ತಿಪಟೂರು: ದಲಿತ ಮುಖ್ಯಮಂತ್ರಿ ವಿಚಾರದಿಂದ ಕಾಂಗ್ರೆಸ್‍ನಲ್ಲಿನ ಒಳಜಗಳ ಬೀದಿಗೆ ಬಂದಿದ್ದು ಇದು ಯಾವಾಗ ಬೇಕಾದರೂ ಸ್ಪೋಟಗೊಳ್ಳಬಹುದು. ದುರಹಂಕಾರಿ ಮುಖ್ಯಮಂತ್ರಿ ತಕ್ಕ ಶಾಸ್ತಿ ಅನುಭವಿಸುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹೇಳಿದರು. ನಗರದ ಷಡಕ್ಷರ ಮಠದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸಶಕ್ತವಾಗಿದ್ದು 2018ರಲ್ಲಿ ರಾಜ್ಯದಲ್ಲಿ ಪುನಃ ಸರ್ಕಾರ ರಚಿಸಲಿದೆ. ಅರ್ಕಾವತಿ ಡಿನೋಟಿಫಿಕೇಶನ್ ಕುರಿತು ಪ್ರಬಲ ಕಾನೂನಾತ್ಮಕ ಹೋರಾಟ ಮುಂದುವರೆಸಿದ್ದು ರಾಜ್ಯಪಾಲರ ಅನುಮತಿಗಾಗಿ ಕಾಯುತ್ತಿದ್ದೇವೆ. ಬಿಜೆಪಿ ಸರ್ಕಾರ ಘೋಷಣೆ ಮಾಡಿದ ಸಾವಿರಾರು ಕೋಟಿ ರು. ಯೋಜನೆಗಳ ಮುಂದುವರಿದ ಭಾಗವನ್ನೇ ಕಾಂಗ್ರೆಸ್ ತನ್ನ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕತ್ವದ ಕುರಿತು ಗೊಂದಲ, ಅಸಮಾಧಾನದ ಗೂಡಾಗಿದೆ. ಸಿದ್ದರಾಮಯ್ಯ ತಮ್ಮ ದುರಹಂಕಾರಕ್ಕೆ ಕೆಲವೇ ಸಮಯದಲ್ಲಿ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದರು