ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ: ಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ. 
ದೇಶ

ಪ್ರೇಮ ಕಾಶ್ಮೀರ: ದಲ್ ಸರೋವರದ ವಿಹಂಗಮ ಫೋಟೋಗಳು 

ಭಾರತೀಯರ ಪಾಲಿಗೆ 'ಭೂಲೋಕದ ಸ್ವರ್ಗ' ಎಂದೇ ಪರಿಗಣಿಸಲ್ಪಡುವ ಕಾಶ್ಮೀರದ ದಲ್ ಸರೋವರದಲ್ಲಿ ದೋಣಿ ಯಾನ ಕೈಗೊಳ್ಳುವುದೇ ಅಭೂತಪೂರ್ವ ಅನುಭವ. ಶ್ರೀನಗರದಲ್ಲಿ ನೆಲೆಗೊಂಡಿರುವ ದಲ್ ಸರೋವರ ನಮಗೆ ದಾಲ್ ಎಂದೇ ಪರಿಚಿತ. ಆದರೆ, ಅಸಲಿಗೆ ಅದು ದಲ್ ಸರೋವರ. ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದಶಕಗಳಿಂದ ಜನರು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಚಿತ್ರ- ಬರಹ: ಹರ್ಷವರ್ಧನ್ ಸುಳ್ಯ

ಸರೋವರ ಕೇವಲ ಪ್ರವಾಸಿ ತಾಣ ಮಾತ್ರವಲ್ಲ ನೀರ ಮೇಲೆ ದೋಣಿಗಳಲ್ಲೇ ಜನರು ಮನೆಗಳನ್ನು ಕಟ್ಟಿಕೊಂಡು ದಶಕಗಳಿಂದ ವಾಸಿಸುತ್ತಿದ್ದಾರೆ.
ಸರೋವರದಲ್ಲಿ ಬೋಟ್ ಹೌಸ್ ಗಳಿದ್ದು, ಪ್ರವಾಸಿಗರು ಅಲ್ಲಿ ತಂಗಬಹುದು. ಅವುಗಳು ಹೋಟೆಲ್ ಗಳಂತೆಯೇ ಕಾರ್ಯಾಚರಿಸುತ್ತವೆ.
ಸೂರ್ಯೋದಯ, ಮತ್ತು ಸೂರ್ಯಾಸ್ತ ಸಮಯದಲ್ಲಿ ಶಿಕರಾ ರೈಡ್ ಹೋಗುವ ಮಜವೇ ಬೇರೆ.
ದಲ್ ಸರೋವರದಲ್ಲಿ ಬೋಟ್ ರೈಡ್ ಅನ್ನು ಶಿಕರಾ ರೈಡ್ ಎನ್ನಲಾಗುತ್ತದೆ.
ದಲ್ ಸರೋವರದ ಮಧ್ಯೆ ರೆಸ್ಟೋರೆಂಟ್ ಇದೆ.
ದಲ್ ಸರೋವರದ ಮೇಲೆ ವಾಸಿಸುತ್ತಿರುವ ಜನರಿಗೆ ಪುಟ್ಟ ದೋಣಿಗಳೇ ಸಾರಿಗೆ.
ದೈನಂದಿನ ಕೆಲಸಗಳಿಗಾಗಿ ಸಂಚರಿಸಲು ಪ್ರತಿ ಮನೆಯವರೂ ಸ್ವಂತ ದೋಣಿ ಇಟ್ಟುಕೊಂಡಿರುತ್ತಾರೆ.
ಪ್ರವಾಸಿ ಸ್ಥಳಗಳಲ್ಲಿ ಮಾರಾಟಗಾರರು ಪ್ರವಾಸಿಗರನ್ನು ಮುತ್ತಿಗೆ ಹಾಕುವಂತೆ ಇಲ್ಲಿ ದೋಣಿಗಳಲ್ಲಿ ಮಾರಾಟಗಾರರು ಪ್ರವಾಸಿಗರನ್ನು ಮುತ್ತಿಕೊಳ್ಳುತ್ತಾರೆ.
ಸರೋವರದ ಮಧ್ಯೆಯೇ ಅಂಗಡಿ, ಶಾಪಿಂಗ್ ಕೇಂದ್ರಗಳಿವೆ. ಇವುಗಳು ನೀರಿನಲ್ಲಿ ಚಲಿಸದಂತೆ ಗೂಟ ಹೊಡೆದು ಭದ್ರ ಮಾಡಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ