ಗೂಗಲ್ ಸಿಇಒ ಸುಂದರ್ ಪಿಚೈ 
ದೇಶ

"It's Where I Met My Wife": IIT ಖರಗಪುರದ ಸವಿ ನೆನಪು" ಹಂಚಿಕೊಂಡ ಗೂಗಲ್ ಸಿಇಒ ಸುಂದರ್ ಪಿಚೈ! Video

ಕ್ಯಾಂಪಸ್‌ನಲ್ಲಿದ್ದ ತಮ್ಮ ಸವಿ ನೆನಪುಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು, ಗೂಗಲ್‌ನತ್ತ ತಮ್ಮ ಪಯಣದಲ್ಲಿ ಐಐಟಿ ಖರಗ್‌ಪುರ ವಹಿಸಿದ ಪಾತ್ರ, ಕೃತಕ ಬುದ್ಧಿಮತ್ತೆ (AI), AI ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತಿತರ ವಿಷಯಗಳ ಕುರಿತು ಮಾತನಾಡಿದ್ದಾರೆ.

ಖರಗಪುರ: ದೇಶದ ಮೊದಲ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಖರಗ ಪುರದ IIT ಸಂಸ್ಥೆಯು ಅಮೃತ ಮಹೋತ್ಸವ( 75ನೇ ವರ್ಷದ) ಸಂಭ್ರಮದಲ್ಲಿರುವಾಗ ಗೂಗಲ್ ಸಿಇಒ ಸುಂದರ್ ಪಿಚೈ ವಿಶೇಷ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಕ್ಯಾಂಪಸ್‌ನಲ್ಲಿದ್ದ ತಮ್ಮ ಸವಿ ನೆನಪುಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು, ಗೂಗಲ್‌ನತ್ತ ತಮ್ಮ ಪಯಣದಲ್ಲಿ ಐಐಟಿ ಖರಗ್‌ಪುರ ವಹಿಸಿದ ಪಾತ್ರ, ಕೃತಕ ಬುದ್ಧಿಮತ್ತೆ (AI), AI ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತಿತರ ವಿಷಯಗಳ ಕುರಿತು ಮಾತನಾಡಿದ್ದಾರೆ.

ಈ ಕುರಿತು ವಿಡಿಯೋವನ್ನು IIT ಖರಗಪುರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದೆ. ಐಐಟಿ ಖರಗ್‌ಪುರ ಸಮುದಾಯಕ್ಕೆ, ವಿದ್ಯಾರ್ಥಿಗಳು, ಬೋಧಕವರ್ಗ ಮತ್ತು ಪ್ರಪಂಚದಾದ್ಯಂತ ಇರುವ ನನ್ನ ಸಹ ಹಳೆಯ ವಿದ್ಯಾರ್ಥಿಗಳಿಗೆ - ನಮಸ್ಕಾರ. ಐಐಟಿ ಖರಗ್ಪುರದ 75 ವರ್ಷಗಳ ಶ್ರೇಷ್ಠತೆಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದು ನನಗೆ ವಿಶೇಷ ಗೌರವದ ವಿಷಯವಾಗಿದೆ. ವಿದ್ಯಾರ್ಥಿಯಾಗಿ ನನಗೆ ಅನೇಕ ಸವಿ ನೆನಪುಗಳಿವೆ ಎಂದಿದ್ದಾರೆ.

'ಹ್ಯಾರಿಸ್' (Harry's) ನಲ್ಲಿನ ಊಟದಿಂದ ಹಿಡಿದು 'ಇಲ್ಲು' (Illu) ಉತ್ಸವದವರೆಗೆ, B308 ಕೊಠಡಿಯಲ್ಲಿ ರಾತ್ರಿಯಿಡೀ ಅಧ್ಯಯನ ಮಾಡುವುದರಿಂದ ಹಿಡಿದು ಹಾಸ್ಟೆಲ್‌ನ ಸಹವಾಸಿಗಳೊಂದಿಗೆ (wingmates) ಬೆಳೆದ ಸ್ನೇಹದವರೆಗೆ ಮತ್ತು ನನ್ನ ಮೇಲೆ ಅಳಿಸಲಾಗದ ಪ್ರಭಾವ ಬೀರಿದ ಪ್ರಾಧ್ಯಾಪಕರವರೆಗೆ ಎಲ್ಲವೂ ನೆನಪಿರುವುದಾಗಿ ತಿಳಿಸಿದ್ದಾರೆ.

"ಈ ಕ್ಯಾಂಪಸ್‌ನಲ್ಲೇ ನಾನು ನನ್ನ ಪತ್ನಿ ಅಂಜಲಿಯನ್ನು ಭೇಟಿಯಾದೆ. ಇಲ್ಲಿಯೇ ನಾನು ಮೊದಲ ಬಾರಿಗೆ ಪ್ರೋಗ್ರಾಮಿಂಗ್ ಕಲಿತೆ ಮತ್ತು ಫ್ಲಾಪಿ ಡಿಸ್ಕ್‌ಗಳನ್ನು ಹಿಡಿದುಕೊಂಡು ಕ್ಯಾಂಪಸ್‌ನಾದ್ಯಂತ ಓಡಾಡುತ್ತಾ ಕಂಪ್ಯೂಟರ್ ಬಳಸುವ ಮೊದಲ ಅವಕಾಶಗಳನ್ನು ಪಡೆದುಕೊಂಡೆ. ಈ ಕ್ಷಣಗಳು ನನ್ನ ಜೀವನದ ಹಾದಿಯನ್ನು ರೂಪಿಸಿದವು, ನನ್ನನ್ನು ಗೂಗಲ್‌ನತ್ತ ಕೊಂಡೊಯ್ದವು ಮತ್ತು ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಂತ್ರಜ್ಞಾನವನ್ನು ತಲುಪಿಸಲು ಸಹಾಯ ಮಾಡುವಂತಾದವು ಎಂದು ಹೇಳಿಕೊಂಡಿದ್ದಾರೆ.

"ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಪಡೆದ ಶಿಕ್ಷಣವು ನಿಜಕ್ಕೂ ಒಂದು ವರದಾನ ಎಂದು ಪಿಚೈ ಅಭಿಪ್ರಾಯಪಟ್ಟಿದ್ದಾರೆ. ಈ ಸಂಸ್ಥೆಯ ಅನೇಕ ಪದವೀಧರರು ಭಾರತ ಮತ್ತು ಪ್ರಪಂಚದ ಮೇಲೆ ಪ್ರಭಾವ ಬೀರಿದ್ದಾರೆ. "ಪ್ರಪಂಚದ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ನಾನು ನೋಡುವ ದೃಷ್ಟಿಕೋನವನ್ನು ರೂಪಿಸುವಲ್ಲಿ ಐಐಟಿ ಖರಗ್ಪುರ ಪ್ರಮುಖ ಪಾತ್ರ ವಹಿಸಿದೆ. ತಂತ್ರಜ್ಞಾನದ ಮುಂದಿನ ಅಲೆಯತ್ತ ನಾವು ಸಾಗುತ್ತಿರುವಾಗ ಐಐಟಿ ಖರಗಪುರದ ಪಾತ್ರವು ಇನ್ನಷ್ಟು ಮಹತ್ವದ್ದಾಗಲಿದೆ ಎಂದು ಪಿಚೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತವು ಇಡೀ ಜಗತ್ತಿಗೇ ಪ್ರಯೋಜನವಾಗಬಲ್ಲಂತಹ ನಾವೀನ್ಯತೆಗಳನ್ನು ಹೆಚ್ಚು ಹೆಚ್ಚಾಗಿ ಸೃಷ್ಟಿಸುತ್ತಿದೆ. ಕೃತಕ ಬುದ್ಧಿಮತ್ತೆಯು (AI) ಈ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಬಲ್ಲದು. ಮುಂದಿನ ಐದು ವರ್ಷಗಳಲ್ಲಿ AI ಕೇವಲ ಪ್ರಯೋಗಾಲಯಗಳು ಮತ್ತು ಆರಂಭಿಕ ಬಳಕೆದಾರರ ವಲಯದಿಂದ ಹೊರಬಂದು ಆರೋಗ್ಯ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು, ರೈತರು, ಉದ್ಯಮಿಗಳು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಜನರ ಕೈ ಸೇರಲಿದೆ ಎಂದು ಅವರು ತಿಳಿಸಿದ್ದಾರೆ.

ಪಿಚೈ ಅವರ ಸಂದೇಶ ಐಐಟಿ ವ್ಯವಸ್ಥೆಯ (ecosystem) ಶಾಶ್ವತ ಜಾಗತಿಕ ಪ್ರಭಾವವನ್ನು ಹಾಗೂ ಜೀವನವನ್ನು ಪರಿವರ್ತಿಸುವ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ, ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಐಐಟಿ ಖರಗಪುರ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ಶಸ್ತ್ರಾಸ್ತ್ರ ಹೊಂದಿದ್ದ 'ಬಿಜೆಪಿ ಗೂಂಡಾಗಳು' TMC ಕಚೇರಿಗೆ ನುಗ್ಗಿ, ಧ್ವಂಸ ಮಾಡಿದ್ದಾರೆ: ಅಭಿಷೇಕ್ ಬ್ಯಾನರ್ಜಿ

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಗ್ರಾನೈಟ್ ಉದ್ಯಮಿ, ಜೆಮ್ ಗ್ರೂಪ್‌ ಅಧ್ಯಕ್ಷ ವೀರಮಣಿ ಬಂಧನ; ಪೆನ್ ಡ್ರೈವ್‌ನಿಂದ ಬಯಲಾಯಿತು ಹೀನ ಕೃತ್ಯ!

ಭಾರತ-ಇರಾನ್ ನಡುವೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿಲ್ಲ: ಮಾರ್ಕೊ ರೂಬಿಯೊ

ಬಾಬರ್ ಅಜಮ್ ಪ್ರೇಮ ಜೀವನ: ಪಾಕ್ ಸ್ಟಾರ್ ಆಟಗಾರನಿಗೆ ''ನಾಲ್ವರು ಗರ್ಲ್ ಫ್ರೆಂಡ್'' ನಿಜನಾ? ಏನಿದು ಗರ್ಭಧಾರಣೆ ವಿವಾದ!