ಪ್ರಧಾನಿ ಮೋದಿ ರಾಮಯಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. 
ದೇಶ

ಐತಿಹಾಸಿಕ ಲೇಪಾಕ್ಷಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ಮೋದಿ ರಾಮಯಣದಲ್ಲಿ ಉಲ್ಲೇಖವಾಗಿರುವ ಐತಿಹಾಸಿಕ ಲೇಪಾಕ್ಷಿಯ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ತೆಲುಗಿನಲ್ಲಿರುವ ರಂಗನಾಥ ರಾಮಾಯಣದ ಪದ್ಯಗಳನ್ನೂ ಆಲಿಸಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು.
ಈ ವೇಳೆ ಪ್ರಧಾನಿ ಮೋದಿ ತೆಲುಗಿನಲ್ಲಿರುವ ರಂಗನಾಥ ರಾಮಾಯಣದ ಪದ್ಯಗಳನ್ನೂ ಆಲಿಸಿದರು.
ರಾಮಾಯಣ ಹಾಗೂ ಶಿವನ ಕತೆಗಳಿಗೆ ಕುರುಹಾಗಿ ನಿಂತಿರುವ ಲೇಪಾಕ್ಷಿ ಅದ್ಭುತ ಶಿಲ್ಪಕಲೆಗಳ ತವರೂರು.
ತಾಯಿ ಸೀತೆಯನ್ನು ಅಪಹರಿಸುತ್ತಿದ್ದ ರಾವಣನೊಂದಿಗೆ ಹೋರಾಡಿದ ಜಟಾಯು ತೀವ್ರವಾಗಿ ಗಾಯಗೊಂಡ ನಂತರ ಬಿದ್ದ ಸ್ಥಳವೇ ಲೇಪಾಕ್ಷಿ ಎಂದು ಹೇಳಲಾಗುತ್ತದೆ.
ಸಾಯುವ ಹಂತದಲ್ಲಿ ಇಲ್ಲಿ ಬಿದ್ದ ಜಟಾಯುವನ್ನು ನೋಡಿದ ರಾಮ, ಸ್ಥಳೀಯ ಭಾಷೆಯಲ್ಲಿ ಎದ್ದೇಳು ಪಕ್ಷಿಯೇ ಎನ್ನಲು 'ಲೇ ಪಕ್ಷಿ' ಎನ್ನುತ್ತಾನೆ. ನಂತರದ ದಿನಗಳಲ್ಲಿ ಇದೇ ಲೇಪಾಕ್ಷಿಯಾಗುತ್ತದೆ.
ಅಲ್ಲಿಗೆ ಭೇಟಿ ನೀಡಿದ ರಾಮನಿಗೆ ಮಾತೆ ಸೀತೆಯನ್ನು ರಾವಣನು ದಕ್ಷಿಣಕ್ಕೆ ಕರೆದೊಯ್ದನೆಂದು ಹೇಳಿ ಜಟಾಯುವು ಇದೇ ಜಾಗದಲ್ಲಿ ಮೋಕ್ಷವನ್ನು ಪಡೆಯುತ್ತಾನೆ.
ಇನ್ನು ಇಲ್ಲಿ 8 ಅಡಿ ಉದ್ದದ ಪಾದದ ಗುರುತೊಂದನ್ನು ಕಾಣಬಹುದಾಗಿದ್ದು, ಇದು ಸೀತಾ ಮಾತೆಯ ಪಾದದ ಗುರುತು ಎಂದು ನಂಬಲಾಗಿದೆ. ಗುಪ್ತ ಮೂಲದಿಂದ ಬಂದ ನೀರು ಇಲ್ಲಿ ಯಾವಾಗಲೂ ಇರುತ್ತದೆ.
ಇದೇ ಲೇಪಾಕ್ಷಿ ವೀರಭದ್ರಸ್ವಾಮಿ ದೇವಾಲಯದಲ್ಲಿ ಶಿವ ಪಾರ್ವತಿ ವಿವಾಹಕ್ಕಾಗಿ ನಿರ್ಮಿಸಿದ ಕಲ್ಯಾಣ ಮಂಟಪವನ್ನೂ ಕಾಣಬಹುದು. ಕಾರಣಾಂತರಗಳಿಂದ ಇಲ್ಲಿ ವಿವಾಹವಾಗಲಿಲ್ಲ ಎಂದು ಹೇಳಲಾಗಿದೆ.
ಇಲ್ಲಿರುವ ಏಳು ಹೆಡೆಯ ನಾಗವು ಶಿವಲಿಂಗಕ್ಕೆ ಸುತ್ತಿರುವಂಥ ನಾಗಲಿಂಗ ಶಿಲ್ಪವು ಜನಪ್ರಿಯವಾಗಿದೆ.
ಇವೆಲ್ಲವುಗಳ ಹೊರತಾಗಿ ದೇಶದಲ್ಲೇ ಅತಿ ದೊಡ್ಡ ನಂದಿ ವಿಗ್ರಹವನ್ನು ಕೂಡಾ ಇಲ್ಲಿ ಕಾಣಬಹುದು.
ಆ೦ಧ್ರಪ್ರದೇಶದ ಅನ೦ತಪುರ ಜಿಲ್ಲೆಯಲ್ಲಿರುವ ಹಿ೦ದೂಪುರ್ ನಿ೦ದ 15 ಕಿ.ಮೀ. ಗಳಷ್ಟು ದೂರದಲ್ಲಿ ಮತ್ತು ಬೆ೦ಗಳೂರು ನಗರದಿ೦ದ ಸರಿಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿದೆ ಲೇಪಾಕ್ಷಿ.
ಅಯೋಧ್ಯೆ ರಾಮಮಂದಿರ ಉದ್ಘಧಾಟನೆಗೆ ಕೇವಲ ಇನ್ನು 6 ದಿನ ಮಾತ್ರ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಲೇಪಾಕ್ಷಿಗೆ ಭೇಟಿ ನೀಡಿದ್ದಾರೆ.
ಲೇಪಾಕ್ಷಿ ದೇಗುಲ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿಕೆ ಶಿವಕುಮಾರ್

ದೆಹಲಿಯ ಮೆಹ್ರೌಲಿಯಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ!

ಸಿದ್ದರಾಮಯ್ಯಗೆ ವಿಶ್ರಾಂತಿ ನೀಡಲ್ಲ, ಅವರ ಸೇವೆ ಇನ್ನೂ ಅಗತ್ಯವಿದೆ: CLP ಸಭೆಯಲ್ಲಿ ವೇಣುಗೋಪಾಲ್ ಭಾವುಕ

ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ: ಡಿಕೆಶಿಗೆ ಸಿದ್ದು ಪತ್ರ!

ಲೋಕಭವನಕ್ಕೆ ತೆರಳಿದ ಡಿ.ಕೆ ಶಿವಕುಮಾರ್: ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ; ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣವಚನ!

SCROLL FOR NEXT