ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ಮತ್ತು ಧನುಷ್ ಅಭಿಮಾನಿಗಳಿಗೆ ನಿನ್ನೆ ಶಾಕಿಂಗ್ ಸುದ್ದಿಯೊಂದು ಇದ್ದಕ್ಕಿದ್ದಂತೆ ಹೊರಬಂತು. ಖ್ಯಾತ ನಟ ಧನುಷ್ ಪತ್ನಿ ಹಿರಿಯ ನಟ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾಗೆ ವಿಚ್ಛೇದನ ನೀಡುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿಕೊಂಡರು. ನಿಜಕ್ಕೂ ಅವರ ಅಭಿಮಾನಿಗಳಿ 
ಸಿನಿಮಾ

18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಐಶ್ವರ್ಯ-ಧನುಷ್ ಲವ್ ಸ್ಟೋರಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ಮತ್ತು ಧನುಷ್ ಅಭಿಮಾನಿಗಳಿಗೆ ನಿನ್ನೆ ಶಾಕಿಂಗ್ ಸುದ್ದಿಯೊಂದು ಇದ್ದಕ್ಕಿದ್ದಂತೆ ಹೊರಬಂತು. ಖ್ಯಾತ ನಟ ಧನುಷ್ ಪತ್ನಿ ಹಿರಿಯ ನಟ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾಗೆ ವಿಚ್ಛೇದನ ನೀಡುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿಕೊಂಡರು.

18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದವರು ಧನುಷ್(Dhanush)​ ಹಾಗೂ ಐಶ್ವರ್ಯಾ(Aishwarya). ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ನಟ ಧನುಷ್ ಜೊತೆ ದಾಂಪತ್ಯಕ್ಕೆ ದಾಂಪತ್ಯಕ್ಕೆ ಕಾಲಿಟ್ಟಿದ್ದು ದೊಡ್ಡ ಸಂಭ್ರಮವೇ ಆಗಿತ್ತು.
ಧನುಷ್ ಹಾಗೂ ಐಶ್ವರ್ಯಾ ಲವ್ ಸ್ಟೋರಿ ತಿಳಿಸಿದ್ದ ರಜನಿ, ಇಬ್ಬರನ್ನೂ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರು.
ಆಗ ಧನುಷ್‌ಗೆ ಕೇವಲ 21 ವರ್ಷ. ಐಶ್ವರ್ಯಾಗೆ 23 ವರ್ಷ. ತನ್ನ ಮಗಳಿಗಿಂತ ಎರಡು ವರ್ಷ ಚಿಕ್ಕವನಾಗಿದ್ದರೂ ರಜನಿ ಒಪ್ಪಿಗೆ ನೀಡಿದ್ದರು. ತನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದರು ರಜನಿಕಾಂತ್​.
ಧನುಷ್‌ ಅಭಿನಯಿಸಿದ್ದ 'ಕಾದಲ್ ಕೊಂಡೈನ್' ಸಿನಿಮಾ ನೋಡಿ ಐಶ್ವರ್ಯಾ ಫಿದಾ ಆಗಿದ್ದರು. ಸಿನಿಮಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿತ್ತು. ಹೀಗಾಗಿ ಈ ಸಿನಿಮಾವನ್ನು ನೋಡುವುದಕ್ಕೆ ರಜನಿಕಾಂತ್ ಪುತ್ರಿ ಐಶ್ವರ್ಯಾ ಕೂಡ ಬಂದಿದ್ದರು. ಈ ಸಿನಿಮಾ ನೋಡಿದ ಬಳಿಕ ಧನುಷ್ ಅಭಿನಯ ರಜನಿಕಾಂತ್ ಪುತ್ರಿ ಐಶ್ವ
ಇವರಿಬ್ಬರ ಲವ್​ ವಿಚಾರ ಮಾಧ್ಯಮಗಳಲ್ಲಿ ಹರಿದಾಡಲು ಶುರುವಾಗಿತ್ತು. ಕೇವಲ ಆರು ತಿಂಗಳಲ್ಲಿಯೇ ಇಬ್ಬರ ಪ್ರೀತಿ ಬೆಳಕಿಗೆ ಬಂದಿತ್ತು. ಇದು ಸೂಪರ್‌ಸ್ಟಾರ್ ರಜನಿಕಾಂತ್ ಕಿವಿಗೂ ಬಿತ್ತು. ಹೀಗಾಗಿ ತಕ್ಷಣವೇ ಮಗಳ ಮದುವೆ ಮಾಡಲು ನಿರ್ಧರಿಸಿದ್ದರು. ಆಗ ಧನುಷ್‌ಗೆ ಕೇವಲ 21 ವರ್ಷ. ಐಶ್ವರ್ಯಾಗೆ 23 ವರ್ಷ. ತನ್ನ ಮಗಳಿಗಿಂ
ರಜನಿಕಾಂತ್ ಜೊತೆ ದಂಪತಿಯಾಗಿದ್ದ ಐಶ್ವರ್ಯ-ಧನುಷ್
ಐಶ್ವರ್ಯ-ಧನುಷ್
ತಮ್ಮ ಜೀವನದಲ್ಲಿ ತಂದೆ ರಜನಿಕಾಂತ್ ಪ್ರಭಾವ ಸಾಕಷ್ಟಿದೆ ಎಂದಿದ್ದರು ಐಶ್ವರ್ಯ
ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ದಕ್ಷಿಣ ಭಾರತದ ಅತ್ಯಂತ ಪ್ರಭಾವಿ ಕುಟುಂಬದಿಂದ ಬಂದವರು. ನವೆಂಬರ್ 18, 2004 ರಂದು ಆರು ತಿಂಗಳ ಡೇಟಿಂಗ್‌ನ ನಂತರ ಧನುಷ್ ಮತ್ತು ಐಶ್ವರ್ಯಾ ಅಂತಿಮವಾಗಿ ಮದುವೆಯಾದರು, ಇವರಿಗೆ ಯಾತ್ರ ರಾಜ್ ಮತ್ತು ಲಿಂಗ ರಾಜ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ
ಧನುಷ್ ಕೇವಲ ತಮಿಳು ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಛಾಪು ಮೂಡಿಸಿರುವ ನಟ
ಕಳೆದ ವರ್ಷ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ನಂತರ ಐಶ್ವರ್ಯ ಈ ಫೋಟೋ ಹಂಚಿಕೊಂಡು ಹೆಮ್ಮೆಯ ತಂದೆ, ಹೆಮ್ಮೆಯ ಪತಿ, ಇವರಿಬ್ಬರೂ ನನ್ನವರು ಎಂದು ಬರೆದುಕೊಂಡಿದ್ದರು. ಅಂತಹ ದಂಪತಿ ಬಾಳಲ್ಲಿ ಅಪಸ್ವರ ಹೇಗೆ ಮೂಡಿತು ಎಂಬ ಪ್ರಶ್ನೆ ಅಭಿಮಾನಿಗಳದ್ದಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!