ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಶಾಕ್ AI Image
ದೇಶ

ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಶಾಕ್; ಕರೆಂಟ್ ಬಿಲ್ ಜೊತೆ ಬರುತ್ತೆ ಟ್ರಾಫಿಕ್ ಚಲನ್!

ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ.! ಹಾಗಾಗಿ, ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್, "ಟ್ರಾಫಿಕ್ ದಂಡವನ್ನು ವಿದ್ಯುತ್ ಬಿಲ್‌ನೊಂದಿಗೆ ಲಿಂಕ್" ಮಾಡುವ ಬಗ್ಗೆ ಮಹತ್ವದ ಸಲಹೆಯೊಂದನ್ನು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ.! ಒಂದು ಅಂದಾಜಿನ ಪ್ರಕಾರ, ಭಾರತದಾದ್ಯಂತ ಸುಮಾರು ₹45,000 ಕೋಟಿಯಷ್ಟು ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಇದೆ ಎನ್ನಲಾಗಿದೆ. ಇದರ ನಡುವೆಯೇ, ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್, "ಟ್ರಾಫಿಕ್ ದಂಡವನ್ನು ವಿದ್ಯುತ್ ಬಿಲ್‌ನೊಂದಿಗೆ ಲಿಂಕ್" ಮಾಡುವ ಬಗ್ಗೆ ಮಹತ್ವದ ಸಲಹೆಯೊಂದನ್ನು ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಸುಪ್ರೀಂ ಕೋರ್ಟ್ ಹೇಳಿದ್ದೇನು?

ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿಚಾರಣೆಯೊಂದರಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು, "ಕೇವಲ ಇ-ಚಲನ್ ಜಾರಿ ಮಾಡುವುದರಿಂದ ಸಂಚಾರ ನಿಯಮ ಉಲ್ಲಂಘಿಸುವವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಜನರು ಟ್ರಾಫಿಕ್ ಚಲನ್ ಪಾವತಿಸದಿದ್ದರೆ, ಅದನ್ನು ಅವರ ವಿದ್ಯುತ್ ಬಿಲ್‌ಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ, ಇಲ್ಲದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ" ಎಂಬ ಮಹತ್ವದ ಸಲಹೆಯೊಂದನ್ನು ನೀಡಿದೆ.

ಇದರೊಂದಿಗೆ, ನ್ಯಾಯಾಲಯವು, ಸಂಚಾರಿ ದಂಡ ಪಾವತಿಗೆ ಇನ್ನೂ ಕೆಲವು ಮಹತ್ವದ ಸಲಹೆ ನಿಡಿದೆ. ಅವು,

  • ವಾಹನ ಸೇವೆಗಳ ಬ್ಲಾಕ್‌ಲಿಸ್ಟ್: ದಂಡ ಪಾವತಿಸದ ವಾಹನಗಳನ್ನು ಪರಿವಾಹನ್ ಪೋರ್ಟಲ್‌ನಲ್ಲಿ ಬ್ಲಾಕ್‌ಲಿಸ್ಟ್ ಮಾಡಲಾಗುತ್ತದೆ. ಇದರಿಂದ ವಾಹನ ವರ್ಗಾವಣೆ, ಆರ್‌ಸಿ (RC) ನವೀಕರಣ ಅಥವಾ ನಕಲಿ ಆರ್‌ಸಿ ಪಡೆಯುವುದನ್ನು ತಡೆಯಬಹುದು.

  • ಪ್ರಮುಖ ಪ್ರಮಾಣಪತ್ರಗಳ ತಡೆ: ದಂಡ ಬಾಕಿ ಇದ್ದರೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ, ಫಿಟ್‌ನೆಸ್ ಸರ್ಟಿಫಿಕೇಟ್ ಅಥವಾ ಚಾಲನಾ ಪರವಾನಗಿ ನವೀಕರಣವನ್ನು ನಿಲ್ಲಿಸಬಹುದು.

  • ರಸ್ತೆಯಲ್ಲೇ ವಾಹನ ಜಪ್ತಿ: ರಸ್ತೆಗಳಲ್ಲಿ ತಪಾಸಣೆ ನಡೆಸಿ, ಬಾಕಿ ಇ-ಚಲನ್ ಹೊಂದಿರುವ ವಾಹನಗಳನ್ನು ಗುರುತಿಸಿ ಸ್ಥಳದಲ್ಲೇ ಜಪ್ತಿ ಮಾಡಲು ನ್ಯಾಯಾಲಯ ಸೂಚಿಸಿದೆ.

ಯುಪಿ, ದೆಹಲಿಯೇ ಟಾಪ್!

ಇತ್ತೀಚೆಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, 2021ರ ಜನವರಿಯಿಂದ 2026ರ ಜುಲೈ 30ರ ಅವಧಿಯಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿ ಈ ಎರಡೇ ಭಾಗಗಳಲ್ಲಿ ಬರೋಬ್ಬರಿ 22,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಂಚಾರ ದಂಡ ಬಾಕಿ ಉಳಿದಿದೆ. ಉತ್ತರ ಪ್ರದೇಶದಲ್ಲಿ ಸುಮಾರು 11,331 ಕೋಟಿ ರೂಪಾಯಿ ಹಾಗೂ ದೆಹಲಿಯಲ್ಲಿ ಸುಮಾರು 11,150 ಕೋಟಿ ರೂಪಾಯಿ ದಂಡ ವಸೂಲಿಯಾಗದೆ ಉಳಿದಿದ್ದು, ದೇಶದ ಒಟ್ಟು ಬಾಕಿ ದಂಡದ ಅರ್ಧಕ್ಕಿಂತ ಹೆಚ್ಚಿನ ಪಾಲು ಈ ಎರಡು ಕಡೆಗಳಲ್ಲೇ ಸಂಗ್ರಹವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ತಮಿಳುನಾಡಿನಲ್ಲಿ 6.37 ಕೋಟಿ ಇ-ಚಲನ್‌ಗಳು ದಾಖಲಾಗಿದ್ದರೂ, ಬಾಕಿ ಉಳಿದಿರುವ ಒಟ್ಟು ದಂಡದ ಮೊತ್ತ ಸುಮಾರು 2,122 ಕೋಟಿ ರೂಪಾಯಿ ಮಾತ್ರ.

ಏತನ್ಮಧ್ಯೆ, ಕರ್ನಾಟಕ ರಾಜ್ಯಾದ್ಯಂತ ಒಟ್ಟು ಬಾಕಿ ಉಳಿದಿರುವ ಸಂಚಾರ ದಂಡದ ಮೊತ್ತ ಸುಮಾರು 2,827 ಕೋಟಿ ರೂಪಾಯಿಗಳಷ್ಟಿದೆ. ಇದರಲ್ಲಿ ಸಿಂಹಪಾಲು ಬೆಂಗಳೂರು ನಗರದ್ದಾಗಿದ್ದು, ರಾಜಧಾನಿಯೊಂದರಲ್ಲೇ 1,000 ಕೋಟಿಗೂ ಅಧಿಕ ಮೊತ್ತದ ಸಂಚಾರ ಇ-ಚಲನ್‌ಗಳು ಬಾಕಿ ಇವೆ. ಇದರ ಜೊತೆಗೆ ಇತ್ತೀಚಿನ ವರದಿಯಂತೆ, ಕೇವಲ ಸರ್ಕಾರಿ ಇಲಾಖೆಗಳು ಮತ್ತು ಪೊಲೀಸ್ ವಾಹನಗಳ ಮೇಲೆಯೇ ಸುಮಾರು 19.23 ಕೋಟಿ ರೂಪಾಯಿ ದಂಡ ಬಾಕಿ ಉಳಿದಿರುವುದು ಬಹಿರಂಗವಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಚೀನಾಗೆ ಶಾಕ್ ಕೊಟ್ಟು ಚಿನ್ನ ಗೆದ್ದ ಭಾರತ; ವಿಶ್ವ ದಾಖಲೆ ಬರೆದ ಮಹಿಳಾ ಆರ್ಚರಿ ಟೀಮ್..!

ಮರುತನಿಖೆಗೂ ಮುನ್ನ ಸೌಜನ್ಯ ಪ್ರಕರಣಕ್ಕೆ ಹಿನ್ನಡೆ: SIT ತಂಡದಿಂದ ಕೈಬಿಡುವಂತೆ ಎಎಸ್ ಪಿ ಪತ್ರ

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಸುಲೈಮಾನ್ ಶಾ ಅಲಿಯಾಸ್ ಮೂಸಾ ಹತ, ಮುಂದುವರೆದ ಸೇನಾ ಕಾರ್ಯಾಚರಣೆ

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!

ಬೆಂಗಳೂರು ವಿಸ್ತರಣೆಗೆ ಸರ್ಕಾರ ಹೊಸ ರೂಪುರೇಷೆ: ಭವಿಷ್ಯದ ಸಂಚಾರ ಸಮಸ್ಯೆ ತಡೆಯಲು ಮಾಸ್ಟರ್ ಪ್ಲ್ಯಾನ್..!