ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ವ್ಯಕ್ತಿ ಎನ್ನುವ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್, ಈಗ ಅಂತರಿಕ್ಷದಲ್ಲಿಯೂ ಅತಿ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಓಟದಲ್ಲಿ 8 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್, ಗುರುತ್ವಾಕರ್ಷಣೆಯೇ ಇರದ ವಿಶೇಷ ಏರ್ ಬಸ್ಸಿನಲ್ಲಿ ಓಡುವ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.ಫ್ರೆಂಚ್ ಗಗನಯಾತ್ರಿ ಜೀನ್ ಫ್ರಾಂಕೋಯಿಸ್ ಮತ್ತು ನೊವ್‍ಸ್ಪೇಸ್ ಓಕ್ಟಾವ್ ಡೆ ಗೌಲೆ ಬೋಲ್ಟ್ ಜೊತೆಗೆ ಸ್ಪರ್ಧಿಸಿದ್ದರಾದರೂ, ಬೋಲ್ಟ್ ಅವರನ್ನು ಹಿಂದಿಕ್ಕಲು ವಿಫಲರಾಗಿದ್ದಾರೆ.ಓಟದ ಆರಂಭದಲ್ಲಿ ಓಡಲು ತಿಣುಕಾಡಿದ ಬೋಲ್ಟ್ ಬಳಿಕ ಎದ್ದು ಬಿದ್ದು, ಗುರಿ ಮುಟ್ಟಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics