ಶ್ರೀದೇವಿ
ಪಂಚಭಾಷಾ ನಟಿ ಶ್ರೀದೇವಿಯವರು ಹೃದಯಾಘಾತದಿಂದ ಫೆ.24 ರಂದು ವಿಧಿವಶರಾಗಿದ್ದರು. ಶ್ರೀದೇವಿಯವರಿಗೆ 54 ವರ್ಷ ವಯಸ್ಸಾಗಿತ್ತು. 
 
ಇತರೆ

ಹಿನ್ನೋಟ 2018: ನಮ್ಮನ್ನಗಲಿದ ಗಣ್ಯರು, ಪ್ರಮುಖರು

ರೀಟಾ ಬಾಧುರಿ 
ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಹಿಂದಿ ಚಿತ್ರರಂಗದ ಹಿರಿಯ ಪೋಷಕ ನಟಿ ರೀಟಾ ಬಾಧುರಿಯವರು ಜುಲೈ.17 ರಂದು ವಿಧಿವಶರಾಗಿದ್ದರು. ರೀಟಾ ಅವರಿಗೆ 62 ವರ್ಷ ವಯಸ್ಸಾಗಿತ್ತು. 
ತರುಣ್ ಸಾಗರ ಮಹಾರಾಜ್
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೈನ ದಿಗಂಬರ ಮುನಿ ತರುಣ್ ಸಾಗರ್ ಮಹಾರಾಜ್ ಅವರು ಸೆಪ್ಟೆಂಬರ್ 1 ರಂದು ಇಹಲೋಕ ತ್ಯಜಿಸಿದ್ದರು, ತರುಣ್ ಸಾಗರ್ ಮಹಾರಾಜ್ ಅವರಿಗೆ 51 ವರ್ಷ ವಯಸ್ಸಾಗಿತ್ತು. 
ಅನಂತ್ ಕುಮಾರ್ 
ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ನವೆಂಬರ್ 12 ರಂದು ವಿಧಿವಶರಾಗಿದ್ದರು. ಅನಂತ್ ಕುಮಾರ್ ಅವರಿಗೆ 59 ವರ್ಷ ವಯಸ್ಸಾಗಿತ್ತು. 
ಬ್ರಿಗೇಡಿಯರ್ ಕುಲ್'ದೀಪ್ ಸಿಂಗ್ ಚಂದ್ಪುರಿ
ಸುದೀರ್ಘ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ 1971ರ ಪಾಕಿಸ್ತಾನದ ವಿರುದ್ಧದ ಲೊಂಗೇವಾಲಾ ಕದನದ ಹೀರೋ ಕುಲ್ದೀಪ್ ಸಿಂಗ್ ಚಾಂದ್ಪುರಿಯವರು ನವೆಂಬರ್ 17 ರಂದು ನಿಧನ ಹೊಂದಿದ್ದರು. ಕುಲ್ದೀಪ್ ಅವರಿಗೆ 77 ವರ್ಷ ವಯಸ್ಸಾಗಿತ್ತು. 
ಸಿ.ಕೆ.ಜಾಫರ್ ಷರೀಫ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ಅವರು, ನವೆಂಬರ್ 25ರಂದು ವಿಧಿವಶರಾಗಿದ್ದರು. ಷರೀಫ್ ಅವರಿಗೆ 85 ವರ್ಷ ವಯಸ್ಸಾಗಿತ್ತು. 
ಹೆಚ್.ಎಸ್ ಪ್ರಕಾಶ್
ಹೃದಯಾಘಾತದಿಂದಾಗಿ ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಹೆಚ್.ಎಸ್. ಪ್ರಕಾಶ್ ಅವರು ನವೆಂಬರ್ 27 ರಂದು ನಿಧನ ಹೊಂದಿದ್ದರು, ಪ್ರಕಾಶ್ ಅವರಿಗೆ 67 ವರ್ಷ ವಯಸ್ಸಾಗಿತ್ತು. 
ಮಧುಕರ್ ಶೆಟ್ಟಿ
ಖಡಕ್ ಐಪಿಎಸ್ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದ ಮಧುಕರ್ ಶೆಟ್ಟಿಯವರು ಹೆಚ್1ಎನ್1 ಸೋಂಕಿನಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಡಿ.28 ರಂದು ನಿಧನ ಹೊಂದಿದ್ದರು. ಮಧುಕರ್ ಅವರಿಗೆ 47 ವರ್ಷ ವಯಸ್ಸಾಗಿತ್ತು. 
ಕಾಶಿನಾಥ್
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಜನವರಿ 18 ರಂದು ಇಹಲೋಕ ತ್ಯಜಿಸಿದ್ದರು. ಕಾಶಿನಾಥ್ ಅವರಿಗೆ 65 ವರ್ಷ ವಯಸ್ಸಾಗಿತ್ತು. 

ನಂದಮೂರಿ ಹರಿಕೃಷ್ಣ
ತೆಲುಗು ಚಿತ್ರರಂಗದ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಪುತ್ರ ನಂದಮೂರಿ ಹರಿಕೃಷ್ಣ ಅವರು ಭೀಕರ ರಸ್ತೆ ಅಪಘಾತದಲ್ಲಿ ಆಗಸ್ಟ್ 29 ರಂದು ಮೃತಪಟ್ಟಿದ್ದರು. ಹರಿಕೃಷ್ಣ ಅವರಿಗೆ 61 ವರ್ಷ ವಯಸ್ಸಾಗಿತ್ತು
ಎ.ಆರ್.ಬಾಬು
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಿರ್ದೇಶಕ ಎ.ಆರ್.ಬಾಬು ಅವರು ಡಿಸೆಂಬರ್ ತಿಂಗಳಿನಲ್ಲಿ ವಿಧಿವಶರಾಗಿದ್ದರು. 
ಸದಾಶಿವ ಬ್ರಹ್ಮಾವರ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರು ಸೆಪ್ಟೆಂಬರ್ 20 ರಂದು ವಿಧಿವಶರಾಗಿದ್ದರು. ಬ್ರಹ್ಮಾವರ್ ಅವರಿಗೆ 90 ವರ್ಷ ವಯಸ್ಸಾಗಿತ್ತು. 
ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಜೂನ್ 19 ರಂದು ನಿಗೂಢವಾಗಿ ಸಾವನ್ನಪ್ಪಿದ್ದರು, ಲಕ್ಷ್ಮೀವರ ಸ್ವಾಮೀಜಿಗಳಿಗೆ 54 ವರ್ಷ ವಯಸ್ಸಾಗಿತ್ತು. 
ಶುಜಾತ್ ಬುಖಾರಿ
ರೈಸಿಂಗ್ ಕಾಶ್ಮೀರ್ ಪತ್ರಿಕೆ ಸಂಪಾದಕ ಶುಜಾತ್ ಬುಖಾರಿಯವರನ್ನು ಜೂನ್ 14 ರಂದು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿತ್ತು. ಬುಖಾರಿಯವರಿಗೆ 50 ವರ್ಷ ವಯಸ್ಸಾಗಿತ್ತು. 
ಸಿದ್ದು ಬಿ. ನ್ಯಾಮಗೌಡ
ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ಅಕಾಲಿಕ ಮರಣವನ್ನಪ್ಪಿದ್ದರು. ಸಿದ್ದು ನ್ಯಾಮಗೌಡ ಅವರಿಗೆ 60 ವರ್ಷ ವಯಸ್ಸಾಗಿತ್ತು. 
ಎಂ.ಕರುಣಾನಿಧಿ
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಮಿಳುನಾಡಿನ ಡಿಎಂಕೆ ವರಿಷ್ಠ, ದ್ರಾವಿಡ ನಾಯಕ ಎಂ.ಕರುಣಾನಿಧಿಯವರು ಆಗಸ್ಟ್ 7 ರಂದು ಇಹಲೋಕ ತ್ಯಜಿಸಿದ್ದರು. ಕರುಣಾನಿಧಿಯವರಿಗೆ 94 ವರ್ಷ ವಯಸ್ಸಾಗಿತ್ತು. 
ಅಟಲ್ ಬಿಹಾರಿ ವಾಜಪೇಯಿ
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಮಂತ್ರಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರು ಆಗಸ್ಟ್ 16 ರಂದು ಇಹಲೋಕ ತ್ಯಜಿಸಿದ್ದರು. ವಾಜಪೇಯಿಯವರಿಗೆ 93 ವರ್ಷ ವಯಸ್ಸಾಗಿತ್ತು. 
ಅಂಬರೀಷ್
ಹೃದಯಾಘಾತದಿಂದಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ನವೆಂಬರ್ 24 ರಂದು ನಿಧನ ಹೊಂದಿದ್ದರು, ಅಂಬರೀಷ್ ಅವರಿಗೆ 66 ವರ್ಷ ವಯಸ್ಸಾಗಿತ್ತು. 
ಸೂಲಗಿತ್ತಿ ನರಸಮ್ಮ
ಸುಮಾರು 15 ಸಾವಿರ ಸಾಂಪ್ರದಾಯಿಕ ಹೆರಿಗೆಗಳನ್ನು ಮಾಡಿಸಿದ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಪ್ರಸೂತಿ ತಜ್ಞೆ ಸೂಲಗಿತ್ತ ನರಸಮ್ಮ ಅವರು ವಯೋಸಹದ ಕಾಯಿಲೆಯಿಂದ ಡಿ.25 ರಂದು ಮೃತಪಟ್ಟಿದ್ದರು. ನರಸಮ್ಮ ಅವರಿಗೆ 98 ವರ್ಷ ವಯಸ್ಸಾಗಿತ್ತು. 
ಅವಾ ಮುಖರ್ಜಿ 
ಹಿಂದಿ ಹಾಗೂ ಬಂಗಾಳಿ ಸಿನಿಮಾಗಳಲ್ಲಿ ಅಭಿನಿಯಿಸಿದ್ದ ಅವಾ ಮುಖರ್ಜಿಯವರು ವಯೋಸಹಜ ಕಾಯಿಲೆಯಿಂದ ಜ.16 ರಂದು ವಿಧಿವಶರಾಗಿದ್ದರು. ಅವಾ ಮುಖರ್ಜಿಯವರಿಗೆ 88 ವರ್ಷ ವಯಸ್ಸಾಗಿತ್ತು. 
ಕೆ.ಎಸ್. ಪುಟ್ಟಣ್ಣಯ್ಯ
ರೈತಪರ ಧೀಮಂತ ನಾಯಕ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಹೃದಯಾಘಾತದಿಂದ ಫೆ.18 ರಂದು ಇಹಲೋಕ ತ್ಯಜಿಸಿದ್ದರು, ಪುಣ್ಣಯ್ಯ ಅವರಿಗೆ 68 ವರ್ಷ ವಯಸ್ಸಾಗಿತ್ತು. 
ಸ್ಟೀಫನ್ ಹಾಕಿಂಗ್
ಸ್ನಾಯುಚಾಲಕ ನರಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಬ್ರಿಟಿಷ್ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ಮಾರ್ಚ್ ನಿಧನ ಹೊಂದಿದ್ದರು, ಸ್ಟೀಫನ್ ಅವರಿಗೆ 76 ವರ್ಷ ವಯಸ್ಸಾಗಿತ್ತು. 
ವಿನು ಚಕ್ರವರ್ತಿ
ಸುದೀರ್ಘೀ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಖ್ಯಾತ ತಮಿಳು ನಟ ಹಾಗೂ ಬರಹಗಾರ ವಿನು ಚಕ್ರವರ್ತಿಯವರು ಏಪ್ರಿಲ್ 27 ರಂದು ಕೊನೆಯುಸಿರೆಳೆದಿದ್ದರು. ವಿನು ಅವರಿಗೆ 71 ವರ್ಷ ವಯಸ್ಸಾಗಿತ್ತು. 
ಜಾರ್ಜ್ ಬುಷ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ ಬುಷ್ ಅವರು ಏಪ್ರಿಲ್ 17 ರಂದು ನಿಧನ ಹೊಂದಿದ್ದರು, ಜಾರ್ಜ್ ಬುಷ್ ಅವರಿಗೆ 73 ವರ್ಷ ವಯಸ್ಸಾಗಿತ್ತು. 
ಪಿ.ಎನ್. ಸತ್ಯ
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪಿ.ಎನ್ ಸತ್ಯ ಅವರು ಮೇ.5 ರಂದು ವಿಧಿವಶರಾಗಿದ್ದರು. ಸತ್ಯ ಅವರಿಗೆ 46 ವರ್ಷ ವಯಸ್ಸಾಗಿತ್ತು. 
ಅಕ್ಕಿ ಚೆನ್ನಬಸಪ್ಪ 
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಕ್ಕಿ ಚೆನ್ನಬಸಪ್ಪ ಅವರು ಮೇ.15 ರಂದು ಮೃತಪಟ್ಟಿದ್ದರು. ಚೆನ್ನಬಸಪ್ಪ ಅವರಿಗೆ 90 ವರ್ಷ ವಯಸ್ಸಾಗಿತ್ತು. 
ಲೋಕನಾಥ್
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಅವರು ಡಿ.31 ರಂದು ವಿಧಿವಶರಾದರು. ಲೋಕನಾಥ್ ಅವರಿಗೆ 90 ವರ್ಷ ವಯಸ್ಸಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!