ಬಾಲಿವುಡ್ ನ ಲವ್ ಬರ್ಡ್ಸ್ ಗಳಾದ ರಣಬೀರ್ ರಪೂರ್-ಆಲಿಯಾ ಭಟ್ ವಿವಾಹ ಮುಂಬೈನ ಬಾಂದ್ರಾದಲ್ಲಿರುವ ವಾಸ್ತು ಅಪಾರ್ಟ್ ಮೆಂಟ್ ನಲ್ಲಿ ನೆರವೇರುತ್ತಿದೆ.
ಈಗಾಗಲೇ ಮದುವೆ ಕಾರ್ಯಕ್ರಮ ಆರಂಭವಾಗಿದ್ದು ಮಧು-ವರನ ಕಡೆಯವರು ಆಗಮಿಸುತ್ತಿದ್ದಾರೆ. ರಣಬೀರ್ ಕಪೂರ್ ತಾಯಿ ನೀತು ಕಪೂರ್ ಹಾಗೂ ಸೋದರಿ ರಿದ್ದಿಮಾ ಕಪೂರ್ , ಆಲಿಯಾ ಭಟ್ ತಂದೆ ಮಹೇಶ್ ಭಟ್, ತಾಯಿ ಹಾಗೂ ಸೋದರಿ ಆಗಮಿಸಿದ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.ಕಳೆದ ರಾತ್ರಿ ಹಳದಿ ಸಮಾರಂಭ ನೆರವೇರಿತ್ತು. ಅದಕ್ಕೆ ಇಡೀ ಕಪೂರ್ ಮನೆತನ ಮತ್ತು ಭಟ್ ಕುಟುಂಬಸ್ಥರು ಭಾಗಿಯಾಗಿದ್ದರು.ಆಲಿಯಾ ಮತ್ತು ರಣಬೀರ್ ನಿವಾಸಕ್ಕೆ ನಾಲ್ಕೈದು ದಿನಗಳ ಕಾಲ ಭದ್ರತೆ ಒದಗಿಸಲಾಗಿದೆ ಎಂದು ಆಲಿಯಾರ ಭದ್ರತಾ ಮುಖ್ಯಸ್ಥ ಯೂಸಫ್ ಇಬ್ರಾಹಿಂ ಹೇಳಿದ್ದಾರೆ.ರಣಬೀರ್ ಕಪೂರ್ ಸಹೋದರಿಯರಾದ ಕರಿಶ್ಮಾ ಕಪೂರ್, ಕರೀನಾ ಕಪೂರ್, ಆದಾರ್, ಅರ್ಮನ್ ಜೈನ್ ಅವರ ತಾಯಿ ರಿಮಾ ಜೈನ್ ಜೊತೆ ಆಗಮಿಸಿದ್ದರು.ರಣಬೀರ್, ಆಲಿಯಾ ವಿವಾಹವಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ರನ್ಲಿಯಾ, ರಲಿಯಾ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಈ ಹಿಂದೆ ಸ್ಟಾರ್ ದಂಪತಿಗಳಾದ ವಿರಾಟ್-ಅನುಷ್ಕಾ ಮದುವೆ ಸಂಗರ್ಭದಲ್ಲಿ ವಿರುಷ್ಕಾ, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಮದುವೆ ಸಂದರ್ಭದಲ್ಲಿ ಡೀಪ್ ವೀರ್ ಮತ್ತು ವಿಕ್ಕಿ ಕೌಶಲ್-ಕತ್ರಿನಾ ಕೈನಿರ್ದೇಶಕ ಕರಣ್ ಜೋಹರ್ ಮತ್ತು ಆಯಾನ್ ಮುಖರ್ಜಿ, ಮಹೇಶ್ ಭಟ್, ಪೂಜಾ ಭಟ್ ಕೂಡ ಇದ್ದರು.ಇನ್ನು ಮಗನ ಮದುವೆ ಸಂದರ್ಭದಲ್ಲಿ 1979ರ ಏಪ್ರಿಲ್ 13ರಂದು 43 ವರ್ಷಗಳ ಹಿಂದೆ ಇದೇ ದಿನ ತಾನು ಮತ್ತು ರಿಷಿ ಕಪೂರ್ ನಿಶ್ಚಿತಾರ್ಥ ಮಾಡಿಕೊಂಡ ದಿನವನ್ನು ನೀತು ಕಪೂರ್ ಸ್ಮರಿಸಿಕೊಂಡಿದ್ದಾರೆ.ರಣಬೀರ್ ತಾಯಿ ನೀತು ಕಪೂರ್ ಮತ್ತು ಸೋದರಿ ರಿದ್ದಿಮಾ ಆಗಮನರಣಬೀರ್ -ಆಲಿಯಾ 8 ವರ್ಷಗಳ ಹಿಂದೆ ಬ್ರಹ್ಮಸೂತ್ರ ಸಿನಿಮಾ ಸಂದರ್ಭದಲ್ಲಿ ಪ್ರೀತಿಸಲು ಆರಂಭಿಸಿದ್ದರು.