ಗುಜರಾತ್​ನ ಮೊರ್ಬಿಯ ಶತಮಾನಗಳಷ್ಟು ಹಳೆಯದಾದ ಸೇತುವೆ ನವೀಕರಣಗೊಂಡ ಐದು ದಿನಗಳಲ್ಲೇ ಕುಸಿದು ಬಿದ್ದ ಘಟನೆ ಭಾನುವಾರ ಸಂಜೆ 6-30 ರ ಸುಮಾರಿನಲ್ಲಿ ನಡೆದಿದೆ. 
ದೇಶ

ಗುಜರಾತ್ ನಲ್ಲಿ ಮೋರ್ಬಿ ಸೇತುವೆ ಕುಸಿತ, ಮೃತರ ಸಂಖ್ಯೆ 140ಕ್ಕೆ ಏರಿಕೆ: ದುರಂತದ ಫೋಟೋಗಳು!

ಗುಜರಾತ್​ನ ಮೊರ್ಬಿಯ ಶತಮಾನಗಳಷ್ಟು ಹಳೆಯದಾದ ಸೇತುವೆ ನವೀಕರಣಗೊಂಡ ಐದು ದಿನಗಳಲ್ಲೇ ಕುಸಿದು ಬಿದ್ದ ಘಟನೆ ಭಾನುವಾರ ಸಂಜೆ 6-30 ರ ಸುಮಾರಿನಲ್ಲಿ ನಡೆದಿದೆ.

ಸೇತುವೆಗೆ ಬೆಂಬಲವಾಗಿ ಕಟ್ಟಲಾಗಿದ್ದ ಕೇಬಲ್ ಕಳಚಿ ಬಿದ್ದಾಗ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 400 ಜನರಿದ್ದರು. ಇವರೆಲ್ಲರೂ ಸೇತುವೆ ಕೆಳಗಿನ ನದಿಗೆ ಬಿದಿದ್ದಾರೆ.
ಖಾಸಗಿ ಸಂಸ್ಥೆಯೊಂದರಿಂದ ಏಳು ತಿಂಗಳ ಕಾಲ ನವೀಕರಣ ನಂತರ ಪುನರ್ ಆರಂಭವಾದ ಕೇವಲ ಐದು ದಿನಗಳಲ್ಲಿಯೇ ಸೇತುವೆ ಕುಸಿದು ಬಿದ್ದಿದ್ದು, ಈ ದುರಂತದಲ್ಲಿ 132 ಜನರು ಸಾವನ್ನಪ್ಪಿದ್ದಾರೆ.
ಸೋಮವಾರ ಸೇತುವೆ ಕುಸಿತ ದುರಂತ ಸಂಭವಿಸಿದ ಸ್ಥಳದಲ್ಲಿ ರಕ್ಷಣೆ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಸ್ವಯಂ ಸೇವಕರು ಹಾಗೂ ಆರೋಗ್ಯ ಕಾರ್ಯಕರ್ತರು ಮೃತದೇಹಗಳನ್ನು ನದಿ ಮೇಲಿಂದ ಹೊರಗೆ ತರುತ್ತಿದ್ದಾರೆ.
ಸೇತುವೆ ಕುಸಿದ ಬಿದ್ದು ಅನೇಕ ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಗುಜರಾತ್ ಸಿಎಂ ಭೂಪೇಂದ್ರ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ರಕ್ಷಣಾ ತಂಡದಿಂದ ದುರಂತದಲ್ಲಿ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆಯ ಚಿತ್ರ
ಸೋಮವಾರ ಸೇತುವೆ ಮುರಿದ ಭಾಗಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು
ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ತಂಡಗಳು
ಕೇಬಲ್ ಸೇತುವೆ 1.25 ಮೀಟರ್ ಅಗಲವಿದ್ದು, 233 ಮೀಟರ್ ವಿಸ್ತ್ರೀರ್ಣವನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT