ರಣಧೀರ್ ಜೈಸ್ವಾಲ್  
ದೇಶ

'ಪಾಕಿಸ್ತಾನಕ್ಕೆ ಸರಿಯಾದ ಸಲಹೆ ನೀಡಿ': ಜಮ್ಮು- ಕಾಶ್ಮೀರ ಕುರಿತ ಹೇಳಿಕೆ ಬಗ್ಗೆ OIC ಗೆ ಭಾರತದ ತಿರುಗೇಟು!

ಭಾರತದ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸಲು OICಗೆ ಯಾವುದೇ ಅಧಿಕಾರ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ನವದೆಹಲಿ: ಇಸ್ಲಾಮಿಕ್ ಸಹಕಾರ ಸಂಘಟನೆ (OIC) ರಾಷ್ಟ್ರಗಳ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಮಾಡಲಾದ "ಅನಗತ್ಯ ಮತ್ತು ತಪ್ಪಾದ" ಉಲ್ಲೇಖಗಳನ್ನು ಭಾರತವು ಬುಧವಾರ ತಿರಸ್ಕರಿಸಿದೆ.

ಭಾರತದ ಆಂತರಿಕ ವಿಷಯಗಳ ಕುರಿತು ಪ್ರತಿಕ್ರಿಯಿಸಲು OICಗೆ ಯಾವುದೇ ಅಧಿಕಾರ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಅಲ್ಲದೆ, ಜಮ್ಮು- ಕಾಶ್ಮೀರ ಹಾಗೂ ಲಡಾಖ್ ದೇಶದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಪುನರುಚ್ಚರಿಸಿದೆ.

ಪಾಕಿಸ್ತಾನದ ಕಟ್ಟುಕಥೆಯ ಮತ್ತು ದುರುದ್ದೇಶಪೂರಿತ ಪ್ರಚಾರ"ಕ್ಕೆ ವೇದಿಕೆ ಕಲ್ಪಿಸಿದ್ದಕ್ಕಾಗಿ OIC ಯನ್ನು ಟೀಕಿಸಿರುವ ವಿದೇಶಾಂಗ ಸಚಿವಾಲಯವು, ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಉದ್ಭವಿಸುವ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವಂತೆ ಆ ಸಂಘಟನೆಯನ್ನು ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊಲೆ ಆರೋಪಿ ನಟ ದರ್ಶನ್​​ಗೆ ಮತ್ತೊಂದು ಶಾಕ್; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

ರಾಜ್ಯ ಬಿಜೆಪಿ ಉಸ್ತುವಾರಿಗಳ ಬದಲಾವಣೆ; ಕರ್ನಾಟಕಕ್ಕೆ ಹೊಸ ಉಸ್ತುವಾರಿ ನೇಮಕ; ರಾಧಾಮೋಹನ್‌ ದಾಸ್‌ಗೆ ಕೊಕ್!

ಕಚ್ಚಾ ತೈಲ ಬೆಲೆ ಇಳಿಕೆ ಎಫೆಕ್ಟ್; ಕೊನೆಗೂ ಪುಟಿದೆದ್ದ Indian Stock market, ಸೆನ್ಸೆಕ್ಸ್ 299 ಅಂಕ ಏರಿಕೆ!

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್​ಗೆ 1 ಕೋಟಿ ರೂ. ಬಹುಮಾನ ಘೋಷಿಸಿದ ಭಗವಂತ್ ಮಾನ್!

ಆಂತರಿಕ ಆಕ್ಷೇಪಗಳು ಸಹಜ ಪ್ರಕ್ರಿಯೆಯ ಭಾಗ: ಕಾರ್ಯವೈಖರಿ ಕುರಿತ ಪ್ರಶ್ನೆ ತಳ್ಳಿಹಾಕಿದ EC