ಒಂದಲ್ಲ ಎರಡಲ್ಲ..ಇದುವರೆಗೆ ನಾಲ್ಕು ಬಾರಿ ವಿಚ್ಛೇದನ ಪಡೆದಿದ್ದಾಳೆ. ಅಷ್ಟೇ ಅಲ್ಲ ಇದೀಗ ತನ್ನ ಐದನೇ ಪತಿಗೂ ವಿಚ್ಛೇದನ ನೀಡಲು ಸಿದ್ಧತೆ ನಡೆಸಿದ್ದಾಳೆ. ಆಕೆ ಬೇರೇ ಯಾರು ಅಲ್ಲ. ಹಾಲಿವುಡ್ ನಟಿ ಪಮೇಲಾ ಆಂಡರ್ಸನ್. 
ಸಿನಿಮಾ

5ನೇ ಪತಿಗೂ ವಿಚ್ಛೇದನ ನೀಡಿದ ಹಾಲಿವುಡ್ ನಟಿ: ಪಮೇಲಾ ಆಂಡರ್ಸನ್ ರ ಮಾಜಿ ಗಂಡಂದಿರ ಪಟ್ಟಿ ಇಂತಿದೆ!

ಒಂದಲ್ಲ ಎರಡಲ್ಲ.. ಇದುವರೆಗೆ ನಾಲ್ಕು ಬಾರಿ ವಿಚ್ಛೇದನ ಪಡೆದಿದ್ದಾಳೆ. ಅಷ್ಟೇ ಅಲ್ಲ ಇದೀಗ ತನ್ನ ಐದನೇ ಪತಿಗೂ ವಿಚ್ಛೇದನ ನೀಡಲು ಸಿದ್ಧತೆ ನಡೆಸಿದ್ದಾಳೆ. ಆಕೆ ಬೇರೇ ಯಾರು ಅಲ್ಲ. ಹಾಲಿವುಡ್ ನಟಿ ಪಮೇಲಾ ಆಂಡರ್ಸನ್. 

54 ವರ್ಷದ ಪಮೇಲಾ ಆಂಡರ್ಸನ್ ನಾಲ್ಕು ಬಾರಿ ವಿವಾಹ ವಾಗಿದ್ದರು. ಅವೆಲ್ಲವೂ ಮುರಿದುಬಿದ್ದಿವೆ. ಆ ನಂತರ 2020ರಲ್ಲಿ ಐದನೇ ಬಾರಿಗೆ ವಿವಾಹವಾಗಿದ್ದರು. ಕೊರೊನಾ ಕಾರಣ ವಿಧಿಸಿದ ಲಾಕ್‌ಡೌನ್‌ ವೇಳೆ ತನ್ನ ಅಂಗ ರಕ್ಷಕ ಡಾನ್ ಹಾಸ್ಟ್ ಗೆ ಅತ್ಯಂತ ಸಮೀಪವಾಗಿದ್ದರು. ಆ ಸಮಯದಲ್ಲಿ ಇಬ್ಬರೂ ಪ್ರೇಮಕ್ಕೆ ಸಿಲುಕಿದರು.
ವಿವಾಹ ಬಂಧನದೊಂದಿಗೆ ಒಂದಾಗೋಣ ಎಂದು ನಿರ್ಧರಿಸಿದರು. ಲಾಕ್‌ಡೌನ್‌ನಲ್ಲಿ ಮದುವೆಯಾಗಿ ಒಟ್ಟಿಗೆ ಸೇರೋಣ ಎಂದು ನಿರ್ಧರಿಸಿದರು. ಆದರೆ, ಅವರು ದೀರ್ಘಕಾಲ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ವಿವಾಹವಾಗಿ ವರ್ಷ ತುಂಬುವ ಮುನ್ನವೇ ದಂಪತಿ ನಡುವೆ ಮನಸ್ಥಾಪ ಸೃಷ್ಟಿಯಾಗಿದೆ. ಇದರಿಂದ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ
ಪಮೇಲಾ ಆಂಡರ್ಸನ್ ಮೊದಲು 1995ರಲ್ಲಿ ಟಾಮಿ ಲೀ ಅವರನ್ನು ವಿವಾಹವಾಗಿದ್ದರು. ಅವರಿಗೆ ಬ್ರಾಂಡನ್ , ಡೈಲಾನ್‌ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ್ದರು.
2006ರಲ್ಲಿ ಸಂಗೀತಗಾರ ಕಿಡ್ ರಾಕ್ ಅವರನ್ನು ವಿವಾಹವಾಗಿದ್ದರು. ಆದರೆ ಆ ಬಂಧ ದೀರ್ಘಕಾಲ ಉಳಿಯಲಿಲ್ಲ.
ಪಮೇಲಾ ಅವರು 2014ರಲ್ಲಿ ರಿಕ್ ಅವರನ್ನು ವಿವಾಹವಾಗಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದರು. ಆದರೆ ಆ ಸಂತೋಷ ಕೂಡ ಬಹಳ ದಿನ ಉಳಿಯಲಿಲ್ಲ. ಮುಂದಿನ ವರ್ಷ ಇಬ್ಬರೂ ಬೇರೆಯಾದರು.
2020ರಲ್ಲಿ ಆಕೆ ನಿರ್ಮಾಪಕ ಜಾನ್ ಪೀಟರ್ಸ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದು ಕೆಲ ದಿನಗಳ ನಂತರ ಅದು ಮುರಿದಿಬಿತ್ತು.
ಇದೇ ವರ್ಷ ಡಿಸೆಂಬರ್ ನಲ್ಲಿ ಬಾಡಿಗಾರ್ಡ್ ಡಾನ್ ಹಾಸ್ಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಮೇಲಾ ಈಗ ಅದನ್ನೂ ಮುಗಿಸಲು ತಯಾರಿ ನಡೆಸಿದ್ದಾರೆ.
ಪಮೇಲಾ ಅವರು ಹಾಲಿವುಡ್ ನಟ ಡ್ವೈನ್ ಜಾನ್ಸನ್ ನಟನೆಯ ಬೇವಾಚ್ ಚಿತ್ರದಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!