ಚಿತ್ರದುರ್ಗ: ಭದ್ರಾ ಯೋಜನೆಯನ್ನು ರಾಜ್ಯಸರ್ಕಾರ ಮುಂದಿನ ಮೂರುವರೆ ವರ್ಷದಲ್ಲಿ ಪೂರ್ತಿ ಮಾಡಿದರೆ ತಾವು ರಾಜಕೀಯ ಸನ್ಯಾಸ ಸ್ವೀಕರಾ ಮಾಡುವುದಾಗಿ ವಿಧಾನ ಪರಿಷತ್ನ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಸವಾಲು ಹಾಕಿದ್ದಾರೆ.
ನಗರಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಧಿಕಾರದ ಅವಧಿಯಲ್ಲಿ ಭದ್ರ ಯೋಜನೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಯೋಜನೆ ಕುಂಟುತ್ತಾ ಸಾಗಿದೆ. ಯೋಜನೆಯನ್ನು ಶೀಘ್ರಗೊಳಿಸುವ ಇಚ್ಛಾ ಶಕ್ತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ನಾವು ನೀಡಿದ ಹಣವನ್ನು ಈಗಿನ ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಆರೋಪಿಸಿದರು.