ವಿದ್ಯಾರ್ಥಿಗಳ ಪ್ರತಿಭಟನೆ ಸ್ಥಳದಲ್ಲಿ ಪೊಲೀಸರ ಚಿತ್ರ 
ದೇಶ

ChatGPT ಬಳಕೆಯಿಂದ IIT ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ: ಪ್ರೊಫೆಸರ್ ಅಮಾನತು, SC, ST ಕಾಯ್ದೆಯಡಿ ಬಂಧನಕ್ಕೆ ಪೋಷಕರ ಒತ್ತಾಯ!

ಐಐಟಿ ಬಾಂಬೆಯ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ, ತಮ್ಮ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವದೆಹಲಿ: ಪ್ರತಿಭಟನಾ ನಿರತ ವಿದ್ಯಾರ್ಥಿಗಳ 18 ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ಮತ್ತು ಕ್ರಮ ಕೈಗೊಳ್ಳಲು ಸೋಮವಾರ ತಡರಾತ್ರಿ ನಡೆದ ಸಭೆಯ ನಂತರ ಐಐಟಿ ಬಾಂಬೆ ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಪರೀಕ್ಷಾ ಮೇಲ್ವಿಚಾರಣೆ ನಡೆಸುತ್ತಿದ್ದ ಪ್ರಾಧ್ಯಾಪಕರನ್ನು ಸಂಸ್ಥೆಯು ಅಮಾನತುಗೊಳಿಸಿದೆ.

ಐಐಟಿ ಬಾಂಬೆಯ ಎಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ, ತಮ್ಮ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಏಳು ತಿಂಗಳುಗಳಲ್ಲಿ ಈ ಸಂಸ್ಥೆಯಲ್ಲಿ ನಡೆದ ನಾಲ್ಕನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.

ಈ 18 ಬೇಡಿಕೆಗಳಲ್ಲಿ ಪರೀಕ್ಷಾ ಮೇಲ್ವಿಚಾರಣೆ ನಡೆಸುತ್ತಿದ್ದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರ ಅಮಾನತು (ಇದನ್ನು ಈಗಾಗಲೇ ಈಡೇರಿಸಲಾಗಿದೆ) ವಿದ್ಯಾರ್ಥಿಗಳು ಮತ್ತು ಹೊರಗಿನವರನ್ನೊಳಗೊಂಡ ಸ್ವತಂತ್ರ ತನಿಖೆ, ಹೆಚ್ಚಿನ ಆಡಳಿತಾತ್ಮಕ ಹೊಣೆಗಾರಿಕೆ, ಮಾನಸಿಕ ಆರೋಗ್ಯ ಸುಧಾರಣೆಗಳು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆಗಳು ಸೇರಿವೆ.

ವಿದ್ಯಾರ್ಥಿಗಳ ಆತ್ಮಹತ್ಯೆಗಳ ಕುರಿತು ಕಾರ್ಯಪಡೆಯ ರಚನೆ, ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪ್ರಾತಿನಿಧ್ಯ ಹಾಗೂ ಕ್ಯಾಂಪಸ್‌ನಲ್ಲಿ ಉತ್ತಮ ಸಮಾಲೋಚನೆ (counselling) ಮತ್ತು ಮನೋವೈದ್ಯಕೀಯ ಬೆಂಬಲ ವ್ಯವಸ್ಥೆಯ ಕಲ್ಪನೆಗೆ ಸಂಬಂಧಿಸಿದ ಬೇಡಿಕೆಗಳೂ ಇದರಲ್ಲಿ ಸೇರಿವೆ. ಈ ಮಧ್ಯೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳುವ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ನಿರ್ದೇಶಕ ಪ್ರೊ. ಶಿರೀಷ್ ಕೇದಾರೆ ಅವರು ವಾಸ್ತವವಾಗಿ ರಾಜೀನಾಮೆ ನೀಡಿಲ್ಲ ಎಂದು ಐಐಟಿ ಬಾಂಬೆ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಜೊತೆಗೆ ಈ ಪ್ರಕರಣದಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದೆ.

ಪರೀಕ್ಷೆ ವೇಳೆ ChatGPT ಬಳಕೆಯ ಶಂಕೆ: ಇದಕ್ಕೂ ಮುನ್ನ, ಸಂಸ್ಥೆಯ ಅಧ್ಯಾಪಕರ ವೇದಿಕೆಯು ಡೂಲ್ಲಾ ಅವರನ್ನು ಬೆಂಬಲಿಸಿ ಹೇಳಿಕೆಯೊಂದನ್ನು ನೀಡಿತ್ತು. ಅವರು ಸೆನೆಟ್ ಅನುಮೋದಿತ ಶೈಕ್ಷಣಿಕ ನಿಯಮಾವಳಿಗಳ ಅಡಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು ಎಂದು ಅದು ತಿಳಿಸಿತ್ತು. ಆದಾಗ್ಯೂ, ಮೃತ ವಿದ್ಯಾರ್ಥಿಯ ತಂದೆ ಐಐಟಿ ಬಾಂಬೆಯ ಹೇಳಿಕೆಯನ್ನು ನಿರಾಕರಿಸಿದ್ದಾರೆ. ತಮ್ಮ ಮಗ ಶಾಲಾ ದಿನಗಳಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮತ್ತು ಎಂಜಿನಿಯರಿಂಗ್‌ನ ಮೊದಲ ವರ್ಷದಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿದ್ದ ಎಂದು ಅವರು ಹೇಳಿದ್ದು, ಅವರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳದ ಆರೋಪವನ್ನು ಮಾಡಿದ್ದಾರೆ.

ಸಾಹಿಲ್ ಜಾತಿ ಆಧಾರಿತ ತಾರತಮ್ಯಕ್ಕೆ ಬಲಿಯಾಗಿದ್ದಾರೆ ಎಂದು ಅವರ ತಂದೆ ತಿಳಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರೂ, ಕಳೆದ ಮೂರು ತಿಂಗಳುಗಳಿಂದ ಐಐಟಿ ಬಾಂಬೆಯ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳು ಜಾತಿ ನಿಂದನೆ ಮಾಡುವ ಮೂಲಕ ತಮ್ಮ ಮಗನಿಗೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ. ಸಾಹಿಲ್ ಅವರ ಸಾವು ದುರದೃಷ್ಟಕರ ಘಟನೆ ಎಂದು ಐಐಟಿ ಬಾಂಬೆ ಹೇಳಿಕೆ ನೀಡಿತು. ಪರೀಕ್ಷೆಯ ಸಮಯದಲ್ಲಿ ಅವರು 'ಚಾಟ್‌ಜಿಪಿಟಿ' (ChatGPT) ಬಳಸುತ್ತಿರುವುದು ಕಂಡುಬಂದಿತ್ತು ಮತ್ತು ಇದು ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

SC/ST ಕಾಯ್ದೆಯಡಿ ಪ್ರೊಫೆಸರ್ ಬಂಧನಕ್ಕೆ ಪೋಷಕರ ಆಗ್ರಹ: ಆದರೆ, ಚಾಟ್‌ಜಿಪಿಟಿ ಕುರಿತಾದ ಕಥೆಯು ಮೃತ ಮಗನ ವರ್ಚಸ್ಸಿಗೆ ಧಕ್ಕೆ ತರುವ ಮತ್ತು ಘಟನೆಯ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶದಿಂದ ಸೃಷ್ಟಿಸಲಾದ ಕಥೆಯಾಗಿದೆ ಎಂದು ಅವರು ತಂದೆ ಪ್ರತಿಪಾದಿಸಿದರು. ಎಸ್‌ಸಿ/ಎಸ್‌ಟಿ (SC/ST) ಕಾಯ್ದೆಯಡಿ ಪ್ರಾಧ್ಯಾಪಕರನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದರು. ಸಾಹಿಲ್ ಅವರ ದುರಾದೃಷ್ಟಕರ ಸಾವಿನ ಸಂದರ್ಭಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಹೇಳಿಕೆಗಾಗಿ ಐಐಟಿ ಬಾಂಬೆ ಕ್ಷಮೆಯಾಚಿಸಿತು. ಸಾಹಿಲ್ ಅವರ ಸಾವಿನ ವಿವರಗಳು ಸೂಕ್ತ ಪ್ರಾಧಿಕಾರದ ತನಿಖೆಗೆ ಒಳಪಟ್ಟಿವೆ ಎಂದು ಅದು ತಿಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jamui harassment: ಮೂವರ ಬಂಧನ, 7 ಮಂದಿ ಗುರುತು ಪತ್ತೆ.. ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಪೊಲೀಸ್ ಶೋಧ!

Bihar horror:ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧ್ರಭಕ್ತರೇ ಹೊಣೆ - ರಾಹುಲ್ ಗಾಂಧಿ

ಕೇರಳದಲ್ಲಿ ದಿಢೀರ್ ಪ್ರವಾಹ: ಈಜಲು ಹೋದವರು ನೀರುಪಾಲು, 5 ಸಾವು, ಓರ್ವ ನಾಪತ್ತೆ! Video

'ಸಜ್ಜನ ಮುಖವಾಡದ ದುರ್ಜನ ಶಾಸಕ ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್‌ ಯಂತ್ರವೂ ಸಾಲದು'

ಸದರ್ ಬಜಾರ್ ಅಂಗಡಿಯಲ್ಲಿ ಹೀನ ಕೃತ್ಯ: ನೋಟ್‌ಬುಕ್ ಖರೀದಿಸಲು ಬಂದ ಬಾಲಕಿಗೆ ಕೈ, ಕಾಲು ಕಟ್ಟಿ ಹಾಕಿ ಅತ್ಯಾಚಾರ!