ನವದೆಹಲಿ: ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದ್ದು, ವಿಶ್ವಕ್ಕೆ ಒಂದು ಬೃಹತ್ ಹಾಗೂ ನಿರಂತರವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಒದಗಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದಿನಿಂದ (ಸೆಪ್ಟೆಂಬರ್ 11, 2026) ಆರಂಭವಾಗಿರುವ ಬ್ರಿಕ್ಸ್ ಬಿಸಿನೆಸ್ ಫೋರಂನ (BRICS Business Forum 2026) ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ವೇಳೆ ಭಾರತದ ಬೃಹತ್ ಹಾಗೂ ವೇಗವಾಗಿ ವಿಸ್ತರಿಸುತ್ತಿರುವ ಮಾರುಕಟ್ಟೆ, ಹೆಚ್ಚುತ್ತಿರುವ ಉತ್ಪಾದನಾ ಸಾಮರ್ಥ್ಯ ಮತ್ತು ಬಲಿಷ್ಠ ಪ್ರತಿಭಾ ಸಂಪನ್ಮೂಲದ ಕುರಿತು ಒತ್ತಿ ಹೇಳಿದರು.
ಬ್ರಿಕ್ಸ್ ಆರ್ಥಿಕ ಸಹಕಾರದ ಮುಂದಿನ ಹಂತದಲ್ಲಿ ಭಾರತ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದು, ಉತ್ಪಾದನಾ ಸಾಮರ್ಥ್ಯ, ಡಿಜಿಟಲ್ ಪರಿಣತಿ ಹಾಗೂ ಕ್ರಿಯಾಶೀಲ ನವೋದ್ಯಮ ಮತ್ತು ಉದ್ಯಮಶೀಲತಾ ವ್ಯವಸ್ಥೆಯನ್ನು ಒಟ್ಟುಗೂಡಿಸಿಕೊಂಡಿದೆ.
ಭಾರತವು ಬೃಹತ್ ಹಾಗೂ ವಿಸ್ತರಿಸುತ್ತಿರುವ ಮಾರುಕಟ್ಟೆ, ಹೆಚ್ಚುತ್ತಿರುವ ಉತ್ಪಾದನಾ ಸಾಮರ್ಥ್ಯ, ಹೆಚ್ಚಿನ ಪ್ರತಿಭಾ ಸಂಪನ್ಮೂಲ, ಡಿಜಿಟಲ್ ಅನುಭವ ಮತ್ತು ಕ್ರಿಯಾಶೀಲ ನವೋದ್ಯಮ ಹಾಗೂ ಉದ್ಯಮಶೀಲತಾ ನೆಲೆಯನ್ನು ಹೊಂದಿದೆ.
ಬ್ರಿಕ್ಸ್ ನಾಯಕರು ಸಭೆಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಸಂಘಟನೆಯ ಮುಂದಿನ ಹಂತಕ್ಕೆ ಸ್ಪಷ್ಟವಾದ ಉದ್ಯಮ ದೃಷ್ಟಿಕೋನವನ್ನು ನೀಡುವುದು ಈ ವೇದಿಕೆಯ ಪ್ರಮುಖ ಕೊಡುಗೆಯಾಗಲಿದಯ ನಮ್ಮ ನಾಯಕರು ಸಭೆಗೆ ಸಿದ್ಧತೆ ನಡೆಸುತ್ತಿರುವಾಗ, ಬ್ರಿಕ್ಸ್‌ನ ಮುಂದಿನ ಹಂತಕ್ಕೆ ಸ್ಪಷ್ಟವಾದ ಉದ್ಯಮ ದೃಷ್ಟಿಕೋನವನ್ನು ನೀಡುವುದು ಈ ವೇದಿಕೆಯ ಅತ್ಯಂತ ಉಪಯುಕ್ತ ಕೊಡುಗೆಯಾಗಲಿದೆ ಎಂದು ತಿಳಿಸಿದರು.
ಬ್ರಿಕ್ಸ್ ಉದ್ಯಮ ವೇದಿಕೆಯು ಖಾಸಗಿ ವಲಯದ ಭಾಗವಹಿಸುವಿಕೆಗೆ ಸಂಘಟನೆಯ ಪ್ರಮುಖ ವೇದಿಕೆಯಾಗಿದ್ದು, ಬ್ರಿಕ್ಸ್ ಶೃಂಗಸಭೆ ನಡೆಯುವ ದೇಶದಲ್ಲಿ ನಾಯಕರ ಸಭೆಗೆ ಮುನ್ನ ಪ್ರತಿವರ್ಷ ಆಯೋಜಿಸಲಾಗುತ್ತದೆ. ವ್ಯಾಪಾರ, ಹೂಡಿಕೆ, ಹಣಕಾಸು, ತಂತ್ರಜ್ಞಾನ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿ ಕುರಿತು ಚರ್ಚಿಸಲು ಉದ್ಯಮಿಗಳು, ಸರ್ಕಾರದ ಸಚಿವರು ಹಾಗೂ ರಾಷ್ಟ್ರಗಳ ಮುಖ್ಯಸ್ಥರನ್ನು ಇದು ಒಂದೇ ವೇದಿಕೆಗೆ ಕರೆತರುತ್ತದೆ.
ಬ್ರಿಕ್ಸ್ ಉದ್ಯಮ ಮಂಡಳಿಯ ಶಿಫಾರಸುಗಳನ್ನು ನೀತಿ ನಿರೂಪಕರ ಮುಂದಿಡಲು ವೇದಿಕೆ ಒದಗಿಸುವ ಮೂಲಕ ಬ್ರಿಕ್ಸ್‌ನ ಆರ್ಥಿಕ ಆದ್ಯತೆಗಳನ್ನು ರೂಪಿಸುವಲ್ಲಿಯೂ ಈ ವೇದಿಕೆ ಪ್ರಮುಖ ಪಾತ್ರ ವಹಿಸುತ್ತದೆ. ವೇದಿಕೆಯ ಫಲಿತಾಂಶಗಳು ಹಾಗೂ ಉದ್ಯಮ ಮಂಡಳಿಯ ಶಿಫಾರಸುಗಳು ಶೃಂಗಸಭೆಯ ಘೋಷಣೆಗಳು ಮತ್ತು ನಂತರದ ಕಾರ್ಯಕ್ರಮಗಳಲ್ಲಿ ಸೇರ್ಪಡೆಯಾಗಬಹುದು. ಬ್ರಿಕ್ಸ್ ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ, ಡಿಜಿಟಲ್ ಆರ್ಥಿಕತೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಮಾನದಂಡಗಳ ಸಹಕಾರ ಹಾಗೂ ಮೌಲ್ಯ ಸರಪಳಿ ಏಕೀಕರಣ ಸೇರಿದಂತೆ ಹಲವು ಕ್ಷೇತ್ರಗಳು ಇದರಲ್ಲಿ ಸೇರಿವೆ.
ಮುಖ್ಯ ಬ್ರಿಕ್ಸ್ ಶೃಂಗಸಭೆಯ ಕಾರ್ಯಕ್ರಮ ಸೆಪ್ಟೆಂಬರ್ 12ರಂದು ಆರಂಭವಾಗಲಿದ್ದು, ಭಾರತದ ಅಧ್ಯಕ್ಷತೆಯಲ್ಲಿ ಕೈಗೊಳ್ಳಬೇಕಾದ ಉಪಕ್ರಮಗಳು ಹಾಗೂ ಬ್ರಿಕ್ಸ್‌ನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾಯಕರು ಚರ್ಚಿಸುವ ನಿರೀಕ್ಷೆಯಿದೆ.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ವ್ಯಾಪಾರ, ಡಿಜಿಟಲ್ ತಂತ್ರಜ್ಞಾನ, ಹಣಕಾಸು, ಇಂಧನ ಭದ್ರತೆ ಹಾಗೂ ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆ ಸೇರಿದಂತೆ ಅಂತರರಾಷ್ಟ್ರೀಯ ಸಹಕಾರದ ಹಲವು ಕ್ಷೇತ್ರಗಳಿಗೆ ಆದ್ಯತೆ ನೀಡಿದೆ.
ಜಾಗತಿಕ ಪೂರೈಕೆ ಸರಪಳಿಗಳ ಸ್ಥಿರತೆ, ಗಡಿಯಾಚೆಗಿನ ಪಾವತಿ ವ್ಯವಸ್ಥೆಗಳ ಏಕೀಕರಣ, ರಾಷ್ಟ್ರೀಯ ಕರೆನ್ಸಿಗಳ ಹೆಚ್ಚಿನ ಬಳಕೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ, ಡಿಜಿಟಲ್ ವ್ಯಾಪಾರ ಹಾಗೂ ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ವಿಷಯಗಳು ಶೃಂಗಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.
ಇಂಧನ ಭದ್ರತೆ, ಹವಾಮಾನ ಸ್ಥಿತಿಸ್ಥಾಪಕತ್ವ, ಅಭಿವೃದ್ಧಿ ಹಣಕಾಸು, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ವಿಸ್ತರಣೆ ಹಾಗೂ ಬಹುಪಕ್ಷೀಯ ಹಣಕಾಸು ಮತ್ತು ರಾಜಕೀಯ ಸಂಸ್ಥೆಗಳ ಸುಧಾರಣೆಯೂ ಶೃಂಗಸಭೆಯ ಪ್ರಮುಖ ಚರ್ಚಾ ವಿಷಯಗಳಾಗುವ ಸಾಧ್ಯತೆಯಿದೆ.