2025ರ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಾತುಕತೆ ನಡೆಸುತ್ತಿರುವುದು. 
ದೇಶ

ರಾಜತಾಂತ್ರಿಕತೆ: ಮೂರು ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳು; ಕ್ಸಿ ಜಿನ್ ಪಿಂಗ್, ವ್ಲಾಡಿಮಿರ್ ಪುಟಿನ್, ಪೆಜೆಶ್ಕಿಯಾನ್ ಮಾತುಕತೆ

ಇಂದು ಮಧ್ಯಾಹ್ನ 3.30ಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗಿನ ಭೇಟಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಸಂಜೆ 6.15ಕ್ಕೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹಾಗೂ 6.45ಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸರಣಿ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಮೋದಿ ಅವರ ರಾಜತಾಂತ್ರಿಕ ವೇಳಾಪಟ್ಟಿ ಅತ್ಯಂತ ಬಿಗಿಯಾಗಿರಲಿದೆ.

ಇಂದು ಮಧ್ಯಾಹ್ನ 3.30ಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗಿನ ಭೇಟಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಸಂಜೆ 6.15ಕ್ಕೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಹಾಗೂ 6.45ಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ.

ನಾಳೆಯ ವೇಳಾಪಟ್ಟಿ ಇನ್ನಷ್ಟು ಬಿಗಿಯಾಗಿದ್ದು, ಬೆಳಗ್ಗೆ 10 ಗಂಟೆಗೆ ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ ಹಾಗೂ 10.30ಕ್ಕೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಸಭೆ ನಡೆಯಲಿದೆ. ನಂತರ 11 ಗಂಟೆಗೆ ಅಬುಧಾಬಿಯ ಯುವರಾಜ ಹಾಗೂ 11.30ಕ್ಕೆ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಅವರೊಂದಿಗೆ ಮೋದಿ ಭೇಟಿ ನಡೆಸಲಿದ್ದಾರೆ.

ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಳಗ್ಗೆ 11.30ಕ್ಕೆ ಪೆಜೆಶ್ಕಿಯಾನ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿದೆ.

ದಿನದ ಅತ್ಯಂತ ಕುತೂಹಲ ಕೆರಳಿಸಿರುವ ಸಭೆ ಸಂಜೆ 5.45ಕ್ಕೆ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಏಳು ವರ್ಷಗಳ ಬಳಿಕ ಶಿ ಅವರ ಮೊದಲ ದ್ವಿಪಕ್ಷೀಯ ಭಾರತ ಭೇಟಿಯ ಹಿನ್ನೆಲೆಯಲ್ಲಿ ಹಾಗೂ ಭಾರತ–ಚೀನಾ ಸಂಬಂಧಗಳಲ್ಲಿ ಎಚ್ಚರಿಕೆಯೊಂದಿಗೆ ಸುಧಾರಣೆ ಕಾಣುತ್ತಿರುವ ಸಂದರ್ಭದಲ್ಲಿ ಈ ಸಭೆ ಮಹತ್ವ ಪಡೆದಿದೆ.

ಭಾನುವಾರವೂ ಪ್ರಧಾನಿ ಮೋದಿ ಅವರ ಸರಣಿ ದ್ವಿಪಕ್ಷೀಯ ಸಭೆಗಳು ಮುಂದುವರಿಯಲಿದ್ದು, ಮಧ್ಯಾಹ್ನ 2.30ರಿಂದ ಸಂಜೆ 5.40ರವರೆಗೆ ಕಜಕಸ್ತಾನ, ಫಿಲಿಪ್ಪೀನ್ಸ್, ಈಜಿಪ್ಟ್, ದಕ್ಷಿಣ ಆಫ್ರಿಕಾ, ಬುರುಂಡಿ, ನೈಜೀರಿಯಾ ಹಾಗೂ ಉಗಾಂಡಾ ದೇಶಗಳ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ವೇಳಾಪಟ್ಟಿಯ ಈ ವೇಗವು ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ನಡೆಯುವ ದ್ವಿಪಕ್ಷೀಯ ಸಭೆಗಳು ನವದೆಹಲಿಗೆ ಹೊಂದಿರುವ ರಾಜತಾಂತ್ರಿಕ ಮಹತ್ವವನ್ನು ಒತ್ತಿಹೇಳುತ್ತದೆ.

ಮೂರು ದಿನಗಳ ಅವಧಿಯಲ್ಲಿ ಮೋದಿ ಅವರು ಪ್ರಮುಖ ಜಾಗತಿಕ ಶಕ್ತಿಗಳು, ಉದಯೋನ್ಮುಖ ಆರ್ಥಿಕತೆಗಳು ಹಾಗೂ ಪ್ರಮುಖ ಪ್ರಾದೇಶಿಕ ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಕಾರ್ಯತಂತ್ರದ ಸಂಬಂಧಗಳು, ವ್ಯಾಪಾರ, ಹೂಡಿಕೆ, ಪ್ರಾದೇಶಿಕ ಸಂಘರ್ಷಗಳು ಹಾಗೂ ಜಾಗತಿಕ ಆಡಳಿತ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುವ ಸಾಧ್ಯತೆಯಿದೆ.

ಒಟ್ಟಾರೆ, ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಮೂರು ದಿನಗಳಲ್ಲಿ ಪ್ರಧಾನಿ ಮೋದಿ ಅವರು ಕನಿಷ್ಠ 15 ದ್ವಿಪಕ್ಷೀಯ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇವುಗಳಲ್ಲಿ ಪುಟಿನ್, ಪೆಜೆಶ್ಕಿಯಾನ್ ಹಾಗೂ ಶಿ ಜಿನ್‌ಪಿಂಗ್ ಅವರೊಂದಿಗಿನ ಸಭೆಗಳು ಪ್ರಮುಖವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS Business Forum 2026: ಭಾರತದ ಮಾರುಕಟ್ಟೆ ಬೃಹತ್, ವೇಗವಾಗಿ ಬೆಳೆಯುತ್ತಿದೆ; ಬಲಿಷ್ಠ ಆರ್ಥಿಕ ಸಹಭಾಗಿತ್ವಕ್ಕೆ ಸೂಕ್ತ ರಾಷ್ಟ್ರ: ವಿದೇಶಾಂಗ ಸಚಿವ ಜೈಶಂಕರ್

ಭಾರತ–ಚೀನಾ ಸಂಬಂಧ; ಭೂಮಿಯ ಲೋಹಗಳು, ವೀಸಾ, ಹೂಡಿಕೆ; ಕ್ಸಿ-ಜಿನ್ ಪಿಂಗ್-ಪ್ರಧಾನಿ ಮೋದಿ ಮಾತುಕತೆ ಅಜೆಂಡಾ ಏನು?

BRICS ಶೃಂಗಸಭೆ: ದೆಹಲಿಗೆ ಆಗಮಿಸಿದ Vladimir Putin; ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ, ಭಾರತ-ರಷ್ಯಾ ಸ್ನೇಹಕ್ಕೆ ಮತ್ತಷ್ಟು ಬಲ..!

'Brand Bengaluru'ಯೋಜನೆಗೆ ಬಿಗ್ ಬೂಸ್ಟ್: ಸಿಲಿಕಾನ್ ಸಿಟಿ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲು GBA ಮಾಸ್ಟರ್ ಪ್ಲ್ಯಾನ್!

ಮಧು ಬಂಗಾರಪ್ಪ ದಿನಕ್ಕೊಂದು ಶೂ ಹಾಕ್ತಾರೆ, ಶಾಲಾ ಮಕ್ಕಳಿಗೆ ಕಿತ್ತೋಗಿರೋ ಶೂ ಕೊಡ್ತಾರೆ; ಚಿಂದಿ ಆಯುವವರು ಕೂಡ ಅದನ್ನು ತಗೊಳ್ಳಲ್ಲ- ಶ್ರೀರಾಮುಲು