ಭುವನ ಸುಂದರಿ 2021 ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಹರ್ನಾಜ್ ಕೌರ್ ಸಂಧು ಇದೀಗ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಪ್ರಮುಖವಾಗಿ ಭಾರತದ ಪಾಲಿಗೆ 21 ವರ್ಷದ ಬಳಿಕ ಈ ಕಿರೀಟವನ್ನು ತಂದ ಮೊದಲ ಮಹಿಳೆ ಎಂಬ ಕೀರ್ತಿಗೆ ಹರ್ನಾಜ್ ಪಾತ್ರರಾಗಿದ್ದು, ಈ ಪ್ರಶಸ್ತಿ ಮೂಲಕ ಹರ್ನಾಜ್ ಸಾಕಷ್ಟು ಹಣ ಮತ್ತು ಖ್ಯಾತಿ ಗಳಿಸಿದ್ದಾರೆ. ಇದರ ಹೊರತಾಗಿ ಹರ್ನಾಜ್ ಗಳಿಸಿದ್ದೇನು?ಡಿಸೆಂಬರ್ 12ರಂದು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಕೌರ್ ಸಂಧು ಭುವನ ಸುಂದರಿ ಪಟ್ಟಕ್ಕೇರಿದ್ದರು.ಇದು ಲಾರಾ ದತ್ತಾ ಕಿರೀಟ ಪಡೆದ 21 ವರ್ಷಗಳ ಮತ್ತು ಸುಶ್ಮಿತಾ ಸೇನ್ ವಿಜೇತರಾದ 27 ವರ್ಷ ಬಳಿಕ ಹರ್ನಾಜ್ ಕೌರ್ ಸಂಧು ಈ ಕಿರೀಟ ಧರಿಸಿದ್ದರು. ಈ ಗೆಲುವಿನ ಮೂಲಕ ಹರ್ನಾಜ್ ಕೌರ್ ಸಂಧು ಸಾಕಷ್ಚು ಹಣ ಮತ್ತು ಸಾಕಷ್ಟು ಉಡುಗೊರೆಗಳನ್ನು ಪಡೆದಿದ್ದಾರೆ.ಅತ್ಯಂತ ದುಬಾರಿ ಕಿರೀಟ ಮೊದಲನೆಯದಾಗಿ, ಹರ್ನಾಜ್ ಅವರ ತಲೆಗೆ ತೊಡಿಸಿದ ಕಿರೀಟ ಜಗತ್ತಿನ ಅತ್ಯಂತ ದುಬಾರಿ ಕಿರೀಟ ಎಂದು ಹೇಳಲಾಗಿದೆ. ಇದರ ಮೌಲ್ಯವೇ ಸುಮಾರು 5 ಮಿಲಿಯನ್ ಅಮೆರಿಕ ಡಾಲರ್ ಅಥವಾ ರೂ. 37 ಕೋಟಿ ರೂ ಆಗಿದೆ. ಮುಂದಿನ ವಿಶ್ವ ಸುಂದರಿ ಘೋಷಣೆಯಾಗುವವರೆಗೂ ಈ ದುಬಾರಿ ಕಿರೀಟ ಹರ್ನಾಜ್ ಕೌರ್ ಸಂಧು ಅವರ ಬಳಿಯಬಹುಮಾನದ ಹಣ ಭುವನ ಸುಂಧರ ಪ್ರಶಸ್ತಿ ಮೂಲಕ ಹರ್ನಾಜ್ ಕೌರ್ ಸಂಧು 250,000 ಡಾಲರ್ ಅಂದರೆ ರೂ. 1.89 ಕೋಟಿ ರೂ ಮೊತ್ತವನ್ನು ಜಯಿಸಿದ್ದಾರೆ. ಅಧಿಕೃತವಾಗಿ ಅವರಿಗೆ ಈ ಹಣವನ್ನು ಭುವನ ಸುಂದರಿ ಆಯೋಜಕ ಸಂಸ್ಥೆ ಅವರಿಗೆ ವರ್ಗಾಯಿಸಿದೆ.ಜಗತ್ತಿನ ಅತ್ಯಂತ ದುಬಾರಿ ಅಪಾರ್ಟ್ಮೆಂಟ್ ಈ ಪ್ರಶಸ್ತಿಯೊಂದಿಗೇ ಹರ್ನಾಜ್ ಕೌರ್ ಅಮೆರಿಕದಲ್ಲಿ ಜಗತ್ತಿನ ಅತ್ಯಂತ ದುಬಾರಿ ಫ್ಲಾಟ್ ಅನ್ನು ಕೂಡ ಪಡೆಯಲಿದ್ದಾರೆ. ಸ್ಪರ್ಧೆಯ ಒಪ್ಪಂದದ ಭಾಗವಾಗಿ ಅಧಿಕೃತ ಮಿಸ್ ಯೂನಿವರ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಒಂದು ವರ್ಷದವರೆಗೆ ಈ ದುಬಾರಿ ಫ್ಲಾಟ್ ನಲ್ಲಿ ಹರ್ನಾಜ್ ಕೌರ್ ಸಂಧು ವಅದನ್ನು ಪ್ರಸ್ತುತ ಮಿಸ್ USAಯೊಂದಿಗೆ ಅವರು ಹಂಚಿಕೊಳ್ಳಬಹುದು. ಅಪಾರ್ಟ್‌ಮೆಂಟ್‌ನಲ್ಲಿರುವ ದಿನಸಿಯಿಂದ ಹಿಡಿದು ದೈನಂದಿನ ಬಳಕೆಯ ಎಲ್ಲ ಉಪಯುಕ್ತತೆಗಳವರೆಗೆ ಎಲ್ಲದಕ್ಕೂ ಭುವನ ಸುಂದರಿ ಸಂಸ್ಥೆಯೇ ಪಾವತಿ ಮಾಡಲಿದೆ.ವೃತ್ತಿಪರ ತಜ್ಞರಿಗೂ ಸಂಸ್ಥೆಯಿಂದಲೇ ಪಾವತಿ ಇನ್ನು ಹರ್ನಾಜ್ ಕೌರ್ ಸಂಧು ಅವರು ಭುವನ ಸುಂದರಿಯಾಗಿರುವ ಇಡೀ ವರ್ಷ, ಅವರಿಗೆ ಸೇವೆ ನೀಡುವ ಕಲಾವಿದರು, ಛಾಯಾಗ್ರಾಹಕರು, ಸ್ಟೈಲಿಸ್ಟ್‌ಗಳು, ಚರ್ಮರೋಗ ತಜ್ಞರು, ಪೌಷ್ಟಿಕತಜ್ಞರು, ದಂತವೈದ್ಯರು ಮತ್ತು ಇತರರು ಸೇರಿದಂತೆ ತಜ್ಞರ ಎಲ್ಲಾ ವೆಚ್ಚಗಳನ್ನು ಮಿಸ್ ಯೂನಿವರ್ಸ್ಹರ್ನಾಜ್ ಕೌರ್ ಸಂಧು ಅವರಿಗೆಂದೇ ಕೆಲ ತಜ್ಞರನ್ನು ಮಿಸ್ ಯೂನಿವರ್ಸ್ ಸಂಸ್ಥೆ ನೇಮಕ ಮಾಡಲಿದ್ದು, ಈ ತಜ್ಞರ ತಂಡ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾರೆ.ಉಚಿತ ಜಾಗತಿಕ ಪ್ರಯಾಣ ಮತ್ತು ವಿಐಪಿ ಪ್ರವೇಶ ಇದಲ್ಲದೇ ಭುವನ ಸುಂದರಿ ಪಟ್ಟಕ್ಕೇರಿದ ಬಳಿಕ ಹರ್ನಾಜ್ ಕೌರ್ ಸಂಧು ಅವರು ಜಗತ್ತಿನ ಯಾವುದೇ ಮೂಲೆಗೆ ಪ್ರಯಾಣಿಸಿದರೂ ಅವರಿಗೆ ಉಚಿತ ಪ್ರವೇಶವಿರಲಿದೆ.ಅಂದರೆ ಅವರ ಸಂಪೂರ್ಣ ಪ್ರಯಾಣ ವೆಚ್ಚವನ್ನು ಭುವನ ಸುಂದರಿ ಸಂಸ್ಥೆ ನಿರ್ವಹಿಸಲಿದೆ. ಅಲ್ಲದೆ ಅವರಿಗೆ ಎಲ್ಲೆಡೆ ವಿಐಪಿ ಪ್ರವೇಶವಿರಲಿದೆ.ವಿಶ್ವದ ಅತಿದೊಡ್ಡ ಈವೆಂಟ್‌ಗಳು, ಪಾರ್ಟಿಗಳು, ಪ್ರೀಮಿಯರ್ ಷೋಗಳು ಮತ್ತು ಚಲನಚಿತ್ರ ಪ್ರದರ್ಶನಗಳಿಗೆ ಉಚಿತ ವಿಐಪಿ ಪ್ರವೇಶವನ್ನು ಪಡೆಯುತ್ತಾರೆ, ಇಡೀ ವರ್ಷ ಅವರ ಪ್ರಯಾಣ, ವಸತಿ ಮತ್ತು ಆಹಾರದ ವೆಚ್ಚವನ್ನು ಸಂಸ್ಥೆಯು ನೋಡಿಕೊಳ್ಳುತ್ತದೆ.harnaaz-sandhu13harnaaz-sandhu14harnaaz-sandhu15Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos