ದೇಶ

ಅಸ್ಸಾಂನಲ್ಲಿ ಭೀಕರ ಪ್ರವಾಹ: 33 ಜಿಲ್ಲೆಗಳಲ್ಲಿ ನೆರೆ: ಸಂಕಷ್ಟದಲ್ಲಿ 43 ಲಕ್ಷ ಜನ, 70 ಸಾವು

Srinivasamurthy VN
ಒಟ್ಟು 43 ಲಕ್ಷ ಜನರು ಪ್ರವಾಹದ ತೊಂದರೆಗಳಿಗೆ ಈಡಾಗಿದ್ದು, ಪ್ರವಾಹದಿಂದಾಗಿ ಸಂಭವಿಸಿದ ವಿವಿಧ ದುರಂತಗಳಲ್ಲಿ ಈವರೆಗೂ 70 ಮಂದಿ ಸಾವಿಗೀಡಾಗಿದ್ದಾರೆ.
ಒಟ್ಟು 43 ಲಕ್ಷ ಜನರು ಪ್ರವಾಹದ ತೊಂದರೆಗಳಿಗೆ ಈಡಾಗಿದ್ದು, ಪ್ರವಾಹದಿಂದಾಗಿ ಸಂಭವಿಸಿದ ವಿವಿಧ ದುರಂತಗಳಲ್ಲಿ ಈವರೆಗೂ 70 ಮಂದಿ ಸಾವಿಗೀಡಾಗಿದ್ದಾರೆ.
ಹಲವಾರು ಕಡೆ ಸಂಭವಿಸಿರುವ ಭೂ ಕುಸಿತದಿಂದಾಗಿ ಸೋಮವಾರ ಒಂದೇ ದಿನ 8 ಜನ ಸಾವನ್ನಪ್ಪಿದ್ದಾರೆ.
ಜಲಾವೃತವಾಗಿರುವ ಹಲವಾರು ಪ್ರದೇಶಗಳಲ್ಲಿ ಆಹಾರ ಕಿಟ್‌ಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ಸರಬರಾಜು ಮಾಡುವಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆದೇಶಿಸಿದ್ದಾರೆ.
ಜೂ. 19ರಂದು ಚಿರಾಪುಂಜಿಯಲ್ಲಿ 24 ಗಂಟೆಗಳಲ್ಲಿ 252.6 ಮಿ.ಮೀ.ನಷ್ಟು ಮಳೆಯಾಗಿದ್ದು ಇದು ಹೊಸ ದಾಖಲೆಯಾಗಿದೆ.
ಕಳೆದ 8 ದಿನಗಳಿಂದಲೂ ಇಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಎಂಟು ದಿನಗಳ‌ಲ್ಲಿ 3,539.9 ಮಿ.ಮೀ. ಮಳೆ ಬಿದ್ದಿದೆ.
ಮೇಘಾಲಯದ ಮವಿಂನ್‌ರಾಮ್‌ ಪ್ರಾಂತದಲ್ಲಿ ಶನಿವಾರ-ರವಿವಾರ ನಡುವಿನ 24 ಗಂಟೆಗಳಲ್ಲಿ 1,003.6 ಮಿ.ಮೀ.ನಷ್ಟು ಮಳೆ ಬಿದ್ದಿದೆ.
ಆ ಮೂಲಕ ಮವಿಂನ್‌ರಾಮ್‌ ಪ್ರಾಂತ ತನ್ನ 83 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಬುಲೆಟಿನ್ ಪ್ರಕಾರ, 33 ಜಿಲ್ಲೆಗಳಲ್ಲಿ 127 ಕಂದಾಯ ವಲಯಗಳು ಮತ್ತು 5,137 ಹಳ್ಳಿಗಳು ಕಳೆದ ಒಂದು ವಾರದಿಂದ ವಿನಾಶಕಾರಿ ಪ್ರವಾಹದಲ್ಲಿ ತತ್ತರಿಸಿವೆ.
ಕೇಂದ್ರ ಜಲ ಆಯೋಗದ ಬುಲೆಟಿನ್ ಪ್ರಕಾರ ನಾಗಾವ್ ಜಿಲ್ಲೆಯ ಕಂಪುರದಲ್ಲಿ ಕೊಪಿಲಿ ನದಿಯು ಹೆಚ್ಚಿನ ಪ್ರವಾಹದ ಮಟ್ಟದಿಂದ ಹರಿಯುತ್ತಿದೆ.
ಪ್ರವಾಹದಲ್ಲಿ ಸಿಲುಕಿದ ಇಬ್ಬರನ್ನು ರಕ್ಷಣೆ ಮಾಡುವ ಸಲುವಾಗಿ ಹೋಗಿದ್ದ ಇಬ್ಬರು ಪೊಲೀಸ್‌ ಸಿಬಂದಿ ತಾವೇ ಪ್ರವಾಹಕ್ಕೆ ಬಲಿಯಾಗಿರುವ ಘಟನೆ ಅಸ್ಸಾಂನ ನಗಾಂವ್‌ ಜಿಲ್ಲೆಯಲ್ಲಿ ನಡೆದಿದೆ.
ಜಲಾವೃತಗೊಂಡ ಪ್ರದೇಶದಲ್ಲಿನ ಜನರನ್ನು ಕಾಪಾಡಲು ಹೋಗಿದ್ದ ಇಬ್ಬರು ಪೊಲೀಸ್‌ ಅಧಿಕಾರಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.
ಕಾಮುರ್‌ ಪೊಲೀಸ್‌ ಠಾಣಾ ಅಧಿಕಾರಿ ಸಮ್ಮುಜಲ್‌ ಕಾಕೋಟಿ ಹಾಗೂ ಮತ್ತೂಬ್ಬ ಪೇದೆ ಮೃತರು.
SCROLL FOR NEXT