ರಾಜಕೀಯ

ರಮ್ಯಾ ಶೀಘ್ರ ತವರಿಗೆ

Srinivasamurthy VN

ಮಂಡ್ಯ: ರಾಜಕೀಯ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೋಗಿರುವ ರಮ್ಯಾ ಡಿಸೆಂಬರ್ ತಿಂಗಳಲ್ಲಿ ತವರಿಗೆ ಮರಳಲಿದ್ದು, ಆಕೆ ಲಂಡನ್‌ನಲ್ಲಿಯೇ ನೆಲೆಸಲಿದ್ದಾಳೆ ಎಂಬುದು ಕೇವಲ ವದಂತಿ ಎಂದು ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಬುಧವಾರ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ತಿಂಗಳ ಹಿಂದೆ ರಾಜಕೀಯ ವಿಷಯದ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸುವ ಉದ್ದೇಶದಿಂದ ವಿದ್ಯಾಭ್ಯಾಸಕ್ಕಾಗಿ ರಮ್ಯಾ ಲಂಡನ್‌ಗೆ ತೆರಳಿದ್ದಾಳೆ. ಮೂರು ತಿಂಗಳ ಕೋರ್ಸ್ ಆಗಿದ್ದು, ಇದೇ ತಿಂಗಳು ಮುಕ್ತಾಯವಾಗಲಿದೆ. ಡಿಸೆಂಬರ್ ಮೊದಲ ವಾರದಲ್ಲೇ ತವರಿಗೆ ವಾಪಸಾಗಲಿದ್ದಾಳೆ. ಇದರ ಬಗ್ಗೆ ಯಾವ ಸಂಶಯವೂ ಬೇಡ ಎಂದು ಹೇಳಿದರು.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕೆಲವು ರಾಜಕೀಯ ಹಿತೈಷಿಗಳು ರಾಜಕೀಯ ವಿಷಯವಾಗಿ ವ್ಯಾಸಂಗ ಮಾಡುವಂತೆ ಸಲಹೆ ನೀಡಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿ ರಮ್ಯಾ ಲಂಡನ್‌ಗೆ ತೆರಳಿದ್ದಾಳೆ. ಚುನಾವಣೆಯಲ್ಲಿನ ಸೋಲಿನಿಂದ ಆಕೆ ನಿರಾಶಳಾಗಿಲ್ಲ. ರಾಜಕೀಯವಾಗಿ ರಮ್ಯಾ ಇನ್ನಷ್ಟು ಪ್ರಬುದ್ಧಳಾಗಬೇಕು ಎಂಬ ಆಸಕ್ತಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾಳೆ ಎಂದರು.

SCROLL FOR NEXT