ಒಡಿಶಾ ಪುರಿ ಜಗನ್ನಾಥನ ವಾರ್ಷಿಕ 'ರಥ ಜಾತ್ರೆ' ಮಂಗಳವಾರ ಸಾವಿರಾರು ಭಕ್ತರು ಸಮುದ್ರ ತೀರದ ಯಾತ್ರಾರ್ಥಿ ಪಟ್ಟಣದಲ್ಲಿ ಸೇರಿ ಭಕ್ತಿಯಿಂದ ಮಿಂದೇಳುವ ಮೂಲಕ ಆರಂಭವಾಗಿದೆ. ಒಡಿಶಾ ಸರ್ಕಾರವು ಆ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿದ್ದು ಸಾಕಷ್ಟು ಬಂದೋಬಸ್ತ್ ಏರ್ಪಡಿಸಿದೆ.
ಪುರಿ ಜಗನ್ನಾಥನ ರಥಯಾತ್ರೆಯ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಗೃಹ ಸಚಿವರು ಮತ್ತು ಒಡಿಶಾ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಶುಭಕೋರಿದ್ದು, ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.ದೆಹಲಿಯ ಹೌಜ್ ಖಾಸ್‌ನಲ್ಲಿರುವ ಜಗನ್ನಾಥ ಮಂದಿರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಮೆರಿಕ ಪ್ರವಾಸ ಕೈಗೊಂಡಿದ್ದು ಟ್ವಿಟರ್‌ನಲ್ಲಿ ಪ್ರಾರ್ಥನೆ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ಜಗನ್ನಾಥ ರಥ ಯಾತ್ರೆಯ ಶುಭಾಶಯಗಳು. ನಾವು ಈ ಪವಮಹಾಪ್ರಭು ಜಗನ್ನಾಥರ ರಥ ಜಾತ್ರಾ ಸಂದರ್ಭದಲ್ಲಿ, ಒಡಿಶಾದ ಪುರಿ ಬೀಚ್‌ನಲ್ಲಿ 250 ತೆಂಗಿನಕಾಯಿಗಳ ಸ್ಥಾಪನೆಯೊಂದಿಗೆ ಮರಳಿನಲ್ಲಿ ಕಲೆ ರಚಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್ಬಣ್ಣಬಣ್ಣದ ಉಡುಪುಗಳೊಂದಿಗೆ ಪುರಿಯ ಜಗನ್ನಾಥ ದೇವಸ್ಥಾನದ ಮುಂದೆ ರಥದ ಮುಂದೆ ನೃತ್ಯ ಮಾಡುತ್ತಿರುವ ಕಲಾವಿದರುಕಲಾವಿದರ ನೃತ್ಯದ ಭಂಗಿಪುರಿ ಜಗನ್ನಾಥನ ಬೀದಿಗಳಲ್ಲಿ ಮೇಳೈಸಿದ ಕಲೆಯಾತ್ರೆಗೆ ಸಜ್ಜಾಗಿರುವ ರಥರಥ ಯಾತ್ರೆ ಆರಂಭದಲ್ಲಿ ರಸ್ತೆಯಲ್ಲಿ ಸೇರಿದ ಜನಸ್ತೋಮಕಲಾವಿದರ ಭಾವಭಂಗಿ