ಫೆ.03 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿನ ಯಲಹಂಕಾ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ-2021 ಕ್ಕೆ ಚಾಲೆನೆ ನೀಡಿದ್ದರು.
ಏರೋ ಇಂಡಿಯಾ ಶೋ-2021 ರಲ್ಲಿ ಲಘು ಯುದ್ಧ ವಿಮಾನ ತೇಜಸ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಉದ್ಘಾಟನೆಯ ದಿನದಂದು 48,000 ಕೋಟಿ ರೂಪಾಯಿ ವೆಚ್ಚದಲ್ಲಿ 83 ತೇಜಸ್ ವಿಮಾನಗಳ ಖರೀದಿಗೆ ಹೆಚ್ಎಎಲ್-ಕೇಂದ್ರ ಸರ್ಕಾರದ ನಡುವೆ ಒಪ್ಪಂದ ನಡೆದಿದೆ.ಏರೋ ಇಂಡಿಯಾ ಪ್ರದರ್ಶನಕ್ಕೆ ಎರಡನೇ ದಿನವಾದ ಫೆ.04 ರಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದು ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ್ದು ವಿಶೇಷವಾಗಿತ್ತು.ಕೇಂದ್ರ ಸರ್ಕಾರ ಹೆಚ್ಎಎಲ್ ನಿಂದ 48,000 ಕೋಟಿ ರೂ ವೆಚ್ಚದಲ್ಲಿ ತೇಜಸ್ ವಿಮಾನಗಳನ್ನು ಖರೀದಿಸಲು ನಿರ್ಧರಿಸಿರುವುದಕ್ಕೆ ತೇಜಸ್ವಿ ಸೂರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.ವಾಯು ಸೇನಾ ಸಿಬ್ಬಂದಿಯೊಂದಿಗೆ ತೇಜಸ್ವಿ ಸೂರ್ಯತೇಜಸ್ವಿ ಸೂರ್ಯ ಸುಮಾರು 30 ನಿಮಿಷಗಳ ಕಾಲ ತೇಜಸ್ ಯುದ್ಧ ವಿಮಾನದಲ್ಲಿದ್ದರುದೇಶೀಯವಾಗಿ ತಯಾರಾಗಿರುವ ತೇಜಸ್ ವಿಮಾನವನ್ನು ಖರೀದಿಸುವ ಮೂಲಕ ಬೆಂಗಳೂರು ನಗರವನ್ನು ವಿಶ್ವಮಟ್ಟದ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದ ಅಗ್ರಗಣ್ಯ ನಗರವನ್ನಾಗಿ ಮಾರ್ಪಡಿಸಲು ಪಣತೊಟ್ಟಿರುವ ಸರ್ಕಾರದ ಕ್ರಮವನ್ನು ಸಂಸದರು ಸ್ವಾಗತಿಸಿದ್ದಾರೆ.ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷಿ ಯೋಜನೆ ''ಮೇಕ್ ಇನ್ ಇಂಡಿಯಾ'' ಗೆ ಉತ್ತೇಜನ ಸಿಗಲಿದೆ ಎಂದು ಸಂಸದರು ಇದೇ ವೇಳೆ ಹೇಳಿದ್ದಾರೆ.48000 ಕೋಟಿ ರೂಪಾಯಿ ಯೋಜನೆಯಿಂದ 600 ಸಂಸ್ಥೆಗಳು ಅಥವಾ ಎಂಎಸ್ಎಂಇ ಗಳು ಯುದ್ಧ ವಿಮಾನ ತಯಾರಿಕೆಯಲ್ಲಿ ತೊಡಗಲಿವೆ. ಬೆಂಗಳೂರಿನಲ್ಲಿ ಕೈಗಾರಿಕೆಗಳು ಸುಧಾರಣೆಯಾಗಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.ತೇಜಸ್ ಕನಸು ನನಸಾಗುವುದಕ್ಕೆ ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರಿಗೂ ತೇಜಸ್ವಿ ಸೂರ್ಯ ಇದೇ ವೇಳೆ ಧನ್ಯವಾದ ಅರ್ಪಿಸಿದ್ದಾರೆತೇಜಸ್ ಯುದ್ಧವಿಮಾನವನ್ನು ಹೆಚ್ಚು ರಫ್ತು ಮಾಡುವ ಮೂಲಕ ವಿಶ್ವ ದರ್ಜೆಯ ಬ್ರಾಂಡ್ ನ್ನಾಗಿಸಬೇಕೆಂದು ತೇಜಸ್ವಿ ಸೂರ್ಯ ಕರೆ ನೀಡಿದ್ದಾರೆ.