ಪ್ರಧಾನಿ ನರೇಂದ್ರ ಮೋದಿ 44 ನೇ ಚೆಸ್ ಒಲಂಪಿಯಾಡ್ ನ್ನು ಚೆನ್ನೈ ನಲ್ಲಿ ಘೋಷಿಸಿದ್ದು, ರಾಜ್ಯ ಸರ್ಕಾರ ತಮಿಳು ಸಂಸ್ಕೃತಿಯ ಹಬ್ಬದ ಆಚರಣೆ ಮಾಡಿತು.
ತಮಿಳುನಾಡು ಚೆಸ್ ನೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು ಚೆಸ್ ನ ದೇವರೆಂದೇ ಖ್ಯಾತರಾಗಿರುವ ಚದುರಂಗ ವಲ್ಲಭನಾಥರ್ ಅವರನ್ನು ಉಲ್ಲೇಖಿಸಿದ್ದಾರೆ.ಚೆಸ್ ಒಲಂಪಿಯಾಡ್ ಸಂಘಟಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಚೆಸ್ ಮೂಲ ಹೊಂದಿರುವ ಭಾರತದಲ್ಲಿ ಇದು ಮೊದಲ ಒಲಂಪಿಯಾಡ್ ಆಗಿದೆ ಎಂದು ಹೇಳಿದ್ದಾರೆ.ಈ ಕಾರ್ಯಕ್ರಮ ಓಪನ್ ವಿಭಾಗದಲ್ಲಿ (188) ದಾಖಲೆಯ ಪ್ರಮಾಣದ ಮಹಿಳೆಯರ ವಿಭಾಗದಲ್ಲಿ (162) ಪ್ರವೇಶವನ್ನು ಕಂಡಿದೆ.ದೇಶಾದ್ಯಂತ ಸಂಚರಿಸಿದ ಚೆಸ್ ಟಾರ್ಚ್ ನ್ನು ಚೆಸ್ ಲೆಜೆಂಡ್ ವಿಶ್ವನಾಥನ್ ಆನಂದ್ ಅವರು ಸಿಎಂ ಸ್ಟ್ಯಾಲಿನ್ ಗೆ ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ಎಫ್ಐಡಿಇ ಗೀತೆಯನ್ನು ಹಾಡಲಾಯಿತು. ಭಾಗವಹಿಸುವವರಿಂದ ಪ್ರತಿಜ್ಞಾ ವಿಧಿ ಪ್ರಕ್ರಿಯೆ ನಡೆಯಿತು. ರಾಜ್ಯಪಾಲರಾದ ಆರ್ ಎನ್ ರವಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಎಲ್ ಮುರುಗನ್ ಎಫ್ ಐಡಿಇ ಅಧ್ಯಕ್ಷ ಅರ್ಕಾಡಿ ವ್ಲಾಡಿಮಿರೊವಿಚ್ ಡ್ವೊರ್ಕೊವಿಚ್ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಸಂಜೆಯ ಮನರಂಜನೆ ಸಮಯದಲ್ಲಿ ತಮಿಳುನಾಡಿನ ಪುರಾತನ ಸಂಸ್ಕೃತಿಯ ಪ್ರದರ್ಶನ ಕೇಂದ್ರಬಿಂದುವಾಗಿತ್ತು.ಸಂಗೀತಗಾರ ಲಿಡಿಯನ್ ನಾದಸ್ವರಮ್ ಪಿಯಾನೋದಲ್ಲಿ ಜನಪ್ರಿಯ ರಾಗಗಳನ್ನು ನುಡಿಸುವ ಮೂಲಕ ಜನರ ಗಮನ ಸೆಳೆದರು.44 ನೇ ಚೆಸ್ ಒಲಂಪಿಯಾಡ್ ನಲ್ಲಿ ಡಿಎಂಕೆ ಸಂಸದೆ ಕನಿಮೋಳಿ, ಉದಯನಿಧಿ ಸ್ಟ್ಯಾಲಿನ್, ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.ಚೆಸ್ ಒಲಂಪಿಯಾಡ್ ಆಯೋಜನೆಯ ಹಿಂದೆ 4 ತಿಂಗಳ ಪರಿಶ್ರಮವಿದೆ ಎಂದು ಸಿಎಂ ಸ್ಟ್ಯಾಲಿನ್ ಹೇಳಿದರು.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos