ದೊಡ್ಡ ಅವಕಾಶಗಳು ಲಭಿಸಿದಾಗ ನಾವು ದೊಡ್ಡ ಸವಾಲುಗಳನ್ನು ಎದುರಿಸಬೇಕಾದದ್ದು ಸಹಜ. ನಾವು ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಮತ್ತು ಸಮಸ್ಯೆಗಳು ನಮ್ಮ ಮೇಲೆ ಸವಾರಿ ಮಾಡಲೇಬಾರದು.
ನಿದ್ದೆ ಮಾಡುವಾಗ ಬರುವುದು ಕನಸಲ್ಲ. ನಿದ್ದೆ ಮಾಡಲು ಬಿಡದಿರುವುದು ನಿಜವಾದ ಕನಸು
ವೃತ್ತಿಜೀವನದ ತುತ್ತತುದಿಗೆ ಏರುವವರು ಯಾವತ್ತೂ ತಮ್ಮ ತಾದಾತ್ಮ್ಯವನ್ನು ಕೆಲಸದ ಮೇಲೆ ಕೇಂದ್ರ ಬಿಂದುವನ್ನಾಗಿಸಿ ದುಡಿಯುತ್ತಾರೆ. ಹೀಗೆ ಸಂಪೂರ್ಣ ತೊಡಗಿಸಿಕೊಂಡ ಬಳಿಕ ಯಾವುದೇ ಇನ್ನಿತರ ಇಚ್ಛೆಗಳಿಗೆ ಆಸ್ಪದ ಇಲ್ಲ.
Advertisement
Advertisement
ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ.
ಹೊಸ ಸಾಹಸದಲ್ಲಿ ಮುಂದುವರಿಯುವಾಗ ಅತೀವ ಪರಿಪೂರ್ಣತೆಯನ್ನು ಹಿಂಬಾಲಿಸುವುದು ಬಹಳ ವೆಚ್ಚದಾಯಕ. ತಪ್ಪುಗಳಾಗುವುದು ಅಥವಾ ಹಿಂದೆಂದೂ ತೆಗೆದುಕೊಳ್ಳದ ನಿರ್ಧಾರಗಳನ್ನು ತೆಗೆದುಕೊಂಡು ತೊಂದರೆಗೊಳಗಾಗುವುದು ಸಹಜ.
ಯಾವ ಸಂದರ್ಭದಲ್ಲಿಯೂ ನಾನು ದೇವರಲ್ಲಿ ನಂಬಿಕೆ ಇರಿಸಿ ಅವನೊಂದಿಗೆ ಸಹಭಾಗಿತ್ವವನ್ನು ಕಲ್ಪಿಸಿಕೊಳ್ಳುವ ವ್ಯಕ್ತಿ. ಉತ್ತಮ ಕೆಲಸಕ್ಕಾಗಿ ಹೆಚ್ಚು ಶಕ್ತಿ ಬೇಕು. ಇದನ್ನು ಈ ದೇವರೇ ನೀಡಬೇಕು.
ಯಾವ ವಿಷಯಗಳು ನಿಮ್ಮನ್ನು ಘಾಸಿಗೊಳಿಸುವವೋ ಅವು ನಿಮಗೆ ಶಿಕ್ಷಣವನ್ನೂ ಕೊಡುತ್ತದೆ
ಸತ್ಯದ ಅನ್ವೇಷಣೆಯನ್ನು ಮಾಡು, ಸತ್ಯವೇ ನಿನಗೆ ಸ್ವಾತಂತ್ರ್ಯ ಕೊಡುತ್ತದೆ
ಕೇವಲ ತಾತ್ಕಾಲಿಕ ಅಥವಾ ಸುಲಭದಲ್ಲಿ ಸಿಗುವ ಯಶಸ್ಸಿಗೆ ಮರುಳಾಗದಿರಿ. ಶಾಶ್ವತ ಯಶಸ್ಸು ಪಡೆಯಲು ಸದಾ ನಿಷ್ಠೆಯಿಂದ ಪ್ರಯತ್ನ ಮಾಡಬೇಕು.