ಪತಿ ನಿಖಿಲ್ ಜೈನ್ ರೊಂದಿಗಿನ ವಿವಾಹ ಮತ್ತು ಪ್ರತ್ಯೇಕತೆಯ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿರುವ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರ ಬೇಬಿ ಬಂಪ್ ಫೋಟೊವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. 
ಸಿನಿಮಾ

ಪತಿ ನಿಖಿಲ್ ಜೈನ್ ರಿಂದ ಬೇರಾಗಿರುವ ನಡುವೆಯೇ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಬೇಬಿ ಬಂಪ್ ಫೋಟೋ ವೈರಲ್!

ಪತಿ ನಿಖಿಲ್ ಜೈನ್ ರೊಂದಿಗಿನ ವಿವಾಹ ಮತ್ತು ಪ್ರತ್ಯೇಕತೆಯ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿರುವ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರ ಬೇಬಿ ಬಂಪ್ ಫೋಟೊವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.

ಪತಿ ನಿಖಿಲ್ ಜೈನ್ ರೊಂದಿಗಿನ ವಿವಾಹ ಮತ್ತು ಪ್ರತ್ಯೇಕತೆಯ ವಿಚಾರವಾಗಿ ಭಾರಿ ಸುದ್ದಿಗೆ ಗ್ರಾಸವಾಗಿರುವ ತೃಣಮೂಲಕ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರ ಬೇಬಿ ಬಂಪ್ ಫೋಟೊವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.
ಇದೇ ವೇಳೆ ನುಸ್ತರ್ ಜಹಾನ್ ಅವರ ಹೆಸರು ಬಂಗಾಳೀ ನಟ ಯಶ್‌ ದಾಸ್‌ಗುಪ್ತಾ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದು, ಇಬ್ಬರ ನಡುವೆ ಗಾಢ ಸ್ನೇಹವಿದೆ. ಇಬ್ಬರೂ ಈ ಹಿಂದೆ ರಾಜಸ್ಥಾನಕ್ಕೆ ಟ್ರಿಪ್‌ ಕೂಡಾ ಹೋಗಿದ್ದರು ಎಂದು ಹೇಳಲಾಗಿದೆ.
ಪತಿ ನಿಖಿಲ್ ಜೈನ್ ರೊಂದಿಗಿನ ವಿವಾಹಕ್ಕೆ ಕಾನೂನು ಮಾನ್ಯತೆಯೇ ಇಲ್ಲ.. ಹೀಗಾಗಿ ವಿಚ್ಛೇದನದ ಪ್ರಶ್ನೆಯೇ ಉದ್ಘವಿಸುವುದಿಲ್ಲ ಎಂದು ಹೇಳುವ ಮೂಲಕ ಪತಿ ನಿಖಿಲ್ ಜೈನ್ ರೊಂದಿಗಿನ ಸಂಬಂಧ ಹಳಿಸಿರುವ ಕುರಿತು ನುಸ್ರತ್ ಮಾಹಿತಿ ನೀಡಿದ್ದರು.
ಇದಕ್ಕೆ ಇಂಬು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬೇಬಿ ಬಂಪ್ ಫೋಟೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.ನುಸ್ರತ್ ಜಹಾನ್ ನ್ಯೂಸ್ (nusratjahanews) ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಅಪ್ಲೋಡ್ ಆಗಿದೆ.
ನುಸ್ರತ್ ಜಹಾನ್ ಮತ್ತು ಬೆಂಗಾಲಿ ನಟಿ ಸ್ರಬಂತಿ ಚಟರ್ಜಿ ಅವರೊಂದಿಗಿನ ಫೋಟೋ ಇದೀಗ ವೈರಲ್ ಆಗಿದೆ. ಫೋಟೋದಲ್ಲಿ ನಸ್ರತ್ ಜಹಾನ್ ಗರ್ಭಿಣಿಯಾಗಿರುವಂತೆ ತೋರುತ್ತಿದೆ. ಆದರೆ ಈ ಬಗ್ಗೆ ನುಸ್ರತ್ ಜಹಾನ್ ಆಗಲೀ ಅಥವಾ ಕುಟುಂಬಸ್ಥರಾಗಲಿ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ನುಸ್ರತ್ ಜಹಾನ್ ಅವರು, ನಿಖಿಲ್ ಜೈನ್ ರೊಂದಿಗಿನ ಮದುವೆ ಕಾನೂನಾತ್ಮಕವಲ್ಲ, ಹೀಗಾಗಿ ವಿಚ್ಛೇದನ ಪ್ರಶ್ನೆ ಉದ್ಭವಿಸುವುದಿಲ್ಲ. ನಾವಿಬ್ಬರು ಬೇರ್ಪಟ್ಟು ಬಹಳ ದಿನಗಳೇ ಆಗಿವೆ. ಆದರೆ ನನ್ನ ಖಾಸಗಿ ಬದುಕಿನ ವಿಷಯಗಳನ್ನು ಕೇವಲ ನನ್ನಷ್ಟಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲು ನಾನು ಬಯಸ
ನನ್ನ ವೈಯಕ್ತಿಕ ಬದುಕಿನ ಬಗ್ಗೆಯಾಗಲೀ ಅಥವಾ ನನಗೆ ಸಂಬಂಧಪಡದಿರುವವರ ಬಗ್ಗೆಯಾಗಲೀ ನಾನು ಯಾವತ್ತೂ ಮಾತನಾಡುವುದಿಲ್ಲ. ಹಾಗಾಗಿ ತಮ್ಮನ್ನು ತಾವು 'ನಾರ್ಮಲ್ ಜನ' ಎಂದು ಕರೆದುಕೊಳ್ಳುವವರು ತಮಗೆ ಸಂಬಂಧಪಡದ ಯಾವುದೇ ವಿಷಯದಲ್ಲಿ ಮೂಗು ತೂರಿಸಬಾರದು. ಬಹಳ ಸಮಯದವರಗೆ ತನ್ನ ಬದುಕಿನ ಭಾಗವಾಗಿದ್ದ ಒಬ್ಬ ಅಸಮರ್ಥ ವ್ಯಕ್ತ
ಇನ್ನು ನುಸ್ರತ್ 6 ತಿಂಗಳ ಗರ್ಭಿಣಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ನಿಖಿಲ್ ಜೈನ್, ಮದುವೆ ನೋಂದಣಿ ಮಾಡಿಸೋಣ ಎಂದು ಹೇಳಿದ್ದೆ.. ಆದರೆ ನುಸ್ರತ್ ಜಹಾನ್ ನಿರ್ಲಕ್ಷಿಸಿದರು. ಅಲ್ಲದೆ ನಾವು 6 ತಿಂಗಳನಿಂದ ಜೊತೆಯಲ್ಲಿಲ್ಲ.. ಆ ಮಗು ನನ್ನದಲ್ಲ.
ನಾವು ಒಟ್ಟಿಗೆ ಇದ್ದ ಸಮಯದಲ್ಲಿ, ಮದುವೆಯನ್ನು ನೋಂದಾಯಿಸಲು ನಾನು ಹಲವಾರು ಸಂದರ್ಭಗಳಲ್ಲಿ ನುಸ್ರತ್ ಳನ್ನು ವಿನಂತಿಸಿದೆ ಆದರೆ ಆಕೆ ನನ್ನ ಮಾತಿಗೆ ಬೆಲೆ ನೀಡಲೇ ಇಲ್ಲ. 2020 ರ ಆಗಸ್ಟ್‌ನಿಂದ, ಸಿನಿಮಾ ಚಿತ್ರೀಕರಣದ ಸಮಯದಲ್ಲಿ, ಆಕೆಯ ವರ್ತನೆ ಬದಲಾಯಿತು. ಹೀಗಾಗಿ ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ ಕಳೆದ ವರ್ಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT