ನವದೆಹಲಿ: 1990ರಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತ ಸಮುದಾಯದ ಶುಶ್ರೂಷಕಿ ಸರಳಾ ಭಟ್ ಕೊಲೆ ಪ್ರಕರಣದ ಅಪರಾಧಿ, ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್, ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ವಿರುದ್ಧದ ಕಾನೂನು ಹೋರಾಟದಿಂದ ಹಿಂದೆ ಸರಿದು ಶಿಕ್ಷೆ ಸ್ವೀಕರಿಸುವುದಾಗಿ ತಿಳಿಸಿದ್ದಾನೆ.
ಇದೇ ಅಫಿಡವಿಟ್‌ನಲ್ಲಿ, ತನ್ನ ಪತ್ನಿ, ಪಾಕಿಸ್ತಾನಿ ಕಲಾವಿದೆ, ಮುಶಾಲ್ ಹುಸೇನ್ ಮಲಿಕ್ ಅವರಿಗೆ ವಿಚ್ಛೇದನ ನೀಡುವುದಾಗಿಯೂ ತಿಳಿಸಿದ್ದಾನೆ. ಕಳೆದ 8 ವರ್ಷಗಳಿಂದ ಮುಷಾಲ್ ಜೊತೆ ಮಾತನಾಡಿಲ್ಲ ಮತ್ತು ಫೋನ್ ಕಾಲ್, ವಿಡಿಯೋ ಕಾಲ್‌ನಲ್ಲಿಯೂ ಸಹ ಆಕೆಯೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಮಲಿಕ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾನೆ.
ನನ್ನನ್ನು ಮದುವೆಯಾಗಿದ್ದರೂ ಒಂಟಿಯಾಗಿ ಜೀವನ ನಡೆಸುತ್ತಿರುವ ಮುಷಾಲ್‌ಳನ್ನು ನನ್ನ ಅನಿಶ್ಚಿತತೆಯ ಜೀವನದಿಂದ ಮುಕ್ತಗೊಳಿಸಲು ಈ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾನೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಮಲಿಕ್ 2019 ರಿಂದ ತಿಹಾರ್ ಜೈಲಿನಲ್ಲಿದ್ದಾನೆ. 2022ರ ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ಆತನನ್ನ ಅಪರಾಧಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತು.
ಇನ್ನೂ ಯಾಸೀನ್ ಮಲಿಕ್ ಸಲ್ಲಿಸಿರುವ ಮನವಿಗೆ 1990 ರಲ್ಲಿ ಕಾಶ್ಮೀರದಲ್ಲಿ ಉಗ್ರರಿಂದ ಹುತಾತ್ಮರಾದ ಭಾರತೀಯ ವಾಯುಪಡೆಯ (IAF) ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಧರ್ಮಪತ್ನಿ ಹರಿಹಾಯ್ದಿದ್ದಾರೆ. ವಿಧವೆಯಾದ ಮಹಿಳೆಯರ ಕಷ್ಟಗಳ ಬಗ್ಗೆ ನಿನಗೇನು ಗೊತ್ತು..ಸಹಾನೂಭೂತಿ ಗಳಿಸಲು ಮಾಡಿರುವ ಪ್ರಯತ್ನ ಇದು ನೀನು ಇಲ್ಲಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಬೇಡ. ನಿನ್ನ ಮೊಸಳೆ ಕಣ್ಣೀರು ಸಾಕು ಮಾಡು, ನಿನಗೆ ಯಾವುದೇ ರೀತಿ ಸಹಾನೂಭೂತಿ ಸಿಗಬಾರದು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸ್ಕ್ವಾಡ್ರನ್ ನಾಯಕ ರವಿ ಖನ್ನಾ ಮತ್ತು ಇತರ ಮೂವರು ವಾಯುಪಡೆಯ ಸಿಬ್ಬಂದಿಯನ್ನು ಜನವರಿ 25, 1990 ರಂದು ಶ್ರೀನಗರದಲ್ಲಿ ಬಸ್ ನಿಲ್ದಾಣದಲ್ಲಿ ಜೆಕೆಎಲ್ಎಫ್ ಭಯೋತ್ಪಾದಕರು ಗುಂಡಿಕ್ಕಿ ಕೊಂದರು. ಪ್ರತ್ಯಕ್ಷದರ್ಶಿಗಳು ಮತ್ತು ಬದುಕುಳಿದವರ ಸಾಕ್ಷ್ಯಗಳ ಪ್ರಕಾರ, ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ದಾಳಿಯನ್ನು ಮುನ್ನಡೆಸಿದ ಮತ್ತು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ ಪ್ರಮುಖ ಶೂಟರ್ ಎಂದು ಗುರುತಿಸಲಾಗಿದೆ.
ಅವನು ನಿರಾಯುಧರಾಗಿದ್ದ ನನ್ನ ಪತಿಯನ್ನು ಕೊಂದನು. ಅವನ ದೇಹಕ್ಕೆ 28 ಗುಂಡುಗಳನ್ನು ಹಾರಿಸಿದನು. ಅವನನ್ನು ಗಲ್ಲಿಗೇರಿಸುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ತನ್ನ ಹೆಂಡತಿ ವಿಧವೆಯ ಜೀವನವನ್ನು ನಡೆಸುವುದನ್ನು ಬಯಸುವುದಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾನೆ, ಮಲ್ಲಿಕ್ ಮತ್ತು ಅವನ ಗ್ಯಾಂಗ್‌ನಿಂದ ವಿಧವೆಯಾದ ಹಲವಾರು ಮಹಿಳೆಯರ ಬಗ್ಗೆ ಏನು ಎಂದು ಖನ್ನಾ ಹೇಳುತ್ತಾನೆ ಎಂದು ಪ್ರಶ್ನಿಸಿದ್ದಾರೆ. ನ್ಯಾಯದ ವಿಳಂಬವನ್ನು ಖನ್ನಾ ಪ್ರಶ್ನಿಸಿದರು. "36 ವರ್ಷಗಳಾಗಿವೆ. ಸರ್ಕಾರ ಮತ್ತು ಕೋರ್ಟ್ ಏಕೆ ನ್ಯಾಯ ನೀಡುತ್ತಿಲ್ಲ? ಎಂದಿದ್ದಾರೆ.
1990 ರಲ್ಲಿ ಶ್ರೀನಗರದಲ್ಲಿ ಗುಂಡು ಹಾರಿಸಿ ಕೊಲ್ಲಲ್ಪಟ್ಟ ನರ್ಸ್ ಸರಳಾ ಭಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಿಕ್ ಅವರು ಅಫಿಡವಿಟ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಗಲ್ಲು ಶಿಕ್ಷೆಗೆ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದಾರೆ,