛೇದನ

ಒಮರ್ ಅಬ್ದುಲ್ಲಾ ಅವರು ತಮ್ಮಿಂದ ಬೇರೆಯಾದ ಪತ್ನಿ ಪಾಯಲ್ ಅಬ್ದುಲ್ಲಾ ಅವರಿಂದ ವಿಚ್ಛೇದನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಜುಲೈನಲ್ಲಿ ಸುಪ್ರೀಂ ಕೋರ್ಟ್, ಒಮರ್ ಅಬ್ದುಲ್ಲಾ ಅವರಿಗೆ ವಿಚ್ಛೇದನ ಮಂಜೂರು ಮಾಡಿತ್ತು.

15 ವರ್ಷಗಳಿಂದ ಪತ್ನಿಯಿಂದ ದೂರ ಇರುವ ಒಮರ್ ಅಬ್ದುಲ್ಲಾ ಅವರಿಗೆ ವಿಚ್ಛೇದನ ನೀಡಲು 2016 ರಲ್ಲಿ ಕೌಟುಂಬಿಕ ನ್ಯಾಯಾಲಯ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಸಿಎಂ ಸಲ್ಲಿಸಿದ್ದ ಮೇಲ್ಮನವಿಯನ್ನು ಡಿಸೆಂಬರ್ 12, 2023 ರಂದು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖರ್ಗೆ ನಿವಾಸದಲ್ಲಿ ಅಣಕು ಸಂಸತ್ ಅಧಿವೇಶನ; ಜ್ಞಾನೇಶ್ ಕುಮಾರ್ ವಿರುದ್ಧ ಜನತಾ 'ಮಹಾಭಿಯೋಗ' ನಿರ್ಣಯ ಮಂಡನೆ, ಮೀರಾ ಕುಮಾರ್ ಅಧ್ಯಕ್ಷತೆ! Video

2027ರ ಜನವರಿಯೊಳಗೆ ಜಿಪಂ, ತಾಪಂ ಚುನಾವಣೆ ಖಚಿತ- ಸಚಿವ ಈಶ್ವರ್‌ ಖಂಡ್ರೆ

ನಿರ್ದೇಶಕ Ram Gopal Varmaಗೆ ಸಂಕಷ್ಟ: ಕೂಡಲೇ ₹29.67 ಕೋಟಿ ಪಾವತಿಸುವಂತೆ ನೋಟಿಸ್, ವ್ಯವಹರಿಸದಂತೆ ಚಿತ್ರರಂಗಕ್ಕೂ ಎಚ್ಚರಿಕೆ!

ಸ್ಟಿಂಗ್ ಆಪರೇಷನ್: ಕೃಪಾ ಆಳ್ವರನ್ನು ಪಕ್ಷದಿಂದ ಉಚ್ಚಾಟಿಸಿದ ಕ್ರಮ ಸಮರ್ಥಿಸಿಕೊಂಡ ರಾಜ್ಯಾಧ್ಯಕ್ಷ ಬಿಕೆ ಹರಿಪ್ರಸಾದ್

ಪಂಜಾಬ್ ಚುನಾವಣೆ: ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 40 ಮಂದಿಗೆ ಟಿಕೆಟ್, ಧುರಿಯಿಂದ ಭಗವಂತ್ ಮಾನ್ ಕಣಕ್ಕೆ!