ದೇಶ

ಮಹಿಳಾ ದಿನಾಚರಣೆ: ಭಾರತ ರತ್ನ ಪಡೆದ 5 ಮಹಿಳೆಯರು ಇವರು

Srinivas Rao BV
1966-77, 1980-84 ವರೆಗೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಗೆ 1971 ರಲ್ಲಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
1966-77, 1980-84 ವರೆಗೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರಿಗೆ 1971 ರಲ್ಲಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮದರ್ ತೆರೇಸಾಗೆ 1980 ರಲ್ಲಿ ಮದರ್ ತೆರೇಸಾಗೆ ಭಾರತ ರತ್ನ ನೀಡಲಾಯಿತು, ಅವರು ಸ್ಥಾಪಿಸಿದ್ದ ಮಿಷನರಿಸ್ ಫಾರ್ ಚಾರಿಟಿ ವಿಶ್ವವಿಖ್ಯಾತವಾದದ್ದು. ಬಡವರು, ಅನಾಥರಿಗಾಗಿ ಅವರು ಸಲ್ಲಿಸಿದ್ದ ಸೇವೆಯನ್ನು ಗುರುತಿಸಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.
ಅರುಣಾ ಆಸೀಫ್ ಅಲಿ ಅವರಿಗೆ 1997 ರಲ್ಲಿ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಅರುಣಾ ಆಸೀಫ್ ಅಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾರತದ ಧ್ವಜ ಹಾರಿಸಿದ್ದ ಧೀರ ಮಹಿಳೆ, ಸ್ವತಂತ್ರ ಭಾರತದಲ್ಲಿ ದೆಹಲಿಯ ಮೊದಲ ಮೇಯರ್ ಕೂಡ ಹೌದು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸುಬ್ಬುಲಕ್ಷ್ಮಿ ಅವರ ಸಾಧನೆ ಅನನ್ಯವಾದದ್ದು. 1998 ರಲ್ಲಿ ಸುಬ್ಬುಲಕ್ಷ್ಮಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ.
ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜರಾದ ಲತಾ ಮಂಗೇಶ್ಕರ್, ಗಾಯನ ಕ್ಷೇತ್ರದಲ್ಲಿ ಸುಬ್ಬುಲಕ್ಷ್ಮಿ ಅವರ ನಂತರ ಭಾರತ ರತ್ನ ಪಡೆದ ಎರಡನೇ ಮಹಿಳಾ ಸಾಧಕಿ.2001 ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿ ಬಂದಿದೆ.
SCROLL FOR NEXT