ರಾಜಕೀಯ

ಭಾಗ್ಯ ಸರಣಿಗೆ ಅಂಕುಶ?

ವಿತ್ತೀಯ ಕೊರತೆಗೆ 'ತಡೆಗೋಡೆ' ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 'ಭಾಗ್ಯ ಸರಣಿ'..,.

ಬೆಂಗಳೂರು: ವಿತ್ತೀಯ ಕೊರತೆಗೆ 'ತಡೆಗೋಡೆ' ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ 'ಭಾಗ್ಯ ಸರಣಿ' ಜನಪ್ರಿಯ ಯೋಜನೆಗಳನ್ನು ಕೈ ಬಿಡುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ಸಿದ್ಧರಾಮಯ್ಯ ಮುಖ್ಯಮಂತ್ರಿ ಆದ ನಂತರ ಮಂಡಿಸಿರುವ ಎರಡು ಬಜೆಟ್‌ಗಳಲ್ಲಿ ಭಾಗ್ಯ  ಸರಣಿಗೆ ಯಥೇಚ್ಛ ಸಬ್ಸಿಡಿ ನೀಡಲಾಗಿದೆ. ಅನ್ನಭಾಗ್ಯ, ಕ್ಷೀರ ಭಾಗ್ಯ,  ದಂತ ಭಾಗ್ಯ, ಶಾದಿ ಭಾಗ್ಯ, ವಿದ್ಯಾಸಿರಿ, ಸಾಲಮನ್ನಾ ಸೇರಿದಂತೆ ಜನಪ್ರಿಯ ಯೋಜನೆಗಳ ಮಹಾಪೂರವನ್ನೇ ಸರ್ಕಾರ ಹರಿಸಿದೆ. ಆದರೆ, ಇದರಿಂದ ಬೊಕ್ಕಸ ಬರಿದಾಗಿದ್ದನ್ನು ಬಿಟ್ಟರೆ ಸರ್ಕಾರಕ್ಕೆ ಮತವೂ ಬಂದಿಲ್ಲ, ಮಟ್ಟವೂ ಹೆಚ್ಚಿಲ್ಲ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಇನ್ನು ಮುಂದೆ ಹೊಸ ಜನಪ್ರಿಯ ಯೋಜನೆಗಳನ್ನು ಘೋಷಿಸುವಾಗ ಎಚ್ಚರಿಕೆ ವಹಿಸುವಂತೆ ಸ್ಪಷ್ಟ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಜೆಟ್ ಸಿದ್ಧತೆಗೆ ಅಧಿಕೃತ ಚಾಲನೆ  ನೀಡಿರುವ ಸಿಎಂ ಸಿದ್ಧರಾಮಯ್ಯ, ಆರ್ಥಿಕ ಇಲಾಖೆ ಮೂಲಕ ಎಲ್ಲ ಇಲಾಖೆಗಳಿಗೆ ಸೂಚನಾ ಪತ್ರ ಕಳುಹಿಸಿದ್ದು, 2013-14ನೇ ಸಾಲಿನ ಸಾಧನೆ, ಖರ್ಚು, ವೆಚ್ಚ ಹಾಗೂ ಹೊಸ ಯೋಜನೆಗಳ ಬಗ್ಗೆ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಲ ಇಲಾಖೆಗಳಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸರ್ಕಾರಿ ನೌಕರರಿಗೆ ಪ್ರಸಕ್ತ ಸಾಲಿನಲ್ಲಿ ನೀಡುವ ಸಂಬಳ ಪಟ್ಟಿ ವಿಶ್ಲೇಷಣೆಯೊಂದಿಗೆ ಬಜೆಟ್ ಸಿದ್ಧತೆಗೆ ಅಧಿಕೃತ ಚಾಲನೆ ದೊರಕಿದೆ. ಇನ್ನು ನಾಲ್ಕೈದು ದಿನಗಳಲ್ಲಿ  ಎಲ್ಲ ಇಲಾಖೆಗಳಿಂದಲೂ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದ್ದು, ನಂತರ ಇಲಾಖಾವಾರು, ಸಂಘ ಸಂಸ್ಥೆಗಳು ಮತ್ತು ಆರ್ಥಿಕ ತಜ್ಞರ ಜತೆ ಸಿದ್ಧರಾಮಯ್ಯ ಚರ್ಚೆ ಆರಂಭಿಸಲಿದ್ದಾರೆ.

ಈ ವರ್ಷವೂ ಕೊರತೆ: ಕಳೆದ ಸಾಲಿನಲ್ಲಿ ರು.1.20 ಲಕ್ಷ ಕೋಟಿ ಮೊತ್ತದ ಬಜೆಟ್ ನ್ನು ಸಿಎಂ ಸಿದ್ಧರಾಮಯ್ಯ ಮಂಡಿಸಿದ್ದರು. 2014-15 ನೇ ಸಾಲಿನಲ್ಲಿ ಶೇ. 13.55 ರಷ್ಟು ರಾಜಸ್ವ ತೆರಿಗೆ ಹೆಚ್ಚಳ ಗುರಿಯೊಂದಿಗೆ ರು. 69870 ಕೋಟಿ ನಿರೀಕ್ಷೆ ಮಾಡಲಾಗಿತ್ತು. ತೆರಿಗೆಯೇತರ ರಾಜಸ್ವದಿಂದ ರು. 4473 ಕೋಟಿ ಸಂಗ್ರಹ ಗುರಿ ಇತ್ತು.  ಕೇಂದ್ರ ತೆರಿಗೆ ರೂಪದಲ್ಲಿ ರು.16560 ಕೋಟಿ ಮತ್ತು ರು. 20135 ಕೋಟಿ ಕೇಂದ್ರ ಸರ್ಕಾರದ ಸಹಾಯಧನ ನಿರೀಕ್ಷೆ ಮಾಡಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಕೇಂದ್ರದಿಂದ ಬರಬೇಕಾದ ಅನುದಾನ ಪ್ರಮಾಣ ಕಡಿಮೆಯಾಗುವುದರ ಜತೆಗೆ ಕೇಂದ್ರ ತೆರಿಗೆಯಲ್ಲಿ ರಾಜ್ಯ ಪಡೆಯಬೇಕಾದ ಪಾಲು ಹೆಚ್ಚುವಂತೆ ಮಾಡುವ ಪುರಾತನ ಬೇಡಿಕೆ ಇನ್ನು ಜೀವಂತವಾಗಿದೆ.

ಇದೆಲ್ಲದಕ್ಕಿಂತ ಹೆಚ್ಚಾಗಿ ಜನಪ್ರಿಯ ಯೋಜನೆಗಳಿಗೆ ಹರಿಸಿದ ಅನುದಾನದ ಪ್ರಮಾಣ ಸರ್ಕಾರದ ರಾಜಸ್ವ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಕನ್ನ ಹಾಕಿದೆ. ಕಳೆದ ಬಜೆಟ್‌ನಲ್ಲಿ ಈ ಸಾಧ್ಯತೆ ನಿರೀಕ್ಷಿಸಿದ್ದ  ಸಿದ್ಧರಾಮಯ್ಯ ಉಳ್ಳವರಿಂದ ಕಿತ್ತು ಇಲ್ಲದವರಿಗ ಹಂಚುವ ಸೂತ್ರಕ್ಕೆ ಶರಣಾಗಿದ್ದರು. ತತ್ಪರಿಣಾಮವಾಗಿ ವಿಲಾಸಿ ತೆರಿಗೆ ಹೆಚ್ಚಿಸಲಾಗಿತ್ತು.  ಕ್ಲಬ್ , ವಸತಿಗೃಹ , ತಾರಾ ಹೋಟೆಲ್‌ಗಳಲ್ಲಿ ಮದ್ಯ  ಮಾರಾಟದ ಮೇಲೆ ಮೌಲ್ಯ ವರ್ಧಿತ ತೆರಿಗೆ ವಿಧಿಸಲಾಗಿತ್ತು. ಅಂಗಡಿ ಸ್ಥಳಾಂತರ ಸಂದರ್ಭದಲ್ಲಿ ಸನ್ನದು ಶುಲ್ಕವನ್ನು ಶೇ. 25ರಿಂದ ಶೇ.50ಕ್ಕೆ ಹೆಚ್ಚಿಸಲಾಗಿತ್ತು. ರಾಜಸ್ವ ಸಂಗ್ರಹಣೆಯಲ್ಲಿ ಬಹುತೇಕ ಪಾಲನ್ನು ಅಬಕಾರಿ ಇಲಾಖೆಯಿಂದ ನಿರೀಕ್ಷಿಸಲಾಗಿತ್ತು. ನೋಂದಣಿ ಮತ್ತು ಮುದ್ರಾಂತ  ಶುಲ್ಕ ಹೆಚ್ಚಿಸುವ ಮೂಲಕ ರು. 6450 ಕೋಟಿ ರಾಜಸ್ವ   ಸಂಗ್ರಹದ ಗುರಿ ಹೊಂದಲಾಗಿತ್ತು. ಇವುಗಳಲ್ಲಿ ಸರ್ಕಾರ ಬಹುಪಾಲು ಯಶ ಸಾಧಿಸಿದೆಯಾದರೂ ಭಾಗ್ಯ ಸರಣಿ ಯೋಜನೆಯಲ್ಲಿ ಕೂಡಿಸಿದ್ದೆಲ್ಲ ಕಳೆದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳನ್ನು ಕಡಿಮೆ ಮಾಡುವಂತೆ  ಸಿದ್ದರಾಮಯ್ಯನವರ ಚಿಂತಕರ ಚಾವಡಿ ಮತ್ತು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಸಬ್ಸಿಡಿ ಪ್ರಮಾಣ ಕಡಿಮೆ ಇರುತ್ತದೆ ಎಂದು ಹಣಕಾಸು ಅಲಾಖೆ ಮೂಲಗಳು ತಿಳಿಸಿವೆ.

ಇವುಗಳಿಂದ ಲೋಕಸಭಾ ಚುನಾವಣೆಯಲ್ಲೂ ಪಕ್ಷಕೆ ಹೆಚ್ಚಿನ ಅನುಕೂಲವಾಗಿಲ್ಲ. ಸಬ್ಸಿಡಿ ನೀಡುವುದಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡಿದರೆ 1980 ರ ಸುಮಾರಿಗೆ ಕಾಂಗ್ರೆಸ್ ಸರ್ಕಾರ ಅಂಟಿಸಿಕೊಂಡ ಕಳಂಕ ಮತ್ತೆ ಬರುತ್ತದೆ ಎಂಬ ಸಲಹೆಯನ್ನು ಬಜೆಟ್ ಸಿದ್ಧತೆಗೆ ಮು ಮುನ್ನವೇ ಸಿದ್ದರಾಮಯ್ಯನವರಿಗೆ ನೀಡಲಾಗಿದೆ. ಹೀಗಾಗಿ ಈ ಬಾರಿಯ ಬಜೆಟ್ ಸಿದ್ದರಾಮಯ್ಯಗೆ ಹಗ್ಗದ ಮೇಲಿನ ನಡಿಗೆ ಎಂಬುದರಲ್ಲಿ ಅನುಮಾನವಿಲ್ಲ.

-ರಾಘವೇಂದ್ರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!