ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಚಂಡೀಗಢದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಡಾ ಗುರ್ ಪ್ರೀತ್ ಕೌರ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಚಂಡೀಗಢದ ಅವರ ನಿವಾಸದಲ್ಲಿ ನೆರವೇರಿದ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವರು ಸಾಕ್ಷಿಯಾದರು.48 ವರ್ಷದ ಭಗವಂತ್ ಮಾನ್ ವೃತ್ತಿಯಲ್ಲಿ ವೈದ್ಯೆಯಾಗಿರುವ ಗುರ್ ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದು ಇದು ಕುಟುಂಬದ ಹಿರಿಯರು ನೋಡಿ ನಿಶ್ಚಯಿಸಿದ ಮದುವೆಯಾಗಿದೆ.ವಿವಾಹ ಕಾರ್ಯಕ್ರಮದ ಸಂಪ್ರದಾಯದಲ್ಲಿ ಗಣ್ಯರುಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವಾಹ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.32 ವರ್ಷದ ಗುರ್ಪೀತ್ ಕೌರ್ ಅವರನ್ನು ಸಿಎಂ ಭಗವಂತ್ ಮಾನ್ ತನ್ನ ತಾಯಿಯ ಇಚ್ಛೆಯಂತೆ ವಿವಾಹವಾಗುತ್ತಿದ್ದಾರೆ. ತಮ್ಮ ಮೊದಲ ಪತ್ನಿಯಿಂದ 6 ವರ್ಷಗಳ ಹಿಂದೆ ಮಾನ್ ವಿಚ್ಛೇದನ ಪಡೆದಿದ್ದರು.Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics