ಬೆಂಗಳೂರಿನಲ್ಲಿ ಭಾನುವಾರ ದಾಖಲೆ ಪ್ರಮಾಣದಲ್ಲಿ 131.6 ಮಿಮೀ ಮಳೆಯಾಗಿದೆ. 
ಕರ್ನಾಟಕ

51 ವರ್ಷಗಳಲ್ಲಿ 2ನೇ ದಾಖಲೆಯ ಗರಿಷ್ಠ ಮಳೆ: ಸತತ ಮಳೆಯಿಂದಾಗಿ ಸಿಲಿಕಾನ್ ಸಿಟಿ ನಿವಾಸಿಗಳು ಹೈರಾಣು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುವಂತೆಯೇ ಈ ಹಿಂದಿನ ದಾಖಲೆಗಳನ್ನೂ ಕೂಡ ಮುರಿಯುತ್ತಾ ಸಾಗಿದೆ.

ಇದು ನಗರವು ದಾಖಲಿಸಿದ ಮೂರನೇ ಅತಿ ಹೆಚ್ಚು ಏಕದಿನ ಮಳೆಯಾಗಿದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 1988ರಲ್ಲಿ ಒಂದೇ ದಿನದಲ್ಲಿ 18 ಸೆಂ.ಮೀ ಮಳೆಯಾಗಿದ್ದು, 2014ರಲ್ಲಿ 132.3 ಮಿ.ಮೀ ಮಳೆ ದಾಖಲಾಗಿತ್ತು.
ಉತ್ತರ ಒಳಭಾಗ ಮತ್ತು ಕನ್ಯಾಕುಮಾರಿ ನಡುವೆ ಇರುವ ತೊಟ್ಟಿ ಮತ್ತು ಕನ್ಯಾಕುಮಾರಿ ಮತ್ತು ನೆರೆಯ ಪ್ರದೇಶಗಳ ಮೇಲೆ ವಾಯು ಚಂಡಮಾರುತ ನೆಲೆಗೊಂಡಿದ್ದು, ಪರಿಚಲನೆಯಿಂದಾಗಿ ಭಾರಿ ಮಳೆಯಾಗುತ್ತಿದೆ.
ಪ್ರಮುಖವಾಗಿ ತಮಿಳುನಾಡು, ಕೇರಳ ಮತ್ತು ದಕ್ಷಿಣ ಒಳನಾಡಿನ ರಾಜ್ಯಗಳು ಮುಂದಿನ ಕೆಲವು ದಿನಗಳವರೆಗೆ ಮಳೆ ಬೀಳಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ವಿಚಾರವಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆ 51 ವರ್ಷಗಳಲ್ಲಿ ಬಿದ್ದ 2ನೇ ದಾಖಲೆಯ ಗರಿಷ್ಠ ಮಳೆಯಾಗಿದೆ.
ನಗರದಲ್ಲಿ 1971ರಲ್ಲಿ ಮಳೆಗಾಲದಲ್ಲಿ 725 ಮಿ.ಮೀ. ಮಳೆಯಾಗಿತ್ತು.
ಈ ವರ್ಷ ಸೆಪ್ಟೆಂಬರ್‌ನಲ್ಲಿ ಈಗಾಗಲೇ 709 ಮಿ.ಮೀ. ಮಳೆಯಾಗಿದ್ದು, ಇದು 51 ವರ್ಷಗಳಲ್ಲಿ ಎರಡನೇ ದಾಖಲೆ ಮಳೆಯಾಗಿದೆ ಎಂದಿದ್ದಾರೆ.
ಆಗಸ್ಟ್‌ 31ರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಅತಿಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ.
ಪೂರ್ವ ಹಾಗೂ ಬೊಮ್ಮನಹಳ್ಳಿ ಭಾಗದಲ್ಲಿ ಹೆಚ್ಚಾಗಿ ಮಳೆಯಾಗಿದ್ದು, ಸೆಪ್ಟೆಂಬರ್‌ವರೆಗೆ ಸಾಮಾನ್ಯವಾಗಿ ಈ ಭಾಗದಲ್ಲಿ 313 ಮಿ.ಮೀ. ಮಳೆಯಾಗುತ್ತಿತ್ತು.
ಆದರೆ, 709 ಮಿ.ಮೀ. ಮೀಟರ್‌ ಆಗಿದೆ. 1998 ಹೊರತುಪಡಿಸಿದರೆ ನಗರದಲ್ಲಿ ಅತಿ ಹೆಚ್ಚು ಮಳೆಯಾಗಿರುವುದು ಇದೇ ವರ್ಷ.
1975ರಲ್ಲಿ ಒಟ್ಟಾರೆ 725 ಮಿ.ಮೀ. ಮಳೆಯಾಗಿತ್ತು. 1971ರ ನಂತರ ಅತಿಹೆಚ್ಚು ಮಳೆ ಇದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದು ಕಳೆದ 32 ವರ್ಷಗಳಲ್ಲಿ (1992-93) ಅತಿ ಹೆಚ್ಚು ಮಳೆಯಾಗಿದೆ.
ಬೆಂಗಳೂರಿನ 164 ಕೆರೆಗಳು ನೀರಿನಿಂದ ತುಂಬಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೋಮವಾರ ನಗರದ ರೈನ್ ಬೋ ಲೇಔಟ್ ನಲ್ಲಿನ ನಿವಾಸಿಗಳು ಮತ್ತು ಇಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗಳನ್ನು ತಲುಪಲು ಹರಸಾಹಸಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT