ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ 
ದೇಶ

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಗೆ ಜೀವ ಬೆದರಿಕೆ: ತನಿಖೆ ನಡೆಸಲು ಗೃಹ ಸಚಿವಾಲಯಕ್ಕೆ ಒತ್ತಾಯ!

ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥರಾಗಿರುವ ಪಾಸ್ವಾನ್ ಅವರು ಪ್ರಸ್ತುತ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾಗಿದ್ದಾರೆ.

ನವದೆಹಲಿ: ಝಡ್ (Z) ಶ್ರೇಣಿಯ ಭದ್ರತೆ ಹೊಂದಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಭಯೋತ್ಪಾದಕರಿಂದ ಹತ್ಯೆ ಮಾಡಲಾಗುವುದು ಎಂಬ ಬೆದರಿಕೆ ಸಂದೇಶಗಳು ಮಂಗಳವಾರ ಬಂದಿವೆ.

ಈ ಹಿನ್ನೆಲೆಯಲ್ಲಿ ಅವರ ಕಚೇರಿಯು ಹೆಚ್ಚಿನ ಭದ್ರತೆಗಾಗಿ ಹಾಗೂ ಈ ವಿಷಯದ ಕುರಿತು ಸಮಗ್ರ ತನಿಖೆ ನಡೆಸುವಂತೆ ಗೃಹ ಸಚಿವಾಲಯವನ್ನು ಒತ್ತಾಯಿಸಿದೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥರಾಗಿರುವ ಪಾಸ್ವಾನ್ ಅವರು ಪ್ರಸ್ತುತ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾಗಿದ್ದಾರೆ.

"ಇಂದು ಸಚಿವಾಲಯಕ್ಕೆ ಸಹಿ ಇಲ್ಲದ ಸಂದೇಶವೊಂದು ಬಂದಿದ್ದು, ಅದರಲ್ಲಿ ಎರಡು ಮೊಬೈಲ್ ಸಂಖ್ಯೆಗಳಿದ್ದವು. ಅದನ್ನು ತೆರೆದು ನೋಡಿದಾಗ, ಅದರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರ ಜೀವಕ್ಕೆ ನೇರ ಬೆದರಿಕೆ ಇರುವುದು ಕಂಡುಬಂದಿದೆ.

ಅದರಲ್ಲಿ ಮೊಬೈಲ್ ಸಂಖ್ಯೆ ಹೊರತುಪಡಿಸಿ, ಕಠೋರ ಭಯೋತ್ಪಾದಕರಿಂದ ನಿಮ್ಮನ್ನು ಶೀಘ್ರದಲ್ಲೇ ಕೊಲ್ಲಲಾಗುವುದು ಎಂದು ಸಂದೇಶದಲ್ಲಿ ಬರೆಯಲಾಗಿತ್ತು ಎಂದು ಪಾಸ್ವಾನ್ ಅವರ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಅಲೋಕ್ ಕುಮಾರ್ ಸಿಂಗ್, ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬೆದರಿಕೆಯ ನೇರ ಸ್ವರೂಪ ಮತ್ತು 'ಕಠೋರ ಭಯೋತ್ಪಾದಕರು' ಎಂಬ ಉಲ್ಲೇಖವು ತೀವ್ರ ಕಳವಳಕಾರಿ ವಿಷಯವಾಗಿದ್ದು, ಸಚಿವರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಗಂಭೀರ ಆತಂಕವನ್ನು ಉಂಟುಮಾಡಿದೆ ಎಂದು ಅವರು ಅಲೋಕ್ ಕುಮಾರ್ ಸಿಂಗ್ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ 'ಮುಡಾ' ಸಂಕಷ್ಟ: ‘ಬಿ’ ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ED

2 ಲಕ್ಷ ಕೋಟಿ ರೂ.ಗೆ ತಲುಪಿದ ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹ: ಶೇ.15 ರಷ್ಟು ಹೆಚ್ಚಳ!

ಅಫ್ಘಾನ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ; ಬುಮ್ರಾ, ರಾಣಾ ಕಮ್​ಬ್ಯಾಕ್!

KPSC ಕಿಂಗ್ ಪಿನ್ ಕನ್ನಾಳೆ ಬಾಯಿಗೆ ಸ್ವೀಟ್ ತಿನ್ನಿಸಿದ ಸಚಿವ ಈಶ್ವರ ಖಂಡ್ರೆ: ಸ್ಪಷ್ಟನೆಗೆ ಭಗವಂತ ಖೂಬಾ ಆಗ್ರಹ

ಐರ್ಲೆಂಡ್‌ನಲ್ಲಿ 440 ಎಕರೆ ವಿಸ್ತೀರ್ಣದ ಕೋಟೆ ಖರೀದಿಸಿದ ಮಾರ್ಕ್ ಜುಕರ್‌ಬರ್ಗ್! ಇದರ ವಿಶಿಷ್ಟತೆ, ಬೆಲೆ ಎಷ್ಟು ಗೊತ್ತಾ?