ನಟ ದಿವಂಗತ ಪುನೀತ್ ರಾಜ್ ಕುಮಾರ್(Late Puneeth Rajkumar) ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ(Posthumously)(Karnataka Ratna) ಪ್ರಶಸ್ತಿ ನೀಡಿ ಗೌರವಿಸಿದೆ. 
ಕರ್ನಾಟಕ

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ; ಸಮಾರಂಭದ ಫೋಟೋಗಳು

ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಸಮಾರಂಭದ ಚಿತ್ರಗಳು ಇಲ್ಲಿವೆ.

ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ವಿಧಾನಸೌಧ ಮುಂಭಾಗ ನಡೆದ ಸಮಾರಂಭದಲ್ಲಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷೆ ಡಾ ಸುಧಾ ಮೂರ್ತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.ಪ್ರಶಸ್ತಿಯು 50 ಗ್ರಾಮ್ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಹಾಗೂ ಒಂದು ಶಾಲನ
ವಿಧಾನಸೌಧ ಮೆಟ್ಟಿಲು ಮೇಲೆ ನಡೆದ ಭವ್ಯ ಸಮಾರಂಭಕ್ಕೆ ಗಣ್ಯರು, ಖ್ಯಾತನಾಮರು, ರಾಜ್ ಕುಮಾರ್ ಕುಟುಂಬಸ್ಥರು, ಪುನೀತ್ ಅಭಿಮಾನಿಗಳು ಹಾಗೂ ಇಡೀ ಕರ್ನಾಟಕದ ಜನತೆ ಸಾಕ್ಷಿಯಾದರು. ಕಾರ್ಯಕ್ರಮ ವೇಳೆ ವರ್ಷಧಾರೆಯಾಗಿದ್ದು ಮಳೆಯ ನಡುವೆಯೇ ಗಣ್ಯರು, ಅತಿಥಿಗಳು ಸಮಾರಂಭದಲ್ಲಿ ಭಾಗವಹಿಸಬೇಕಾಗಿ ಬಂತು.
ಕರ್ನಾಟಕ ರಾಜ್ಯ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಇದಾಗಿದ್ದು, ಈವರೆಗೂ ಕರ್ನಾಟಕದಲ್ಲಿ ಎಂಟು ಜನರಿಗೆ ನೀಡಲಾಗಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ 9ನೇ ರತ್ನ ಪುನೀತ್ ರಾಜ್ ಕುಮಾರ್. 1992ರಲ್ಲಿ ಡಾ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಗೌರವ ಸಿಕ್ಕಿತ್ತು. 30 ವರ್ಷಗಳ ನಂತರ ಅವರ ಮಗನಿಗೆ ಮರಣೋತ್ತರವಾ
ಮಳೆಯ ನಡುವೆ ಅಭಿಮಾನ ಮೆರೆದ ಅಪ್ಪು ಅಭಿಮಾನಿಗಳ, ವಿಧಾನಸೌಧ ಮುಂದೆ ರಾರಾಜಿಸಿದ ಅಪ್ ಕಟೌಟ್, ಕನ್ನಡ ಬಾವುಟ
ವಿಧಾನಸೌಧ ಮುಂದೆ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ರಾರಾಜಿಸಿದ ಪುನೀತ್, ಡಾ ರಾಜ್ ಕುಮಾರ್ ಕಟೌಟ್
ವಿಧಾನಸೌಧ ಮುಂದೆ ಸೇರಿದ ಅಪಾರ ಜನಸಾಗರ
ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್
ಮಳೆಯ ನಡುವೆಯೇ ವೇದಿಕೆ ಹತ್ತಿದ ಸೂಪರ್ ಸ್ಟಾರ್ ರಜನಿಕಾಂತ್
ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಸನ್ಮಾನ ಕ್ಷಣ
ಇಡೀ ಕನ್ನಡ ಜನತೆಗೆ ವಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್.
ಕಾರ್ಯಕ್ರಮದಲ್ಲಿ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್, 1979ರಲ್ಲಿ ನಾನು ಮೊದಲ ಬಾರಿಗೆ ಚೆನ್ನೈನಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ನೋಡಿದೆ. ಅಲ್ಲಿ ನಂಬಿಯಾರ್​ ಸ್ವಾಮಿ ಅಂತ ಇದ್ದಾರೆ. ಅವರು ಪ್ರತಿ ವರ್ಷ ಶಬರಿಮಲೆಗೆ ಬಂದು 48 ಕಿಲೋಮೀಟರ್​ ನಡೆದುಹೋಗ್ತಾರೆ. ಅವರ ಜೊತೆ 250 ಜನ ಸ್ವಾಮಿಗಳು ಹೋಗ್ತಾರೆ.
ಆ ಮಗುವಿನ ಧ್ವನಿ ಒಂದು ಜೇಂಕಾರದ ಸದ್ದಿನಂತೆ ಇತ್ತು. ಅದನ್ನು ಕೇಳಿ ಎಲ್ಲರಿಗೂ ರೋಮಾಂಚನ ಆಗಿಬಿಡ್ತು. ಯಾರ ಧ್ವನಿ ಎಂದು ಹೋಗಿ ನೋಡಿದರೆ ಡಾ. ರಾಜ್​ಕುಮಾರ್​ ಅವರ ಮಡಿಲಿನಲ್ಲಿ ನಾಲ್ಕು ವರ್ಷದ ಚಿಕ್ಕ ಮಗು ಕುಳಿತಿತ್ತು. ಕಪ್ಪು ಬಣ್ಣದ ಮಗುವಿನ ಮುಖದಲ್ಲಿ ಚಂದ್ರನಂತಹ ಕಳೆ. ಎಲ್ಲರಿಗೂ ಆ ಮಗುವನ್ನು ಕಂಡರೆ ಇಷ್ಟ.
ಅಂದು ನೋಡಿದ ನಮ್ಮ ಪುನೀತ್​ ಬೆಳೆದು ಸ್ಟಾರ್​ ಆದ. ಅಪ್ಪು ಸಿನಿಮಾ 100 ಡೇಸ್​ ಓಡಿತು. ನನ್ನ ಕೈಯಾರೆ ಶೀಲ್ಡ್​ ನೀಡಿದ್ದೆ. ಇಂದು ಅಪ್ಪು ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನರಾದಾಗ ನನಗೆ ಆಪರೇಷನ್​ ಆಗಿ ಐಸಿಯುನಲ್ಲಿ ಇದ್ದೆ. ಮೂರು ದಿನ ಆದ ಬಳಿಕ ನನಗೆ ವಿಷಯ ತಿಳಿಯಿತು’ ಎಂದ
ತಮ್ಮ ನಿವಾಸಕ್ಕೆ ಕರೆದು ಜೂನಿಯರ್ ಎನ್ ಟಿಆರ್ ರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಒಬ್ಬ ಮನುಷ್ಯನಿಗೆ ಉಪನಾಮ ಎಂಬುದು ಹಿರಿಯರಿಂದ ಬರುತ್ತದೆ. ಆದರೆ ವ್ಯಕ್ತಿತ್ವ ಎಂಬುದು ಸ್ವಂತ ಸಂಪಾದನೆ. ಅಹಂ ಇಲ್ಲದೇ, ಯುದ್ಧ ಮಾಡದೇ ಕೇವಲ ನಗುವಿನಿಂದ, ವ್ಯಕ್ತಿತ್ವದಿಂದ ಒಂದು ರಾಜ್ಯವನ್ನು ಗೆದ್ದ ರಾಜ ಯಾ
ತಮ್ಮ ಗೆಳೆಯ ನಟ ಜೂನಿಯರ್ ಎನ್ ಟಿಆರ್ ರನ್ನು ಬರಮಾಡಿಕೊಂಡ ಸಚಿವ ಡಾ ಕೆ ಸುಧಾಕರ್
ತಾರಕ್ ಗೆ ಪುಸ್ತಕ ನೀಡುತ್ತಿರುವ ಡಾ ಕೆ ಸುಧಾಕರ್
ಜೂನಿಯರ್ ಎನ್ ಟಿಆರ್ ಆಗಮನ, ಪುನೀತ್​ ಅವರು ಒಬ್ಬ ಸೂಪರ್​ ಸ್ಟಾರ್​, ಶ್ರೇಷ್ಠ ತಂದೆ, ಶ್ರೇಷ್ಠ ಪತಿ, ಶ್ರೇಷ್ಠ ಸ್ನೇಹಿತ ಆಗಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಅವರು ಶ್ರೇಷ್ಠ ಮಾನವನಾಗಿದ್ದರು. ಅವರ ನಗುವಿನಲ್ಲಿ ಇದ್ದ ಶ್ರೀಮಂತಿಕೆ ಬೇರೆ ಎಲ್ಲೂ ನಾನು ನೋಡಿಲ್ಲ. ಅದಕ್ಕಾಗಿ ಅವರನ್ನು ನಗುವಿನ ಒಡೆಯ ಅನ್ನೋದು. ಇವ
ವಿಧಾನಸೌದ ಮುಂದೆ ಕಾರ್ಯಕ್ರಮದಲ್ಲಿ ಡಾ ಶಿವರಾಜ್ ಕುಮಾರ್ ರನ್ನು ಆಲಂಗಿಸಿಕೊಂಡ ರಜನಿಕಾಂತ್
ಗಂಧಗ ಗುಡಿ ಚಿತ್ರೀಕರಣ ಸಮಯದಲ್ಲಿನ ಪುನೀತ್ ರಾಜ್ ಕುಮಾರ್ ಫೋಟೋ
ಗಂಧದ ಗುಡಿ ಸಾಕ್ಷ್ಯಚಿತ್ರ ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಸಂಗ್ರಹ ಚಿತ್ರ
ಕರ್ನಾಟಕ ರತ್ನ ಪ್ರಶಸ್ತಿಯನ್ನು ಕುಟುಂಬಸ್ಥರು ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT