ದೇಶ

Honeymoon: ಕ್ಷಣಾರ್ಧದಲ್ಲಿ ನರಕವಾದ ಸುಂದರ ಕ್ಷಣ; Homestay Barbecue ಬೆಂಕಿಗೆ ಸಿಲುಕಿ ನವವಿವಾಹಿತೆಗೆ ಗಂಭೀರ ಗಾಯ! Video

ಸೌವಿಕ್ ದಾಸ್ ಮತ್ತು ನಿಖಿತಾ ಸಹಾ ದಂಪತಿ ಸೆಪ್ಟೆಂಬರ್ 13, 2026ರಂದು ಕೂರ್ಸಿಯಾಂಗ್‌ನ ಸಿಟ್ಟಾಂಗ್ ಔರಾ ಹೋಂಸ್ಟೇಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೋಮ್‌ಸ್ಟೇಯ ಹೊರಾಂಗಣದಲ್ಲಿ ಬಾರ್ಬೆಕ್ಯೂ ವ್ಯವಸ್ಥೆಯ ಬಳಿ ದಂಪತಿಗಳು ಕುಳಿತಿದ್ದರು.

ಡಾರ್ಜಿಲಿಂಗ್: ಸುಂದರ ಕ್ಷಣಗಳನ್ನು ಕಳೆಯಲು ಡಾರ್ಜಿಲಿಂಗ್‌ನ ಸಿತಾಂಗ್‌ಗೆ ಹನಿಮೂನ್‌ಗೆ ತೆರಳಿದ್ದ ನವವಿವಾಹಿತ ದಂಪತಿಗಳ ಬದುಕು ಕ್ಷಣಾರ್ಧದಲ್ಲಿ ನರಕ ಸದೃಶವಾಗಿದೆ.

ಅಲ್ಲಿನ ಖಾಸಗಿ ಹೋಮ್‌ಸ್ಟೇಯೊಂದರಲ್ಲಿ ನಡೆದ ಭೀಕರ ಬೆಂಕಿ ಅವಘಡದಲ್ಲಿ ನವವಿವಾಹಿತೆ ನಿಕಿತಾ ಸಹಾ ತೀವ್ರವಾಗಿ ಗಾಯಗೊಂಡಿದ್ದು, ಶೇಕಡಾ 60 ರಷ್ಟು ಸುಟ್ಟ ಗಾಯಗಳೊಂದಿಗೆ ಸಿಲಿಗುರಿ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಹೊಸದಾಗಿ ವಿವಾಹವಾಗಿದ್ದ ಸೌವಿಕ್ ದಾಸ್ ಮತ್ತು ನಿಖಿತಾ ಸಹಾ ದಂಪತಿ ಸೆಪ್ಟೆಂಬರ್ 13, 2026ರಂದು ಕೂರ್ಸಿಯಾಂಗ್‌ನ ಸಿಟ್ಟಾಂಗ್ ಔರಾ ಹೋಂಸ್ಟೇಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೋಮ್‌ಸ್ಟೇಯ ಹೊರಾಂಗಣದಲ್ಲಿ ಬಾರ್ಬೆಕ್ಯೂ ವ್ಯವಸ್ಥೆಯ ಬಳಿ ದಂಪತಿಗಳು ಕುಳಿತಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಉರಿಯುತ್ತಿದ್ದ ಬೆಂಕಿಗೆ ನೇರವಾಗಿ ಲೈಟರ್ ಫ್ಲೂಯಿಡ್ ಸುರಿದಿದ್ದಾನೆ.

ಇದರ ಪರಿಣಾಮವಾಗಿ ಕ್ಷಣಾರ್ಧದಲ್ಲಿ ಭಾರಿ ಬೆಂಕಿಯ ಜ್ವಾಲೆಯು (Fireball) ನಿಕಿತಾ ಅವರ ಮೇಲೆ ಚಿಮ್ಮಿ, ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.

ಈ ಅವಘಡದಲ್ಲಿ ನಿಖಿತಾ ಅವರಿಗೆ ಸುಮಾರು ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸಿಲಿಗುರಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ ಘಟನೆ ವೇಳೆ ಪತ್ನಿಯನ್ನು ರಕ್ಷಿಸಲು ಮುಂದಾದ ಸೌವಿಕ್ ಅವರ ಕೈಗೂ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಇಡೀ ಭೀಕರ ದೃಶ್ಯವು ಹೋಮ್‌ಸ್ಟೇಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಬೆನ್ನಲ್ಲೇ ಸೌವಿಕ್ ಅವರು ಹೋಂಸ್ಟೇ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಹೋಂಸ್ಟೇಯಲ್ಲಿ ಅಗ್ನಿಶಾಮಕ ಸಾಧನಗಳು ಇರಲಿಲ್ಲ ಹಾಗೂ ಅವಘಡದ ಬಳಿಕ ನೆರವು ನೀಡಲು ವಿಳಂಬ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹೋಂಸ್ಟೇಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಹೋಂಸ್ಟೇ ಮ್ಯಾನೇಜರ್, ಅಲ್ಲಿನ ಸಿಬ್ಬಂದಿ ತಮ್ಮಿಂದ ಸಾಧ್ಯವಾದಷ್ಟು ತಕ್ಷಣವೇ ನೆರವು ನೀಡಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

‘ಪ್ರಜಾಪ್ರಭುತ್ವದ ಕರಾಳ ದಿನ’, 'ತಲೆ ಬಾಗಲ್ಲ, ಯಾರಿಗೂ ಶರಣಾಗಲ್ಲ'; ಮಮತಾ ಬ್ಯಾನರ್ಜಿ ಕೆಂಡಾಮಂಡಲ

ಪ್ರಧಾನಿ ಮೋದಿಗೆ UAE ಅಧ್ಯಕ್ಷ ನಹ್ಯಾನ್ ದೂರವಾಣಿ ಕರೆ: ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆ, ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!