ದೇಶ

ಗೂಗಲ್ 2020: ಕಂಗನಾಗಿಂತ ಕಿಮ್ ಜಾಂಗ್ ಉನ್ ಬಗ್ಗೆ ಹೆಚ್ಚು ಸರ್ಚ್ ಮಾಡಿದ ಭಾರತೀಯರು

Lingaraj Badiger
ಸರ್ಚ್ ಇಂಜಿನ್ ಗೂಗಲ್ ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ಮೊದಲ ಸ್ಥಾನದಲ್ಲಿದ್ದಾರೆ.
ಸರ್ಚ್ ಇಂಜಿನ್ ಗೂಗಲ್ ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ಮೊದಲ ಸ್ಥಾನದಲ್ಲಿದ್ದಾರೆ.
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಸ್ಟಾರ್ ಕಲಾವಿದರ ಹಿಂದಿಕ್ಕಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತೀಯರು ಬಾಲಿವುಡ್ ನಟಿ ಕಂಗನಾ ರನೌತ್ ಗಿಂತ ಹೆಚ್ಚು ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್(4ನೇ ಸ್ಥಾನ) ಅವರನ್ನು ಸರ್ಚ್ ಮಾಡಿದ್ದಾರೆ.
ಗೂಗಲ್ ಸರ್ಚ್‌ನಲ್ಲಿ ಅಮಿತಾಭ್ ಬಚ್ಚನ್ ಐದನೇ ಸ್ಥಾನದಲ್ಲಿದ್ದು, ಬಿಗ್ ಬಿಗೆ ಕೊರೊನಾ ಸೋಂಕು ತಗುಲಿತ್ತು. ಅಮಿತಾಭ್, ಅಭಿಷೇಕ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್‌ಗೂ ಸೋಂಕು ತಗುಲಿತ್ತು. ಈ ಕಾರಣದಿಂದ ಬಿಗ್ ಬಿ ಭಾರಿ ಸುದ್ದಿಯಲ್ಲಿದ್ದರು.
6ನೇ ಸ್ಥಾನದಲ್ಲಿ ಅಘ್ಘಾನ್ ಸ್ಪಿನ್ ಬೌಲರ್ ರಶೀದ್ ಖಾನ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂರ್ ಸಾವಿನ ಬಳಿಕ ಹೆಚ್ಚು ಸದ್ದು ಮಾಡಿದ ನಟಿ ರಿಯಾ ಚಕ್ರವರ್ತಿ ಏಳನೇ ಸ್ಥಾನದಲ್ಲಿದ್ದಾರೆ.
8ನೇ ಸ್ಥಾನದಲ್ಲಿ ಅಮೆರಿಕದ ನಿಯೋಜಿತ ಉಪಾಧ್ಯಕ್ಷ ಕಮಲಾ ಹ್ಯಾರಿಸ್
9ನೇ ಸ್ಥಾನದಲ್ಲಿ ಬಾಲಿವುಡ್ ನಟಿ ಅಂಕಿತಾ ಲೋಖಂಡೆ
10ನೇ ಸ್ಥಾನದಲ್ಲಿ ಕಂಗನಾ ರನೌತ್
SCROLL FOR NEXT