ಬಿಹಾರದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಕಿರುಕುಳ 
ದೇಶ

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ಬಿಹಾರದ ಜಮುಯಿ ನಗರದಲ್ಲಿ ಈ ಘಟನೆ ನಡೆದಿದ್ದು, ಕೋಚಿಂಗ್ ತರಗತಿಯಿಂದ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಗೆ ಗುಂಪೊಂದು ಅಡ್ಡಗಟ್ಟಿ ಕಿರುಕುಳ ನೀಡಿದೆ.

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದ್ದು, ಕೋಚಿಂಗ್ ಸೆಂಟರ್ ನಿಂದ ಮನೆಗೆ ವಾಪಸ್ ಆಗುತ್ತಿದ್ದ ಅಪ್ರಾಪ್ತ ಜೋಡಿಯೊಂದನ್ನು ದುಷ್ಕರ್ಮಿಗಳ ಗುಂಪೊಂದು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಬಿಹಾರದ ಜಮುಯಿ ನಗರದಲ್ಲಿ ಈ ಘಟನೆ ನಡೆದಿದ್ದು, ಕೋಚಿಂಗ್ ತರಗತಿಯಿಂದ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಗೆ ಗುಂಪೊಂದು ಅಡ್ಡಗಟ್ಟಿ ಕಿರುಕುಳ ನೀಡಿದೆ.

ನಗರದ ಜನಪ್ರಿಯ ಪ್ರವಾಸಿ ತಾಣವಾದ ಮಡ್ವಾ ಪಹಾಡ್‌ಗೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಾರ್ಗಮಧ್ಯೆ ಕೆಲವರು ಸ್ಕೂಟರ್‌ ಅನ್ನು ತಡೆದು, ಇಬ್ಬರನ್ನೂ ನಿಂದಿಸಿ ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಬಳಿಕ ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿದ್ದಾರೆ.

ಆಗಿದ್ದೇನು?

ವೈರಲ್ ಆಗಿರುವ ವಿಡಿಯೋದಲ್ಲಿ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಬಾಲಕನ ಅಂಗಿಯ ಕಾಲರ್ ಹಿಡಿದು ತನ್ನತ್ತ ಎಳೆಯುತ್ತಿರುವುದು ಕಾಣಿಸುತ್ತದೆ. ಬಾಲಕಿ ಸಹಾಯದಿಂದ ಬಾಲಕ ಆತನ ಹಿಡಿತದಿಂದ ತಪ್ಪಿಸಿಕೊಂಡಿದ್ದು, ಬಳಿಕ ಇಬ್ಬರೂ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾರೆ.

ಈ ವೇಳೆ ಮತ್ತೊಬ್ಬ ವ್ಯಕ್ತಿ ಬಾಲಕಿಯ ಕುತ್ತಿಗೆ ಹಿಡಿದು ನೆಲದಿಂದ ಮೇಲಕ್ಕೆ ಎತ್ತಿ ಹಿಡಿದಿದ್ದಾನೆ. ಬಾಲಕ ತಕ್ಷಣ ಆಕೆಯ ನೆರವಿಗೆ ಧಾವಿಸಿ, ಆಕೆಯನ್ನು ತನ್ನೊಂದಿಗೆ ಕರೆದೊಯ್ಯುವುದನ್ನು ತಡೆದಿದ್ದಾನೆ.

ಗಲಾಟೆಯ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಮುಸುಕುದಾರಿ ವ್ಯಕ್ತಿಯೊಬ್ಬ ಬಾಲಕಿಯ ಎದೆಗೆ ಕೈಹಾಕಿ ತಳ್ಳಿರುವುದೂ ಮತ್ತು ಆಕೆಯನ್ನು ಎತ್ತಿ ಅಶ್ಲೀಲವಾಗಿ ಹಿಡಿದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವೇಳೆ ಬಾಲಕ ಆಕೆಯನ್ನು ಬಿಡುವಂತೆ ಬಲವಂತ ಮಾಡಿದ್ದು, ಇಬ್ಬರೂ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಗುಂಪಿನ ಕಿರುಕುಳ ಮುಂದುವರಿದಿದೆ. ಸ್ಕೂಟರ್‌ನಲ್ಲಿ ತೆರಳಲು ಯತ್ನಿಸಿದಾಗ ಬಾಲಕಿ ಕೈ ಹಿಡಿದು ಎಳೆದಾಡಲಾಗಿದೆ.

ಮತ್ತೊಬ್ಬ ವ್ಯಕ್ತಿ ಇಡೀ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಗುಂಪು ಇಬ್ಬರನ್ನೂ ಕ್ಷಮೆ ಕೇಳುವಂತೆ ಒತ್ತಾಯಿಸಿದೆ. ಈ ವೇಳೆ ಬಾಲಕಿ, “ದಯವಿಟ್ಟು ನಮ್ಮನ್ನು ಹೋಗಲು ಬಿಡಿ. ಮತ್ತೆಂದೂ ಇಲ್ಲಿಗೆ ಬರುವುದಿಲ್ಲ” ಎಂದು ಮನವಿ ಮಾಡುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಬಳಿಕ ಗುಂಪು ಇಬ್ಬರನ್ನೂ ಅಲ್ಲಿಂದ ತೆರಳಲು ಬಿಟ್ಟಿದೆ.

ಪೊಲೀಸ್ ತನಿಖೆ

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆ ಹಾಗೂ ವಿಡಿಯೋ ಕುರಿತು ಮಾಹಿತಿ ದೃಢಪಡಿಸಿದ್ದು, ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಸಂತ್ರಸ್ಥ ಇಬ್ಬರು ಅಪ್ರಾಪ್ತರೊಂದಿಗೆ ಮಾತನಾಡಿದ್ದು, ಅವರ ಹೇಳಿಕೆ ಆಧರಿಸಿ ಘಟನೆಯಲ್ಲಿ ಭಾಗಿಯಾಗಿದ್ದವರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆರೋಪಿಗಳನ್ನು ಗುರುತಿಸುವ ಹಾಗೂ ಘಟನೆಯಲ್ಲಿ ಪ್ರತಿಯೊಬ್ಬರ ಪಾತ್ರವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ವೈರಲ್ ವಿಡಿಯೋದಲ್ಲಿರುವ ಇತರ ವಿವರಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಕಾನೂನು ಸುವ್ಯವಸ್ಥೆ ವಿಚಾರವಾಗಿ ಬಿಜೆಪಿಗೆ ಕಾಂಗ್ರೆಸ್ ತರಾಟೆ

ಈ ಘಟನೆ ಬಳಿಕ ಬಿಹಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪವೂ ಆರಂಭವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಬಾಲಕಿಯರ ಸುರಕ್ಷತೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಹಾಗೂ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, ‘ನೈತಿಕ ಪೊಲೀಸ್’ ಹೆಸರಿನಲ್ಲಿ ಅಪ್ರಾಪ್ತ ಜೋಡಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅವರು ಘಟನೆಯನ್ನು ಬಿಹಾರದ ಕಾನೂನು ಸುವ್ಯವಸ್ಥೆಯ ಸ್ಥಿತಿಗೆ ಸಂಬಂಧಿಸಿದಂತೆ ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)

ರಾಯಲಸೀಮೆ ವಿಸ್ಮಯ; ನೀರಿಲ್ಲದೇ ಗಣಪನ ವಿಸರ್ಜನೆ, ನದಿ ತಟದಲ್ಲಿ ಮೂರ್ತಿಗಳು ಅನಾಥ; ಕೊನೆಗೂ ಸುರಿದ ಮಳೆರಾಯ, Video