ರಾಘವ್ ಛಡ್ಡಾ 
ದೇಶ

ರಾಘವ್ ಛಡ್ಡಾರ ಕುತೂಹಲಕಾರಿ SIR ಪ್ರಕರಣ: ಪಂಜಾಬ್ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ನಂತರ ದೆಹಲಿ ಮತದಾರರ ಪಟ್ಟಿಗೆ ಸೇರ್ಪಡೆ!

ಕರಡು ಪಟ್ಟಿಯಿಂದ ಹೊರಗುಳಿದವರು ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿಯಲ್ಲಿ ಫಾರ್ಮ್ 6 ಅನ್ನು ಸಲ್ಲಿಸುವ ಮೂಲಕ ಮತ್ತೆ ಪಟ್ಟಿಗೆ ಸೇರಬಹುದು.

ನವದೆಹಲಿ: ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯುತ್ತಿರುವ ನಡುವೆಯೇ, ಪಂಜಾಬ್ ಮತದಾರರ ಕರಡು ಪಟ್ಟಿಯಲ್ಲಿ ಅವರ ಹೆಸರು ಕಣ್ಮರೆಯಾಗಿತ್ತು. ಇದರ ಹಿಂದೆ ರಾಜಕೀಯ ದ್ವೇಷ ಇದೆ ರಾಘವ್ ಚಡ್ಡಾ ಅವರು ಆರೋಪಿಸಿದ ಕೆಲವು ದಿನಗಳ ನಂತರ, ಸೆಪ್ಟೆಂಬರ್ 8 ರಂದು ಮತದಾರರ ಪಟ್ಟಿಯಲ್ಲಿ ಸೇರಿಸಲಾದ 700 ಜನರಲ್ಲಿ ಚಡ್ಡಾ ಅವರ ಹೆಸರೂ ಸೇರಿತ್ತು. ದೆಹಲಿಯ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 31 ರಂದು ಪ್ರಕಟಿಸಲಾಗಿತ್ತು.

ದೆಹಲಿಯಲ್ಲಿ ಛಡ್ಡಾ ಅಕ್ರಮವಾಗಿ ತಮ್ಮನ್ನು ತಾವು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಎಎಪಿ ಆರೋಪಿಸಿದ್ದರೆ, ಚಡ್ಡಾ ತಮ್ಮ ಹಿಂದಿನ ಪಕ್ಷವು 'ಬಿಟ್ಟುಹೋದ ಪ್ರೇಮಿ'ಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. ನವೀಕರಣ ಪ್ರಕ್ರಿಯೆಯ ಮೂಲಕ ಛಡ್ಡಾ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ದೆಹಲಿ ಚುನಾವಣಾ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

2024 ರಿಂದ ಪಂಜಾಬ್‌ನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದ ಎಎಪಿ ಮಾಜಿ ಸಂಸದರ ಹೆಸರನ್ನು ಇದೀಗ ದೆಹಲಿಯ ರಾಜಿಂದರ್ ನಗರ ಕ್ಷೇತ್ರದ ಮತದಾರರ ಕರಡು ಪಟ್ಟಿಯಲ್ಲಿ ಸೇರಿಸಲಾಗಿದೆ.

'ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಮಂಗಳವಾರದವರೆಗೆ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 700 ನಮೂನೆಗಳನ್ನು ಇಆರ್‌ಒಗಳು ಅನುಮೋದಿಸಿದ್ದಾರೆ. ಅವುಗಳಲ್ಲಿ ಚಡ್ಡಾ ಅವರ ಹೆಸರೂ ಇತ್ತು' ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಚಡ್ಡಾ ಅವರ ಮತದಾರರ ನೋಂದಣಿಯು ಇದೀಗ ವಿವಾದಕ್ಕೆ ತಿರುಗಿದೆ. ಕರಡು ಪಟ್ಟಿಗಳು ಈಗಾಗಲೇ ಪ್ರಕಟವಾದ ನಂತರವೂ ಅವರ ಹೆಸರನ್ನು ದೆಹಲಿ ಮತದಾರರ ಪಟ್ಟಿಯಲ್ಲಿ ಹೇಗೆ ಸೇರಿಸಲಾಗಿದೆ? ಎಂಬ ಕುತೂಹಲಕಾರಿ ಪ್ರಶ್ನೆ ಉಂಟಾಗಿದೆ.

ಜೂನ್ 16 ಮತ್ತು ಆಗಸ್ಟ್ 31ರ ನಡುವೆ ದೆಹಲಿಯ ಮತದಾರರ ಪಟ್ಟಿಯನ್ನು SIR ಪ್ರಕ್ರಿಯೆಗಾಗಿ ಸ್ಥಗಿತಗೊಳಿಸಲಾಯಿತು. ದೆಹಲಿಯ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 31 ರಂದು ಪ್ರಕಟಿಸಲಾಯಿತು. ಸೆಪ್ಟೆಂಬರ್ 3 ರಂದು, ಪಂಜಾಬ್‌ನ ಕರಡು ಪಟ್ಟಿಯಿಂದ ಚಡ್ಡಾ ಅವರ ಹೆಸರನ್ನು ಅಳಿಸಲಾಗಿತ್ತು.

ಆಗಸ್ಟ್ 31 ರವರೆಗೆ ಸುಮಾರು 2.14 ಲಕ್ಷ ಫಾರ್ಮ್ 6 ಅನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಸಿಇಒ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ನೋಂದಣಿಗೆ ಫಾರ್ಮ್ 6 ಅನ್ನು ಬಳಸಲಾಗುತ್ತದೆ.

ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿಯಲ್ಲಿ, ಸೆಪ್ಟೆಂಬರ್ 7ರವರೆಗೆ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸಲು ಇನ್ನೂ 25,011 ಫಾರ್ಮ್ 6 ಅನ್ನು ಸಲ್ಲಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 4 ರಂದು ಪ್ರಕಟಿಸಲಾಗುವುದು.

ಇಸಿಐ ನಿಯಮಗಳ ಪ್ರಕಾರ, ಕರಡು ಪಟ್ಟಿಯಿಂದ ಹೊರಗುಳಿದವರು ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿಯಲ್ಲಿ ಫಾರ್ಮ್ 6 ಅನ್ನು ಸಲ್ಲಿಸುವ ಮೂಲಕ ಮತ್ತೆ ಪಟ್ಟಿಗೆ ಸೇರಬಹುದು. ERO ಗಳು ಅನುಮೋದಿಸಿದ ಫಾರ್ಮ್ 6 ಅರ್ಜಿಗಳನ್ನು ನಂತರ ಅಂತಿಮ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವರಿಗೆ ED ಶಾಕ್‌; ಸತೀಶ್ ಜಾರಕಿಹೊಳಿ ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ !

US-Iran ಸಂಘರ್ಷ ತಾರಕಕ್ಕೆ: ತೈಲ ಟ್ಯಾಂಕರ್ ದಾಳಿಗೆ Tehran ಪ್ರತಿಕಾರ; ಜೋರ್ಡಾನ್‌ ಅಮೆರಿಕ ಸೇನಾ ನೆಲೆ ಮೇಲೆ ಭೀಕರ ಕ್ಷಿಪಣಿ ದಾಳಿ, Hormuz ಬಿಕ್ಕಟ್ಟು ಮತ್ತಷ್ಟು ಉಲ್ಬಣ..!

West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

West Asia Conflict ಎಫೆಕ್ಟ್: ಗಗನಕ್ಕೇರುತ್ತಿದೆ ಜಾಗತಿಕ ತೈಲ ದರ, $100 ತಲುಪಿದ ಕಚ್ಚಾ ತೈಲ ಬೆಲೆ..!

'ಬ್ರಿಟನ್ ತೊರೆಯದಂತೆ ಕಾನೂನುಬದ್ಧ ನಿರ್ಬಂಧ, ಭಾರತ ಸರ್ಕಾರದಿಂದ ನನಗೆ ಅನ್ಯಾಯವಾಗಿದೆ': ವಿಜಯ್ ಮಲ್ಯ