ಸಾಂದರ್ಭಿಕ ಚಿತ್ರ 
ದೇಶ

ದೆಹಲಿಯ ಪ್ರತಿಷ್ಠಿತ ಫೈವ್-ಸ್ಟಾರ್ ಹೋಟೆಲ್​ನಲ್ಲಿ ಪೈಲಟ್ ಶವವಾಗಿ ಪತ್ತೆ; ಕಾರಣ ನಿಗೂಢ!

ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಅಂತಿಮ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ.

ನವದೆಹಲಿ: ದೆಹಲಿಯ ಪ್ರತಿಷ್ಠಿತ ವಸಂತ್ ಕುಂಜ್ ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್‌ನ ಕೊಠಡಿಯೊಂದರಲ್ಲಿ ಪೈಲಟ್ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಪೊಲೀಸರ ಪ್ರಕಾರ, 'ಹೋಟೆಲ್ ದಿ ಗ್ರಾಂಡ್'ನಲ್ಲಿ ಫ್ಲೈಟ್ ಕ್ಯಾಪ್ಟನ್ ಆಗಿದ್ದ ಸನ್ನಿ ಅಸಲ್ದೇಕರ್ ಅವರು ಅಸ್ವಸ್ಥರಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಅವರು 'ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ' ಎಂದು ಘೋಷಿಸಿದ್ದಾರೆ.

ಪೈಲಟ್ ಸನ್ನಿ, ಸೆಪ್ಟೆಂಬರ್ 10 ರಂದು ಹೋಟೆಲ್‌ಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಮರುದಿನ, ಅವರು ತಮ್ಮ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರ ಸಹೋದರ ಹೋಟೆಲ್ ವ್ಯವಸ್ಥಾಪಕರಿಗೆ ತಿಳಿಸಿದ್ದರು.

ವ್ಯವಸ್ಥಾಪಕರು ಕೊಠಡಿಗೆ ತೆರಳಿದಾಗ, ರೂಮ್ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿತು. ಅವರು ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ, ಪೈಲಟ್ ಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.

ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಅಂತಿಮ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ.

ಪೊಲೀಸರು ಬಿಎನ್‌ಎಸ್‌ಎಸ್(BNSS)ನ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖಾ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಬ್ರಿಕ್ಸ್‌ನಲ್ಲಿ ಪಹಲ್ಗಾಮ್ ದಾಳಿ ಬಗ್ಗೆ ಮಾತ್ರ ಖಂಡನೆ: ಗಾಜಾ ಬಗ್ಗೆ ಮೌನ ಏಕೆ?; ಗೋಳಾಡಿದ ಮೊಹಬೂಬಾ ಮುಫ್ತಿ!

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ BRICS; ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು!

'ಗ್ಲೋಬಲ್ ಸೌತ್' ನಿಯಮ-ರೂಪಿಸುವ ಶಕ್ತಿಯಾಗಬೇಕು, ಅದರ ನೇತೃತ್ವ ವಹಿಸಲು ಭಾರತ ಸಿದ್ಧ": BRICS ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

ಕಾಂಗ್ರೆಸ್ ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ: ಸರ್ಕಾರಿ ವೈದ್ಯೆ ಡಾ. ಅಂಕಿತಾ ಮಾಡಿದ್ದೇನು?