ಗದಗ: ರಾಜ್ಯದಲ್ಲಿ ಬೇಹುಗಾರಿಕಾ ವಿಭಾಗಕ್ಕೆ ಶೀಘ್ರವೇ ಕಾಯಕಲ್ಪ ನೀಡಿ,ಅದನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು. ಇಲ್ಲಿನ ಜಿಲ್ಲಾ ಪೋಲೀಸ್ ವರಿಷ್ಠಾಧಿ ಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಹುಗಾರಿಕೆ ವಿಭಾಗದಲ್ಲಿ ಸದ್ಯಪೊ ಲೀಸರು ಕಾರ್ಯ ನಿರ್ವಹಿಸುತ್ತಿದ್ದು, ಇದನ್ನುಮತ್ತಷ್ಟು ಸಶಕ್ತಗೊಳಿಸುವ ಕುರಿತು ಮುಖ್ಯಮಂತ್ರಿಗಳ ಜತೆಚರ್ಚಿಸಲಾಗಿದೆ. ಪ್ರತ್ಯೇಕ ನೇಮಕ, ವಿಭಾಗಕ್ಕೆ ನೂತನ ತಂತ್ರಜ್ಞಾನ ಕಲ್ಪಿಸುವ ಚಿಂತನೆ ಮಾಡಲಾಗಿದೆ. ಶೀಘ್ರದಲ್ಲಿಯೇ ಕಾರ್ಯ ರೂಪಕ್ಕೆ ಬರಲಿದೆ ಎಂದರು. ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿ, ಈ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ ತಂತ್ರಜ್ಞರು, ಎಂಜಿನಿಯರ್ಗಳನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಜತೆ ಚರ್ಚಿಸಿ ಇದಕ್ಕೂ ಅಂತಿಮ ರೂಪ ನೀಡಲಾಗುವುದು ಎಂದರು.