ವೃದ್ಧೆ ಮಹಿಳೆಯೊಂದಿಗೆ ಸಿಎಂ ವಿಜಯ್ 
ದೇಶ

ವೃದ್ಧೆಗೆ ದುಬಾರಿ 'ಡಿಯೋರ್' ಬ್ರಾಂಡ್ ನ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ ಸಿಎಂ ವಿಜಯ್! Video

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 'ಸಾಂಬಾ' ಭತ್ತದ ಕೃಷಿಗಾಗಿ ನೀರು ಬಿಡುಗಡೆ ಮಾಡಲು ಮೆಟ್ಟೂರು ಅಣೆಕಟ್ಟಿನ ಗೇಟ್‌ ಓಪನ್ ಮಾಡುವ ಕಾರ್ಯಕ್ರಮಕ್ಕಾಗಿ ವಿಜಯ್ ಸೇಲಂ ಜಿಲ್ಲೆಗೆ ಆಗಮಿಸಿದ್ದರು.

ಮೆಟ್ಟೂರು: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಮೆಟ್ಟೂರಿಗೆ ಭೇಟಿ ನೀಡಿದಾಗ ಅತ್ಯಂತ ಹೃದಯಸ್ಪರ್ಶಿ ಕೆಲಸವೊಂದನ್ನು ಮಾಡಿದರು. ಈ ಭೇಟಿ ವೇಳೆ ವೃದ್ಧೆಯೊಬ್ಬರಿಗೆ ತಮ್ಮ 'ಡಿಯೋರ್' (Dior) ಬ್ರಾಂಡ್‌ನ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದರು.

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 'ಸಾಂಬಾ' ಭತ್ತದ ಕೃಷಿಗಾಗಿ ನೀರು ಬಿಡುಗಡೆ ಮಾಡಲು ಮೆಟ್ಟೂರು ಅಣೆಕಟ್ಟಿನ ಗೇಟ್‌ ಓಪನ್ ಮಾಡುವ ಕಾರ್ಯಕ್ರಮಕ್ಕಾಗಿ ವಿಜಯ್ ಸೇಲಂ ಜಿಲ್ಲೆಗೆ ಆಗಮಿಸಿದ್ದರು. 'ಸಾಂಬಾ' ತಮಿಳುನಾಡಿನಲ್ಲಿ ಬೆಳೆಯಲಾಗುವ ಪ್ರಮುಖ ಭತ್ತದ ಬೆಳೆಯಾಗಿದೆ.

ಅಧಿಕೃತ ಕಾರ್ಯಕ್ರಮಗಳ ನಡುವೆ ವೃದ್ಧೆಯೊಬ್ಬರೊಂದಿಗೆ ಅವರು ನಡೆಸಿದ ಕಿರು ಮಾತುಕತೆಯೂ ಈ ಭೇಟಿಯ ಅತ್ಯಂತ ಗಮನಾರ್ಹ ಕ್ಷಣಗಳಲ್ಲಿ ಒಂದಾಗಿ ಉಳಿಯಿತು. ಮುಖ್ಯಮಂತ್ರಿ ತಮ್ಮ ಕನ್ನಡಕ ತೆಗೆದು ಆ ವೃದ್ಧೆಗೆ ಉಡುಗೊರೆಯಾಗಿ ನೀಡಿದರು. ಬಳಿಕ ಆ ವೃದ್ಧೆ ದೊಡ್ಡ ಗಾತ್ರದ ಕನ್ನಡಕವನ್ನು ಧರಿಸಿ, ಸಿಎಂ ಕೈ ಹಿಡಿದುಕೊಂಡು ಅವರ ಪಕ್ಕದಲ್ಲಿ ನಡೆಯುತ್ತಿರುವುದು ಕಂಡುಬಂದಿತು.

ಸಿಎಂ ವಿಜಯ್ ಅವರಿಂದ ಗಿಫ್ಟ್ ಪಡೆದಿದ್ದಕ್ಕೆ ಮಹಿಳೆ ಚೆಲ್ಲಂ ಸಂತಸ ವ್ಯಕ್ತಪಡಿಸಿದರು. ಸಿಎಂ ಬಂದು ನನ್ನ ಪಕ್ಕದಲ್ಲಿ ನಿಂತಾಗ ನನಗೆ ಆಶ್ಚರ್ಯವಾಯಿತು. ಅವರನ್ನು ನೋಡಿ ನನಗೆ ಎಷ್ಟು ಸಂತೋಷವಾಯಿತು ಎಂದು ನಾನು ಅವರಿಗೆ ಹೇಳಿದೆ, ಆಗ ಅವರು ನನಗೆ ಕನ್ನಡಕವನ್ನು ಉಡುಗೊರೆಯಾಗಿ ನೀಡಿದರು ಎಂದು ತಿಳಿಸಿದರು. ವಿಜಯ್ ಜನಸಂದಣಿಯ ನಡುವೆ ಆಕೆಯನ್ನು ಕರೆದೊಯ್ಯುತ್ತಿದ್ದಾಗ, ಆಕೆ ನಗುತ್ತಲೇ ದಾರಿಯುದ್ದಕ್ಕೂ ನೆರೆದಿದ್ದ ಜನರಿಗೆ ಕೈಬೀಸಿ ಅಭಿನಂದಿಸಿದರು.

ನಂತರ ಮುಖ್ಯಮಂತ್ರಿಗಳು ಮೆಟ್ಟೂರು ಅಣೆಕಟ್ಟಿನ ಗೇಟ್‌ಗಳನ್ನು ತೆರೆಯುವ ಮೂಲಕ 2026-27ರ ಸಾಲಿನ ಸಾಂಬಾ ಭತ್ತದ ಕೃಷಿಗೆ ನೀರು ಬಿಡುಗಡೆ ಮಾಡಲಾಯಿತು ಮತ್ತು ಕಾವೇರಿ ಜಲಾನಯನ ಪ್ರದೇಶದಾದ್ಯಂತ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಕ್ರಮ ಕೈಗೊಳ್ಳಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ 'ಮುಡಾ' ಸಂಕಷ್ಟ: 'ಬಿ' ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ED

Toxic Box Office Collection: 300 ಕೋಟಿ ಕ್ಲಬ್ ಸೇರಿದ 'ಟಾಕ್ಸಿಕ್'; 6ನೇ ದಿನ ಯಶ್ ಸಿನಿಮಾ ಗಳಿಸಿದ್ದೆಷ್ಟು?

ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ; ಶೇ.15 ರಷ್ಟು ಹೆಚ್ಚಳ!

ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸಹಪಾಠಿ ಮೇಲೆ ಹಲ್ಲೆ ಆರೋಪ: ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಕೇಸ್

ಅಫ್ಘಾನ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ; ಬುಮ್ರಾ, ರಾಣಾ ಕಮ್​ಬ್ಯಾಕ್!